ಅಮೆರಿಕದ ತೆರಿಗೆಗೆ ಭಾರತದ ಪ್ರತೀಕಾರ

Team Udayavani, Jun 15, 2019, 6:00 AM IST

ನವದೆಹಲಿ: ಟ್ರಂಪ್‌ ದರ ಸಮರ ಹಾಗೂ ಆದ್ಯತಾ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದ್ದಕ್ಕೆ ಪ್ರತೀಕಾರವಾಗಿ ಕೇಂದ್ರ ವಿತ್ತ ಇಲಾಖೆ, ಅಮೆರಿಕದಿಂದ ಆಮದಾಗುವ ಸೇಬು, ಬಾದಾಮಿ, ವಾಲ್ನಟ್ ಸೇರಿ 29 ವಸ್ತುಗಳಿಗೆ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಿದೆ. ಜೂ.16ರಿಂದಲೇ ಈ ಹೊಸ ದರ ಜಾರಿಗೆ ಬರಲಿದ್ದು, ಈ ಎಲ್ಲಾ ವಸ್ತುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಲಿದೆ. ಕಳೆದ ವರ್ಷವಷ್ಟೇ ಅಮೆರಿಕ ಕೂಡ ಭಾರತದಿಂದ ಆಮದಾಗುವ ಕೆಲವು ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಆಗಲೇ ಭಾರತ ಅಮೆರಿಕದ ವಸ್ತುಗಳಿಗೂ ಹೆಚ್ಚಿನ ಆಮದು ಸುಂಕ ವಿಧಿಸುವ ಬಗ್ಗೆ ನಿರ್ಧರಿಸಿತ್ತು. ಆದರೆ, ಇದು ಜಾರಿಯಾಗಿರಲಿಲ್ಲ. ಭಾರತದ ನಿರ್ಧಾರಕ್ಕೆ ಇನ್ನೊಂದು ಕಾರಣವೂ ಇದೆ. ಜೂ. 5ರಂದು ಅಮೆರಿಕ ಭಾರತವನ್ನು ‘ಆದ್ಯತೆಯ ದೇಶ’ ಪಟ್ಟಿಯಿಂದ ಕೈಬಿಟ್ಟಿತ್ತು. ಇದರಿಂದಾಗಿ ಭಾರತದ ವಸ್ತುಗಳು ಅಮೆರಿಕದಲ್ಲಿ ದುಬಾರಿಯಾಗಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ