Udayavni Special

ಮರಾಠವಾಡ ವಿದ್ಯುತ್‌ ಸ್ವಾವಲಂಬನೆಗೆ ಯತ್ನ: ಸಚಿವ ರಾವುತ್‌


Team Udayavani, Jun 14, 2021, 1:44 PM IST

anivasi kannadiga

ಜಾಲ್ನಾ: ಭವಿಷ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪರಿಗಣಿಸಿ, ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ವಿದ್ಯುತ್‌ ಜಾಲವನ್ನು ಬಲಪಡಿಸಲು ಒತ್ತು ನೀಡಲಾಗುವುದು. ಮರಾಠಾವಾಡಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿ ಕೊಳ್ಳುವ ಮೂಲಕ ವಿದ್ಯುತ್‌ ಸ್ವಾವಲಂಬಿ ಯಾಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಂಧನ ಸಚಿವ ನಿತಿನ್‌ ರಾವುತ್‌ ಹೇಳಿದ್ದಾರೆ.

ಜಾಲ್ನಾ ತಾಲೂಕಿನ ಉಟ್ವಾಡಿ ಮತ್ತು ಘನ್ಸವಾಂಗಿ ತಾಲೂಕಿನ ತೀರ್ಥಪುರಿಯಲ್ಲಿ 132 ಕೆ.ವಿ. ಉಪ ಕೇಂದ್ರದ ಭೂಮಿ ಪೂಜೆ ನೆರವೇರಿಸಿ ಸಚಿವ ನಿತಿನ್‌ ರಾವುತ್‌ ಮಾತನಾಡಿದರು.ಉಟ್ವಾಡಿಯಲ್ಲಿ 132 ಕೆ.ವಿ. ಉಪಕೇಂದ್ರಕ್ಕೆ ಸಚಿವ ರಾಜೇಶ್‌ ಟೋಪೆ ಅವರು ಇಂಧನ ಸಚಿವರಾಗಿದ್ದಾಗ ಸಬ್‌ಸ್ಟೇಷನ್‌ ಮಂಜೂರು ಮಾಡಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ರಾಜೇಶ್‌ ಟೋಪೆ, ಸಚಿವ ಶಾಸಕ ಕೈಲಾಸ್‌ ಗೊರಾಂಟ್ಯಾಲ್‌ ಮತ್ತು ನಾಗರಿಕರ ಬೇಡಿಕೆಯಿಂದ ಈ ಉಪ ಕೇಂದ್ರ ನಿರ್ಮಾಣಕ್ಕಾಗಿ 38 ಕೋಟಿ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದೆ.

ತೀರ್ಥಪುರಿಯ ಸಬ್‌ಸ್ಟೇಷನ್‌ಗಾಗಿ 42 ಕೋಟಿ ರೂ.ಗಳ ನಿಧಿಯೂ ಲಭ್ಯವಾಗಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿನ ಹಲವು ಹಳ್ಳಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಾವುತ್‌ ಹೇಳಿದ್ದಾರೆ.ಕೃಷಿ ಪಂಪ್‌ಗ್ಳಿಗೆ ವಿದ್ಯುತ್‌ ಸಂಪರ್ಕ, ಸಿಎಂ ಸೌರ ಯೋಜನೆ ಇಂಧನ ಅಂತೆಯೇ ಪಿಎಂ ಕುಸುಮ್‌ ಯೋಜನೆ ಮತ್ತು ವಿವಿಧ ವಿದ್ಯುತ್‌ ಯೋಜನೆಗಳನ್ನು ಶೀಘ್ರ ದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ ರಾವುತ್‌, ರೈತರ ಅನುಕೂಲಕ್ಕಾಗಿ ಪ್ರತಿ ಜಿÇÉೆಯಲ್ಲೂ ಒಂದೇ ವಿಂಡೋವ್ಯವಸ್ಥೆಯನ್ನು ಶೀಘ್ರದÇÉೇ ಜಾರಿಗೆ ತರಲಾ ಗುವುದು. ವಿದ್ಯುತ್‌ ಉತ್ಪಾದನೆಗೆ ಪೂರೈಕೆಗೆ, ಹೆಚ್ಚಿನ ಪ್ರಮಾಣದ ಹಣದ ಅಗತ್ಯವಿದ್ದು, ವಿದ್ಯುತ್‌ ಬಳಸುವ ಪ್ರತಿಯೊಬ್ಬರಿಗೂ ತಮ್ಮ ವಿದ್ಯುತ್‌ ಬಿಲ್‌ ಪಾವತಿಸುವಂತೆ ಮನವಿ ಮಾಡಿದರು.ಮುಖಮಂತ್ರಿ ಸೌರ ಯೋಜನೆ ಅಡಿಯಲ್ಲಿ ಜಾಲ್ನಾ ಜಿಲ್ಲೆಯಿಂದ 23 ಅರ್ಜಿಗಳು ಬಂದಿವೆ. ಈ ಅರ್ಜಿಗಳ ಜತೆಗೆ ವಿದ್ಯುತ್‌ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಲಾಗುವುದು. ಲಾಕ್‌ಡೌನ್‌ ಆವಧಿಯಲ್ಲಿ ಎಂಎಸ್‌ಇಡಿಸಿಎಲ್‌ ಸಿಬಂದಿ ಹಗಲು-ರಾತ್ರಿ ಕೆಲಸ ಮಾಡಿದ್ದರಿಂದ ಸಾಮಾನ್ಯ ಜನರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಯೋಜನೆಗಳು ಸುಗಮವಾಗಿತ್ತು ಎಂದು ರಾವುತ್‌ ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಸಚಿವ ರಾಜೇಶ್‌ ಟೋಪೆ ಮಾತನಾಡಿ, ಜಾಲ್ನಾ  ಜಿಲ್ಲೆಯ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ರೈತರ ಕೃಷಿ ಪಂಪ್‌ಗ್ಳಿಗೆ ಸರಾಗವಾಗಿ ವಿದ್ಯುತ್‌ ಪಡೆದರೆ ಮಾತ್ರ ಈ ಆರ್ಥಿಕ ಚಕ್ರವು ವೇಗಗೊಳ್ಳುತ್ತದೆ. ಉಟ್ವಾಡಿ ಮತ್ತು ತೀರ್ಥಪುರಿಯಲ್ಲಿ 132 ಕೆ.ವಿ. ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲಾಗುತ್ತಿರುವುದರಿಂದ ಉಟ್ವಾಡಿಯ 90 ಗ್ರಾಮಗಳು ಮತ್ತು ತೀರ್ಥಪುರಿಯ 44 ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಸುಗಮವಾಗಲಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಕೈಲಾಸ್‌ ಗೋರಂತ್ಯಾಲ…, ಶಾಸಕ ರಾಜೇಶ್‌ ರಾಥೋಡ್‌, ಮಾಜಿ ಶಾಸಕ ಸುರೇಶ್‌ ಜೆಥಾಲಿಯಾ, ಅಧೀಕ್ಷಕ ಎಂಜಿನಿಯರ್‌ ರಂಗನಾಥ್‌ ಚವಾಣ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

Untitled-1

ಶಿರಾಡಿ ಘಾಟಿ ಸುರಂಗ ಮಾರ್ಗ ಅನಿವಾರ್ಯ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doctor

ವೈದ್ಯರ ವೃತ್ತಿಯಲ್ಲಿ ನೈತಿಕತೆ ಇರಲಿ: ಕೋಶ್ಯಾರಿ

Meera-road

ಜು. 31: ಶ್ರೀ ಶನಿ ಮಹಾಪೂಜೆ, ಯಕಗಾನ ತರಬೇತಿ ಕೇಂದ್ರ ಉದ್ಘಾಟನೆ

Billava

ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

Mumbai

ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತ: ಕೋಶ್ಯಾರಿ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.