ನಾಳೆ ಪ್ರಧಾನಿ ಮೋದಿಯವರಿಂದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ


Team Udayavani, Dec 10, 2022, 1:07 PM IST

11

ಪಣಜಿ: ಗೋವಾದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರ ಡಿಸೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ನವೆಂಬರ್ 2016 ರಲ್ಲಿ ನೆರವೇರಿಸಿದ್ದರು.  ಮೂಲಸೌಕರ್ಯ ಕೇಂದ್ರಿತ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಮೊದಲ ಹಂತದಲ್ಲಿ ಸುಮಾರು 2,870 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದೆ. ಮೋಪಾ ವಿಮಾನ ನಿಲ್ದಾಣವು ವರ್ಷಕ್ಕೆ 4.4 ಮಿಲಿಯನ್ ಪ್ರಯಾಣಿಕರ ಸಾಮಥ್ರ್ಯವನ್ನು ಹೊಂದಿರುತ್ತದೆ. ನಂತರದಲ್ಲಿ ಈ ಸಾಮಥ್ರ್ಯ 33 ಮಿಲಿಯನ್‍ಗೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೌರ ವಿದ್ಯುತ್ ಸ್ಥಾವರಗಳು, ಪರಿಸರ ಸ್ನೇಹಿ ಕಟ್ಟಡಗಳು, ರನ್ವೇಗಳಲ್ಲಿ ಎಲ್‍ಇಡಿ ದೀಪಗಳು, ಮಳೆನೀರು ಮರುಬಳಕೆ ವ್ಯವಸ್ಥೆ, ಅತ್ಯಾಧುನಿಕ ಒಳಚರಂಡಿ, ಸಂಸ್ಕರಣಾ ಘಟಕ ಇತ್ಯಾದಿಗಳನ್ನು ಹೊಂದಿದೆ.

ಈ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ, ಮೂರು ಆಯಾಮದ ಪ್ರಿಕಾಸ್ಟ್ ಬಿಲ್ಡಿಂಗ್, ಸ್ಟೇಬಿಲ್ರೋಡ್, ರೋಬೋಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು, 5ಜಿ ಕಂಪ್ಲೈಂಟ್ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳಂತಹ ಅತ್ಯುತ್ತಮ ಗುಣಮಟ್ಟದ ವಿಶೇಷ ತಂತ್ರಜ್ಞಾನಗಳನ್ನು ಬಳಸಲಾಗಿದೆ.

ವಿಮಾನ ನಿಲ್ದಾಣದ ಇತರ ವೈಶಿಷ್ಟ್ಯಗಳೆಂದರೆ ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ರನ್‍ವೇ, ವಿಮಾನಗಳ ರಾತ್ರಿ ಪಾರ್ಕಿಂಗ್‌ಗಾಗಿ ವಿಶೇಷ ವ್ಯವಸ್ಥೆಗಳೊಂದಿಗೆ 14 ಪಾರ್ಕಿಂಗ್‌ ಬೇ ಗಳು, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯ, ಅತ್ಯಾಧುನಿಕ ಮತ್ತು ಸ್ವಾಯತ್ತ ಏರ್ ನ್ಯಾವಿಗೇಷನ್ ಸೌಲಭ್ಯಗಳನ್ನು ಒಳಗೊಂಡಿದೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸುದ್ಧಿಗಾರರಿಗೆ ನೀಡಿದ ಮಾಹಿತಿ ಅನುಸಾರ ಪ್ರಧಾನಿ ಮೋದಿ ಭಾನುವಾರ ಮಧ್ಯಾಹ್ನ ಮೋಪಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ನಂತರ 9ನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 9ನೇ ವಿಶ್ವ ಆಯುರ್ವೇದ ಸಮಾವೇಶ ಮತ್ತು ಆರೋಗ್ಯ ಎಕ್ಸ್‌ಪೋದಲ್ಲಿ ವಿಶ್ವದ 50 ದೇಶಗಳಿಂದ 400 ಕ್ಕೂ ಹೆಚ್ಚು ಪ್ರತಿನಿಧಿಗಳು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಯುರ್ವೇದ ವಿಷಯಕ್ಕೆ ಸಂಬಂಧಿಸಿದ ಇತರರು ಭಾಗವಹಿಸಲಿದ್ದಾರೆ.  ಆ ಬಳಿಕ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉಧ್ಘಾಟನೆ ನೆರವೇರಿಸಲಿದ್ದಾರೆ.

ಟಾಪ್ ನ್ಯೂಸ್

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಢಿಕ್ಕಿ ಹೊಡೆದು ಇಬ್ಬರು ಸಾವು

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್‌ ಅಧಿಕಾರ ಸ್ವೀಕಾರ

ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್‌ ಅಧಿಕಾರ ಸ್ವೀಕಾರ

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಅಂಡರ್‌-19 ವಿಶ್ವಕಪ್‌ ವಿಜೇತರಿಗೆ ಸಮ್ಮಾನ

ಅಂಡರ್‌-19 ವಿಶ್ವಕಪ್‌ ವಿಜೇತರಿಗೆ ಸಮ್ಮಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

1-sdffsdf

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕ ಡಿಜಿಟಲ್ ಸ್ಪರ್ಶ

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ಮಂಗಳೂರು: ಪೊಲೀಸ್‌ ಎಸ್‌ಐಗಳ ವರ್ಗಾವರ್ಗಿ

ನಾಟಕದಿಂದ ಸಾಮಾಜಿಕ ಮೌನ ಕ್ರಾಂತಿ: ಡಾ| ಆಳ್ವ

ನಾಟಕದಿಂದ ಸಾಮಾಜಿಕ ಮೌನ ಕ್ರಾಂತಿ: ಡಾ| ಆಳ್ವ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಕೊಡಗಿನ ಗಡಿಯಲ್ಲಿ ಕೇರಳದ ತ್ಯಾಜ್ಯ ! ಅಧಿಕಾರಿಗಳಿಂದ ಪರಿಶೀಲನೆ

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಇಬ್ಬರು ಸಾವು

ಪಡುಪಣಂಬೂರು ಬಳಿ ಭೀಕರ ಅಪಘಾತ: ಕಾರು ಢಿಕ್ಕಿ ಹೊಡೆದು ಇಬ್ಬರು ಸಾವು

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

ಫೆ. 11: ಪುತ್ತೂರಿಗೆ ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.