ಕೇರಳ, ಕೊಡಗು ಮಳೆ ಲೆಕ್ಕಾಚಾರ ಹಾಕಿದ ನಾಸಾ
Team Udayavani, Aug 23, 2018, 6:00 AM IST
ವಾಷಿಂಗ್ಟನ್: ಕೇರಳ ಹಾಗೂ ಕೊಡಗಿನಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾದ ಮಳೆಯ ತೀವ್ರತೆಯ ಲೆಕ್ಕಾಚಾರ ಒದಗಿಸುವ ವೀಡಿಯೋವೊಂದನ್ನು ನಾಸಾ ಬುಧವಾರ ಬಿಡುಗಡೆ ಮಾಡಿದೆ.
ಉಪಗ್ರಹಗಳ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಮಳೆ ಲೆಕ್ಕ ಹಾಕಿರುವ ಅಮೆರಿಕದ ಖಗೋಳ ಅಧ್ಯಯನ ಸಂಸ್ಥೆ, ಆ.13ರಿಂದ 20ರ ತನಕ ಎರಡು ಆವೃತ್ತಿಗಳಲ್ಲಿ ಭಾರೀ ಮಳೆ ಸುರಿದಿದೆ ಎಂದು ಹೇಳಿದೆ. ಮೊದಲ ಆವೃತ್ತಿಯ ಮಳೆ ವಿಶಾಲವಾಗಿತ್ತು ಮತ್ತು ದೇಶದ ಉತ್ತರ ಭಾಗದ ತನಕ ವ್ಯಾಪಿಸಿತ್ತು. ವಾರದ ಮಳೆಯ ಒಟ್ಟು ಪ್ರಮಾಣ ಪಶ್ಚಿಮ ಭಾಗದಲ್ಲಿ 12.7 ಸೆಂ.ಮೀ.ಗಳಷ್ಟಿದ್ದರೆ, ಬಂಗಾಲಕೊಲ್ಲಿಯ ಪೂರ್ವ ಭಾಗದಲ್ಲಿ 35.56 ಸೆಂ.ಮೀ.ಗಳಷ್ಟಿತ್ತು. ಎರಡನೆಯ ಆವೃತ್ತಿಯ ಮಳೆ ಹೆಚ್ಚು ಸಾಂದ್ರ ಮತ್ತು ತೀವ್ರವಾಗಿತ್ತು ಹಾಗೂ ದೇಶದ ನೈಋತ್ಯ ಕರಾವಳಿ ಹಾಗೂ ಪಶ್ಚಿಮ ಘಟ್ಟಯತ್ತವೇ ಕೇಂದ್ರೀಕೃತವಾಗಿತ್ತು. ಸಾಮಾನ್ಯವಾಗಿ ವಾರಕ್ಕೆ 25.4 ಸೆಂ.ಮಿ.ನಷ್ಟು ಬೀಳುವ ಮಳೆ ಈ ಬಾರಿ 40.64 ಸೆಂ.ಮೀ.ಗಳನ್ನು ದಾಟಿತ್ತು. ಗರಿಷ್ಠ 46.99 ಸೆಂ.ಮೀ.ಗಳ ತನಕವೂ ತಲುಪಿತ್ತು ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್