ಚಳಿಗಾಲಕ್ಕೆ ಸೊಪ್ಪು-ತರಕಾರಿ ಖಾದ್ಯಗಳು

Team Udayavani, Jan 5, 2018, 1:01 PM IST

05-31.jpg

ಕ್ಯಾಬೇಜ್‌ (ಎಲೆಕೋಸು) ನೀರುಳ್ಳಿ ದೋಸೆ 
ಬೇಕಾಗುವ ಸಾಮಗ್ರಿ: ಅಕ್ಕಿ- 1 ಕಪ್‌, ಕ್ಯಾಬೇಜ್‌ ಚೂರು-1/2 ಕಪ್‌, ನೀರುಳ್ಳಿ ಚೂರು- 1/2 ಕಪ್‌, ಒಣ ಮೆಣಸಿನಕಾಯಿ 6-7, ರುಚಿಗೆ ಉಪ್ಪು , ಎಣ್ಣೆ- ದೋಸೆ ತೆಗೆಯಲು, ಹುಣಸೆಹಣ್ಣು ಗೋಲಿಗಾತ್ರ, ಕೊತ್ತಂಬರಿ-1 ಚಮಚ, ಕಾಯಿತುರಿ-1/2 ಕಪ್‌.

ತಯಾರಿಸುವ ವಿಧಾನ: ಅಕ್ಕಿಯನ್ನು ಎರಡು ಗಂಟೆ ನೀರಲ್ಲಿ ನೆನೆಸಿ ತೊಳೆದಿಡಿ. ಒಣಮೆಣಸು, ಹುಣಸೆಹಣ್ಣು , ಕೊತ್ತಂಬರಿ, ಕಾಯಿತುರಿ ಹಾಕಿ ರುಬ್ಬಿ ಅಕ್ಕಿ, ಉಪ್ಪು ಹಾಕಿ ಮತ್ತೆ ನಯವಾಗಿ ರುಬ್ಬಿ ಪಾತ್ರೆಗೆ ಹಾಕಿ ಕ್ಯಾಬೇಜ್‌ ಚೂರು, ನೀರುಳ್ಳಿ ಬೆರೆಸಿಡಿ. ದೋಸೆ ಕಾವಲಿಗೆ ಎಣ್ಣೆ ಹಾಕಿ ದೋಸೆ ಹಿಟ್ಟು ಹರಡಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಊಟದ ಹೊತ್ತಿಗೆ ಬಲು ರುಚಿ. ಸ್ವಲ್ಪ ಬೆಲ್ಲ ಹಾಕಿದ್ರೆ ಸಂಜೆ ಕಾಫಿಗೂ ಸ್ವಾದಿಷ್ಟವಾಗಿರುತ್ತದೆ.

ಬಾಳೆ ಬೊಂಬು (ತಿರುಳು) ದೋಸೆ
ಬೇಕಾಗುವ ಸಾಮಗ್ರಿ:
ಅಕ್ಕಿಹಿಟ್ಟು- 1 ಕಪ್‌, ಒಣಮೆಣಸಿನ ಹುಡಿ- 2 ಚಮಚ, ಉಪ್ಪು ರುಚಿಗೆ, ಸಣ್ಣಗೆ ಹೆಚ್ಚಿದ ಬಾಳೆ ತಿರುಳು- 1/2 ಕಪ್‌, ದೋಸೆ ತೆಗೆಯಲು ಎಣ್ಣೆ , ಹುಣಸೆಹಣ್ಣು ಸ್ವಲ್ಪ.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಉಪ್ಪು , ಮೆಣಸಿನ ಹುಡಿ, ಹುಣಸೆ ನೀರು, ಅಕ್ಕಿಹಿಟ್ಟು ಹಾಕಿ ಕಲಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬಾಳೆ ದಿಂಡಿನ ಚೂರು ಹಾಕಿ ಕಲಸಿ ದೋಸೆ ಹಿಟ್ಟಿನ ಹದ ಮಾಡಿ. ದೋಸೆ ಕಾವಲಿ ಬಿಸಿ ಮಾಡಿ ಎಣ್ಣೆ ಸವರಿ ದೋಸೆ ಹರಡಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಊಟದ ಹೊತ್ತಿಗೆ ಬಿಸಿ ಬಿಸಿ ದೋಸೆ ಸವಿಯಿರಿ.

ಮೆಂತ್ಯ ಸೊಪ್ಪಿನ ಸಜ್ಜಿಗೆ ರೊಟ್ಟಿ 
ಬೇಕಾಗುವ ಸಾಮಗ್ರಿ:
ಗೋಧಿ ರವೆ (ಸಜ್ಜಿಗೆ)- 1 ಕಪ್‌, ಗೋಧಿಹಿಟ್ಟು- 2 ಚಮಚ, ತೆಂಗಿನತುರಿ- 1/2 ಕಪ್‌, ಸಣ್ಣಗೆ ಹೆಚ್ಚಿನ ಮೆಂತ್ಯಸೊಪ್ಪು- 1/4 ಕಪ್‌, ಕೊತ್ತಂಬರಿ ಸೊಪ್ಪು ಸ್ವಲ್ಪ , ಮೆಣಸಿನಕಾಯಿ ಚೂರು, ಸಕ್ಕರೆ -2 ಚಮಚ, ಉಪ್ಪು ರುಚಿಗೆ, ರೊಟ್ಟಿ ತೆಗೆಯಲು ಎಣ್ಣೆ/ತುಪ್ಪ , ಹಸಿಶುಂಠಿ ಚೂರು ಸ್ವಲ್ಪ.

ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ನೀರು ಹಾಕಿ ಉಪ್ಪು , ಸಕ್ಕರೆ, ಮೆಂತ್ಯ ಸೊಪ್ಪಿನ ಚೂರು, ಮೆಣಸಿನಕಾಯಿ, ಹಸಿಶುಂಠಿ ಚೂರು ಹಾಕಿ ಸೌಟಿನಿಂದ ಕದಡಿ ಗೋಧಿಹಿಟ್ಟು, ಗೋಧಿ ಸಜ್ಜಿಗೆ ಹಾಕಿ, ತೆಂಗಿನ ತುರಿ ಹಾಕಿ ಬೆರೆಸಿ. ಹಿಟ್ಟು ದಪ್ಪಗಾದರೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ದೋಸೆ ಕಾವಲಿ ಕಾದ ಮೇಲೆ ಎಣ್ಣೆ ಹಾಕಿ ಸಜ್ಜಿಗೆ ರೊಟ್ಟಿ ಹಿಟ್ಟು ಹರಡಿ ಮುಚ್ಚಿ ತೆಗೆದು ಎರಡೂ ಕಡೆ ಕಾಯಿಸಿ ತೆಗೆಯಿರಿ. ಯಾವುದೇ ಚಟ್ನಿಯ ಅಗತ್ಯವಿಲ್ಲದೆ ಬೆಣ್ಣೆ ಹಾಕಿ ಹಾಗೆಯೇ ಸವಿಯಬಹುದು.

ಹರಿವೆ ಸೊಪ್ಪಿನ ಅಂಬಡೆ 
ಬೇಕಾಗುವ ಸಾಮಗ್ರಿ:
ಬೆಳ್ತಿಗೆ ಅಕ್ಕಿ- 1 ಕಪ್‌, ತೊಗರಿಬೇಳೆ-4 ಚಮಚ, ಒಣ ಮೆಣಸಿನ ಕಾಯಿ 6-7, ಸಣ್ಣಿಗೆ ಹೆಚ್ಚಿದ ಹರಿವೆ ಸೊಪ್ಪು- 2 ಕಪ್‌, ಹುಣಸೆಹಣ್ಣು ಸ್ವಲ್ಪ , ಉಪ್ಪು ರುಚಿಗೆ, ಕೊತ್ತಂಬರಿ- 1 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿ, ತೊಗರಿಬೇಳೆ ಒಟ್ಟಿಗೆ ಎರಡು ಗಂಟೆ ನೆನೆಸಿಡಿ. ಒಣಮೆಣಸಿನ ಕಾಯಿ, ಹುಣಸೆ ಹಣ್ಣು , ಉಪ್ಪು, ಕೊತ್ತಂಬರಿ ಹಾಕಿ ನಯವಾಗಿ ರುಬ್ಬಿ ತೆಗೆಯುವ ಮೊದಲು ಅಕ್ಕಿ-ತೊಗರಿಬೇಳೆ ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ ಪಾತ್ರೆಗೆ ಹಾಕಿ. ಹೆಚ್ಚಿದ ಹರಿವೆ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಎಣ್ಣೆ ಸವರಿದ ಎಲೆ ಇಲ್ಲವೆ ಪ್ಲೇಟ್‌ ಮೇಲೆ ಚಪ್ಪಟೆ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ 4-5 ಅಂಬಡೆ ಹಾಕಿ ಹದ ಉರಿಯಲ್ಲಿ ಎರಡೂ ಬದಿ ಕಾಯಿಸಿ ಟಿಶ್ಯೂ ಪೇಪರ್‌ ಮೇಲೆ ಹಾಕಿ. ರುಚಿಯಾದ ಆರೋಗ್ಯದಾಯಕ ಹರಿವೆಸೊಪ್ಪಿನ ಅಂಬಡೆ ತಯಾರು.

ಎಸ್‌. ಜಯಶ್ರೀ ಶೆಣೈ

ಟಾಪ್ ನ್ಯೂಸ್

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.