ಜಮ್ಮು ಕಾಶ್ಮೀರ: ಬಂಧಿತ ರಾಜಕೀಯ ನಾಯಕರ ಶೀಘ್ರ ಬಿಡುಗಡೆ
Team Udayavani, Mar 16, 2020, 12:09 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯ
ಬಂಧನಕ್ಕೆ ಒಳಗಾಗಿರುವ ಎಲ್ಲ ರಾಜಕೀಯ ನಾಯಕರನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುತ್ತದೆ. ಹೀಗೆಂದು ಗೃಹ ಸಚಿವ ಅಮಿತ್ ಶಾ ಅಪ್ನಿ ಪಾರ್ಟಿಯ ಅಧ್ಯಕ್ಷ ಅಲ್ತಾಫ್ ಬುಖಾರಿಗೆ ರವಿವಾರ ಭರವಸೆ ನೀಡಿದ್ದಾರೆ.
24 ಮಂದಿ ನೂತನವಾಗಿ ಸ್ಥಾಪನೆಗೊಂಡ ಪಕ್ಷದ ಸದಸ್ಯರ ನಿಯೋಗ ಗೃಹ ಸಚಿವರನ್ನು ಭೇಟಿಯಾಗಿದ್ದ ವೇಳೆ ರಾಜಕೀಯ ಕೈದಿಗಳ ಬಿಡುಗಡೆ ಬಗ್ಗೆ ಮನವಿ ಮಾಡಿತು. ಇದರ ಜತೆಗೆ ಗೃಹ ಖಾತೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಿತು.