ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಶೇ.3.6ರಷ್ಟು ಕುಸಿತ
Team Udayavani, Mar 1, 2020, 9:12 PM IST
ನವದೆಹಲಿ: ಭಾರತದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿಯ ಕಾರು ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2020ರ ಫೆಬ್ರವರಿಯಲ್ಲಿ ಕಂಪನಿಯ 134,150 ಕಾರುಗಳು ಬಿಕರಿಯಾಗಿದ್ದು, ಮಾರಾಟ ಪ್ರಮಾಣ ಶೇ.3.6ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ 1,39,100 ಮಾರುತಿ ಕಾರುಗಳು ಮಾರಾಟವಾಗಿದ್ದವು.
ಇನ್ನೊಂದೆಡೆ ಕಂಪನಿಯ ರಫ್ತು ಪ್ರಮಾಣ ಶೇ.7.1ರಷ್ಟು ಪ್ರಗತಿ ಕಂಡಿದ್ದು, ಫೆಬ್ರವರಿಯಲ್ಲಿ 10,261 ಕಾರುಗಳು ಹೊರದೇಶಗಳಿಗೆ ರವಾನೆಯಾಗಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಂಸ್ಥೆಯು 9582 ಕಾರುಗಳನ್ನು ರಫ್ತು ಮಾಡಿತ್ತು. ಇದೇ ವೇಳೇ ಆಲ್ಟೋ ಮತ್ತು ಎಸ್-ಪ್ರಸ್ಸೋ ರೀತಿಯ ಸಣ್ಣ ಕಾರುಗಳ ಮಾರಾಟ ಶೇ.11ರಷ್ಟು ಪ್ರಗತಿ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್