ಶೂ ಸಮಸ್ಯೆಯಿಂದ ಮಿಥಾಲಿ ರನೌಟ್‌!

Team Udayavani, Jul 26, 2017, 7:30 AM IST

ಹೊಸದಿಲ್ಲಿ: ವನಿತಾ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ರನೌಟ್‌ ಆದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಇದರಿಂದ ಫಿಕ್ಸಿಂಗ್‌ ಆರೋಪವನ್ನೂ ಅವರು ಹೊರಬೇಕಾಯಿತು. 

ಆದರೀಗ ಮಿಥಾಲಿ ರಾಜ್‌ ತಮ್ಮ ರನೌಟ್‌ ಬಗ್ಗೆ ಮೊದಲ ಸಲ ಮಾತಾಡಿದ್ದಾರೆ. ಓಡುವಾಗ ಶೂ ಸಮಸ್ಯೆಯಿಂದ ಈ ಗಂಡಾಂತರಕ್ಕೆ ಸಿಲುಕಬೇಕಾಯಿತು ಎಂದಿದ್ದಾರೆ.

“ಸಾಮಾಜಿಕ ಜಾಲತಾಣಗಳಲ್ಲಿ ನನ್ನ ರನೌಟ್‌ ಬಗ್ಗೆ ಕಟುವಾಗಿ ಬರೆದುದನ್ನು ಗಮನಿಸಿದೆ. ಆದರೆ ಓಡುವಾಗ ನನ್ನ ಶೂ ಮೊಳೆ (ಸ್ಪೈಕ್‌) ಪಿಚ್‌ಗೆ ಕಚ್ಚಿಕೊಂಡಿದ್ದರಿಂದ ನನಗೆ ಗುರಿ ತಲುಪಲಾಗಲಿಲ್ಲ. ಪೂನಂ ರನ್ನಿಗಾಗಿ ಕರೆದಾಗ ನಾನು ಸ್ಪಂದಿಸಿದೆ. ಆದರೆ ಅರ್ಧ ಹಾದಿ ಕ್ರಮಿಸುವಷ್ಟರಲ್ಲಿ ಶೂ ಸಮಸ್ಯೆ ಎದುರಾಯಿತು. ಬಹುಶಃ ಇದನ್ನು ಟಿ.ವಿ. ಕ್ಯಾಮರಾಗಳು ಸೆರೆ ಹಿಡಿಯಲಿಲ್ಲ ಎನಿಸುತ್ತದೆ. ಓಟ ಮುಂದುವರಿಸಿದರೂ ಕ್ರೀಸ್‌ ಮುಟ್ಟಲಾಗಲಿಲ್ಲ. ಡೈವ್‌ ಮಾಡಲಿಕ್ಕೂ ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಸಹಾಯಕಳಾಗಿದ್ದೆ…’ ಎಂದು ಮಿಥಾಲಿ ರಾಜ್‌ ತಮಗೆದುರಾದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ