ಒಂದೇ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ

Team Udayavani, Feb 27, 2017, 4:53 PM IST

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಸೋತ ಭಾರತ ತಂಡದ ಬೆಂಬಲಕ್ಕೆ ಈಗ ಕ್ರಿಕೆಟ್‌ ದಿಗ್ಗಜಸಚಿನ್‌ ತೆಂಡುಲ್ಕರ್‌ ನಿಂತಿದ್ದಾರೆ. ಕೊಹ್ಲಿ ಪಡೆ ಪರ ಬ್ಯಾಟ್‌ ಬೀಸಿರುವ ಅವರು, ಒಂದೇ ಒಂದು ಟೆಸ್ಟ್‌ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ ಎಂದು ಟೀಕಾಕಾರರಿಗೆ ಕಿವಿ ಮಾತು ಹೇಳಿದ್ದಾರೆ. ಭಾರತ ಮೊದಲ ಪಂದ್ಯ ಸೋತಿರಬಹುದು. ಸೋಲು ಎನ್ನುವುದು ಒಂದು ಪಂದ್ಯದ ಅಂಶ ಹಾಗೂ ಭಾಗವಷ್ಟೇ. ಹಾಗಂತ ಭಾರತ ಸರಣಿ ಸೋತಿದೆ ಎನ್ನುವಷ್ಟರ ಮಟ್ಟಿಗೆ ಅರ್ಥವನ್ನು ಕಲ್ಪಿಸಬೇಕಿಲ್ಲ. ಕೊಹ್ಲಿ ಪಡೆ ಪಾಲಿಗೆ ಸರಣಿ ಇನ್ನೂ ಜೀವಂತವಾಗಿದೆ. ಸರಣಿ ಕೈ ವಶ ಮಾಡಿಕೊಳ್ಳಲು ಭಾರತದ ಮುಂದೆ ಸಾಕಷ್ಟು ಅವಕಾಶಗಳಿದೆ ಎಂದು ತಿಳಿಸಿದರು.

ಪ್ರತಿಯೊಂದು ವಿಷಯದಲ್ಲೂ ಒಂದು ಕೆಟ್ಟ ಸಮಯ ಹಾಗೂ ಇನ್ನೊಂದು ಒಳ್ಳೆಯ ಸಮಯ ಎನ್ನುವುದು ಇರುತ್ತದೆ. ಇದೆಲ್ಲವು ನಿಮ್ಮ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸುವುದಕ್ಕೆ ಎದುರಾಗುತ್ತದೆ. ಇದನ್ನೆಲ್ಲ ಮೀರಿ ನಿಂತು ಪ್ರದರ್ಶನ ನೀಡಬೇಕು. ಆಗ ನಿಜವಾದ ಕ್ರೀಡಾ ಸ್ಫೂರ್ತಿ ಹೊರಬರುತ್ತದೆ. ಇದನ್ನೇ ಭಾರತ ತಂಡ ಕೂಡ ಮುಂದಿನ ಪಂದ್ಯಗಳಲ್ಲಿ ಮಾಡಬೇಕಿದೆ. ಕಠಿಣ ಹೋರಾಟದ ಮೂಲಕ ಆಸೀಸ್‌ಗೆ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರಬಲ ಪೈಪೋಟಿ ನೀಡಲಿದೆ. ಭಾರತ ತಿರುಗಿ ಬೀಳಲಿದೆ ಎನ್ನುವ ಸತ್ಯ ಆಸ್ಟ್ರೇಲಿಯಾ ತಂಡಕ್ಕೂ ಗೊತ್ತಿದೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಸಚಿನ್‌ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ