ಪರ್ತ್‌: 417 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

Team Udayavani, Dec 14, 2019, 11:22 PM IST

ಪರ್ತ್‌: ಪರ್ತ್‌ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡಿಗೆ ಫಾಲೋಆನ್‌ ವಿನಾಯಿತಿ ನೀಡಿದ ಆತಿಥೇಯ ಆಸ್ಟ್ರೇಲಿಯ ಒಟ್ಟು 417 ರನ್‌ ಮುನ್ನಡೆಯೊಂದಿಗೆ ಗೆಲುವನ್ನು ಖಾತ್ರಿಗೊಳಿಸಿದೆ.

ಆಸ್ಟ್ರೇಲಿಯದ 416 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ 166 ರನ್ನಿಗೆ ಕುಸಿಯಿತು. 250 ರನ್ನುಗಳ ಬೃಹತ್‌ ಮುನ್ನಡೆ ಪಡೆದರೂ ಕಾಂಗರೂ ಪಡೆಯೇ ಮರಳಿ ಬ್ಯಾಟಿಂಗ್‌ ನಡೆಸಲು ಮುಂದಾಯಿತು. ದ್ವಿತೀಯ ಸರದಿಯಲ್ಲಿ ಕುಸಿತ ಕಂಡರೂ ಯಾವುದೇ ಆತಂಕಕ್ಕೆ ಸಿಲುಕಿಲ್ಲ. 3ನೇ ದಿನದಾಟದ ಕೊನೆಗೆ 6ಕ್ಕೆ 167 ರನ್‌ ಗಳಿಸಿದೆ.

ಲಬುಶೇನ್‌, ಬರ್ನ್ಸ್ ಫಿಫ್ಟಿ
ಆರಂಭಕಾರ ಜೋ ಬರ್ನ್ಸ್ (53) ಮತ್ತು ಅಮೋಘ ಫಾರ್ಮ್ನಲ್ಲಿರುವ ಮಾರ್ನಸ್‌ ಲಬುಶೇನ್‌ (50) ಅರ್ಧ ಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ ಆಸೀಸ್‌ ಒಂದೇ ವಿಕೆಟಿಗೆ 131 ರನ್‌ ಬಾರಿಸಿತ್ತು. ಆದರೆ ಲಬುಶೇನ್‌ ಔಟಾದ ಬಳಿಕ ಸೌಥಿ ದಾಳಿಗೆ ದಿಢೀರ್‌ ಕುಸಿತಕ್ಕೆ ಸಿಲುಕಿತು. 29 ರನ್‌ ಅಂತರದಲ್ಲಿ 5 ವಿಕೆಟ್‌ ಉರುಳಿಸಿಕೊಂಡಿತು. ಸ್ಮಿತ್‌ (16), ಹೆಡ್‌ (5), ಪೇನ್‌ (0) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ವಾರ್ನರ್‌ (19) ಕೂಡ ವೈಫ‌ಲ್ಯ ಕಂಡರು. ಸೌಥಿ ಸಾಧನೆ 63ಕ್ಕೆ 4 ವಿಕೆಟ್‌. ಉಳಿದೆರಡು ವಿಕೆಟ್‌ ನೀಲ್‌ ವ್ಯಾಗ್ನರ್‌ ಪಾಲಾಗಿವೆ.

ಮುಂದುವರಿದ ಕುಸಿತ
5ಕ್ಕೆ 109 ರನ್‌ ಮಾಡಿ ತೀವ್ರ ಸಂಕಟದಲ್ಲಿದ್ದ ನ್ಯೂಜಿಲ್ಯಾಂಡ್‌, 3ನೇ ದಿನದಾಟದಲ್ಲೂ ಬ್ಯಾಟಿಂಗ್‌ ಕುಸಿತದಿಂದ ಬಚಾವಾಗಲಿಲ್ಲ. 66ರಲ್ಲಿದ್ದ ರಾಸ್‌ ಟೇಲರ್‌ 80 ರನ್‌ ಮಾಡಿದರೆ, ಗ್ರ್ಯಾಂಡ್‌ಹೋಮ್‌ 23 ರನ್‌ ಹೊಡೆದರು. ಸ್ಟಾರ್ಕ್‌ 5 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-416 ಮತ್ತು 6 ವಿಕೆಟಿಗೆ 167 (ಬರ್ನ್ಸ್ 53, ಲಬುಶೇನ್‌ 50, ಸೌಥಿ 63ಕ್ಕೆ 4). ನ್ಯೂಜಿಲ್ಯಾಂಡ್‌-166 (ಟೇಲರ್‌ 80, ವಿಲಿಯಮ್ಸನ್‌ 34, ಗ್ರ್ಯಾಂಡ್‌ಹೋಮ್‌ 23, ಸ್ಟಾರ್ಕ್‌ 52ಕ್ಕೆ 5, ಲಿಯೋನ್‌ 48ಕ್ಕೆ 2).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...