ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆ: ಕ್ವಾರ್ಟರ್ ಫೈನಲ್‌ಗೆ ಪಿ.ವಿ.ಸಿಂಧು, ಶ್ರೀಕಾಂತ್
Team Udayavani, Aug 5, 2022, 9:30 PM IST
ಬರ್ಮಿಂಗ್‌ಹ್ಯಾಮ್: ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಕಳೆದ ಸಲ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಉಗಾಂಡದ ಹುಸಿನಾ ಕೊಬುಗಬೆ ಅವರನ್ನು 21-10, 21-9 ಅಂತರದಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಮಲೇಷ್ಯಾದ ಗೋಹ್ ಜಿನ್ ವೀ.
ಕೆ.ಶ್ರೀಕಾಂತ್ ಶ್ರೀಲಂಕಾದ ದುಮಿಂದು ಅಭಯವಿಕ್ರಮ ಅವರಿಗೆ 21-9, 21-12 ಅಂತರದ ಸೋಲುಣಿಸಿದರು. ಶ್ರೀಕಾಂತ್ ಕೂಡ ಗೋಲ್ಸ್‌ಕೋಸ್ಟ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಶ್ರೀಕಾಂತ್ ಅವರಿನ್ನು 54ನೇ ರ್‍ಯಾಂಕಿಂಗ್‌ನ ಇಂಗ್ಲೆಂಡ್ ಆಟಗಾರ ಟಾಬಿ ಪೆಂಟಿ ಅವರೆದುರು ಆಡಲಿದ್ದಾರೆ.
ಇದಕ್ಕೂ ಮೊದಲು ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್-ತ್ರಿಶಾ ಜಾಲಿ ಕೂಡ ಗೆಲುವಿನ ಓಟ ಮುಂದುವರಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇವರು ಮಾರಿಶಿಯಸ್‌ನ ಜೆಮಿಮಾ ಲೆಯುಂಗ್ ಫಾರ್ ಸಾಂಗ್-ಗಣೇಶ ಮುಂಗ್ರಾಹ್ ವಿರುದ್ಧ 21-2, 21-4 ಅಂತರದ ಸುಲಭ ಜಯ ಸಾಧಿಸಿದ್ದರು. ಇವರ ಎದುರಾಳಿಯಾಗಿರುವವರು ಜಮೈಕಾದ ಟಹ್ಲಿಯಾ ರಿಚರ್ಡ್‌ಸನ್-ಕ್ಯಾಥರಿನ್ ವಿಂಟರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆಗೆ ಆಗಮಿಸಿದ ಟೀಮ್ ಇಂಡಿಯಾ: ಆಗಸ್ಟ್ 18ರಿಂದ 3 ಪಂದ್ಯಗಳ ಏಕದಿನ ಸರಣಿ
ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್ ತಪ್ಪಲಿಲ್ಲ: ಅಲಾನಾ ಕಿಂಗ್
ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್ ಬೌಲರ್ ಡ್ನೂನ್ ಒಲಿವರ್ ಔಟ್
ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ
ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್: ಮತ್ತೆ ಲಸಿಕೆ ವಿವಾದ
MUST WATCH
ಹೊಸ ಸೇರ್ಪಡೆ
ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ ಪ್ರಶ್ನೆ
ಶಿವಮೊಗ್ಗ ಸ್ಮಾರ್ಟ್ಸಿಟಿ ಯೋಜನಾ ನೋಟ
ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ
ಜಾನಪದ ಕಲಾವಿದರೊಂದಿಗೆ ಹೆಜ್ಜೆಹಾಕಿದ ಮಮತಾ ಬ್ಯಾನರ್ಜಿ: ವಿಡಿಯೋ ನೋಡಿ
ಕೊಟ್ಟಿಗೆಹಾರದಲ್ಲಿ ಆನೆ ದಾಳಿಗೆ ರೈತ ಬಲಿ: ಮೃತದೇಹವನ್ನ ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ