10 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಡ್ರಗ್ಸ್ ಸಾಗಾಟ: ವ್ಯಕ್ತಿ ಬಂಧನ
Team Udayavani, Sep 17, 2019, 8:30 AM IST
ಚೆನ್ನೈ: 10 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಏರ್ ಏಷಿಯಾ ವಿಮಾನದಲ್ಲಿ ಕೌಲಲಾಂಪುರ್ ಮೂಲಕ ಕಾಂಬೋಡಿಯಾದಿಂದ ಚೆನ್ನೈ ಗೆ ಬಂದಿಳಿದ ವ್ಯಕ್ತಿ ಮೂರು ಸಾವಿರಕ್ಕಿಂತಲೂ ಹೆಚ್ಚು ಡ್ರಗ್ಸ್ ಔಷಧಿಗಳ ತುಣುಕನ್ನು ಸ್ಥಳಿಯ ಜಿಮ್ ಗಳಿಗೆ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಅನುಮಾನದ ಆಧಾರದ ಮೇಲೆ ರಾಜನ್ ಮಿಶ್ರಾ (46) ಎಂಬಾತನನ್ನು ಬಂಧಿಸಲಾಗಿದ್ದು ಅಸಹಜ ವರ್ತನೆಯೇ ಬಂಧನಕ್ಕೆ ಪ್ರಮುಖ ಕಾರಣವಾಗಿದೆ. ತಪಸಣಾಧಿಕಾರಿಗಳು ಚುಚ್ಚುಮದ್ದು ಸೇರಿದಂತೆ ಇನ್ನಿತರ ಅಪಾಯಕಾರಿ ಡ್ರಗ್ಸ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ .ಕಾಂಬೋಡಿಯಾದಲ್ಲಿ ಈ ಔಷಧಿಗಳನ್ನು ಖರೀದಿಸಿದ್ದು, ಚೆನ್ನೈನಲ್ಲಿ ಅದನ್ನು ಜಿಮ್ ಗಳಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶವಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.