ತತ್ಕಾಲ್‌ ಬುಕಿಂಗ್‌ಗೆ ‘ಬುಕ್‌ ನೌ ಪೇ ಲೇಟರ್‌’ ಸೌಲಭ್ಯ

Team Udayavani, Aug 4, 2017, 9:10 AM IST

ಹೊಸದಿಲ್ಲಿ: ಇನ್ನು ಮುಂದೆ ತತ್ಕಾಲ್‌ ಟಿಕೆಟ್‌ ಕಾಯ್ದಿರಿಸುವುದನ್ನು ಭಾರತೀಯ ರೈಲ್ವೇ ಮತ್ತಷ್ಟು ಸುಲಭವಾಗಿಸಿದೆ. ಮೊದಲು ಕಾಯ್ದಿರಿಸಿ ಅನಂತರ ಹಣ ಪಾವತಿಸುವಂಥ ‘ಬುಕ್‌ ನೌ ಪೇ ಲೇಟರ್‌’ ಎಂಬ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಪರಿಚಯಿಸಿದೆ. ಈ ಕುರಿತು ರೈಲ್ವೇ ಖಾತೆ ಸಹಾಯಕ ಸಚಿವ ರಾಜೆನ್‌ ಗೋಹೈನ್‌ ಲೋಕಸಭೆಗೆ ಮಾಹಿತಿ ನೀಡಿದರು.

ಗ್ರಾಹಕರು ಮೊದಲಿಗೆ ವೆಬ್‌ಸೈಟ್‌ ಮೂಲಕ ಟಿಕೆಟ್‌ ಬುಕ್‌ ಮಾಡಬೇಕು. ಟಿಕೆಟ್‌ ಖಾತರಿ ಕುರಿತು ಇ-ಮೇಲ್‌ ಅಥವಾ ಎಸ್‌ಎಂಎಸ್‌ನಲ್ಲಿ ಸಂದೇಶ ದೊರಕುತ್ತದೆ. ಒಮ್ಮೆ ಟಿಕೆಟ್‌ ಖಚಿತವಾದ ಬಳಿಕ ಗ್ರಾಹಕರು ತಮ್ಮ ಇ-ವ್ಯಾಲೆಟ್‌ನಿಂದ ಹಣ ಪಾವತಿಸಬೇಕು. ಹಣ ಪಾವತಿಗೆ ಟಿಕೆಟ್‌ ಖಾತರಿಯಾದ ಬಳಿಕ 14 ದಿನಗಳ ಕಾಲಾವಕಾಶ ಇರುತ್ತದೆ. 14 ದಿನಗಳೊಳಗೆ ಹಣ ಪಾವತಿಸದಿದ್ದರೆ ಟಿಕೆಟ್‌ ಬೆಲೆ ಮೇಲೆ ವಾರ್ಷಿಕ ಶೇ.36ರಷ್ಟು ಬಡ್ಡಿ ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ಈ ಸೌಲಭ್ಯ ಪಡೆಯಲು ಗ್ರಾಹಕರು ಮೊದಲಿಗೆ irctc.payonedelivery.co.in ವೆಬ್‌ಸೈಟ್‌ನಲ್ಲಿ ತಮ್ಮ ವೈಯಕ್ತಿಕ ವಿವರವನ್ನು ಆಧಾರ್‌ ಅಥವಾ ಪ್ಯಾನ್‌ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ