
ಟಿ20 ವಿಶ್ವಕಪ್ :ನ್ಯೂಜಿಲ್ಯಾಂಡ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಪಾಕಿಸ್ಥಾನ
Team Udayavani, Nov 9, 2022, 5:01 PM IST

ಸಿಡ್ನಿ: ಟಿ20 ವಿಶ್ವಕಪ್ ನ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ಥಾನ ತಂಡ ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದ ರನ್ನರ್ ಅಪ್ ನ್ಯೂಜಿಲ್ಯಾಂಡ್ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ಎದುರು ದೊಡ್ಡ ಮಟ್ಟದ ಹೋರಾಟ ಸಂಘಟಿಸುವಲ್ಲಿ ವಿಫಲವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್ 4 ವಿಕೆಟ್ ನಷ್ಟಕ್ಕೆ 152 ರನ್ ಗಳನ್ನು ಮಾತ್ರ ಗಳಿಸಿತು. ನಾಯಕ ವಿಲಿಯಮ್ಸನ್ 46, ಡೇರಿಲ್ ಮಿಚೆಲ್ ಔಟಾಗದೆ 53 ರನ್ ಗಳಿಸಿದರು. ಕಾನ್ವೇ 21 ಗಳಿಸಿದ್ದಾಗ ರನ್ ಔಟ್ (ಶದಾಬ್ ಖಾನ್) ಆದರು.
ಗುರಿ ಬೆನ್ನಟ್ಟಿದ ಪಾಕ್ ಮೊದಲಿನಿಂದಲೂ ಮೇಲುಗೈ ಸಾಧಿಸಿತು.19.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಭರ್ಜರಿ ಆಟವಾಡಿದರು. 43 ಎಸೆತಗಳಲ್ಲಿ57 ರನ್ ಗಳಿಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಮೆರೆದರು. ನಾಯಕ ಬಾಬರ್ ಅಜಮ್ 53 ರನ್ (42ಬಾಲ್) ಗಳ ಕೊಡುಗೆ ನೀಡಿ ಗೆಲುವಿನತ್ತ ಕೊಂಡೊಯ್ದರು. ಆರಂಭಿಕರಿದ್ದರು ಮೊದಲ ವಿಕೆಟ್ ಗೆ 105 ರನ್ ಗಳ ಜತೆಯಾಟವಾಡಿ ಪಾಕಿಸ್ಥಾನದ ಬ್ಯಾಟಿಂಗ್ ಸಾಮರ್ಥ್ಯ ತೋರಿದರು. ಮೊಹಮ್ಮದ್ ಹ್ಯಾರಿಸ್ 30 ರನ್ ಗಳಿಸಿ ಔಟಾದರು.
ಟಾಪ್ ನ್ಯೂಸ್
