ಬೆಟ್ ಕಟ್ಟಿ ಮೊಟ್ಟೆ ತಿಂದು ಸತ್ತ!
Team Udayavani, Nov 4, 2019, 11:43 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜೌನ್ಪುರ: ವ್ಯಕ್ತಿಯೊಬ್ಬರು ಪಂದ್ಯ ಕಟ್ಟಿ ಒಂದೇ ಬಾರಿಗೆ 41 ಮೊಟ್ಟೆಗಳನ್ನು ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುಭಾಷ್ ಯಾದವ್(42) ಎಂದು ಗುರುತಿಸಲಾಗಿದೆ.
ಇಲ್ಲಿಯ ಬಿಗಿಗಂಜ್ ಮಾರುಕಟ್ಟೆಯಲ್ಲಿ ಅವರು ಮತ್ತು ಅವರ ಸ್ನೇಹಿತರೊಬ್ಬರ ನಡುವೆ ವಾಗ್ವಾದ ಎದ್ದಿತು. ಆಗ 50 ಮೊಟ್ಟೆಗಳನ್ನು ಒಮ್ಮೆಲೇ ತಿಂದವರಿಗೆ ಸೋತ ವ್ಯಕ್ತಿ 2,000 ರೂ. ನೀಡುವುದಾಗಿ ಸವಾಲು ಹಾಕಿಕೊಂಡರು.
ಅದರಂತೆ 41 ಮೊಟ್ಟೆಗಳನ್ನು ತಿಂದ ಯಾದವ್ 42ನೇ ಮೊಟ್ಟೆಯನ್ನು ತಿನ್ನುವ ವೇಳೆ ಪ್ರಜ್ಞಾಹೀನರಾಗಿ ನೆಲಕ್ಕೆ ಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!