ಟೋಕಿಯೊ ಒಲಿಂಪಿಕ್ಸ್: ಅಮಿತ್, ಮೇರಿ ಒಲಿಂಪಿಕ್ಸ್ ಪ್ರವೇಶ
Team Udayavani, Mar 10, 2020, 6:40 AM IST
ಅಮ್ಮಾನ್ (ಜೋರ್ಡಾನ್): ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ) ಮತ್ತು ವಿಶ್ವ ಚಾಂಪಿಯನ್ಶಿಪ್ ಬಾಕ್ಸಿಂಗ್ ಕೂಟದ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ (52 ಕೆಜಿ) ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮ್ಮಾನ್ನಲ್ಲಿ ನಡೆಯುತ್ತಿರುವ ಏಶ್ಯನ್ ಕ್ವಾಲಿಫೈಯರ್ ಬಾಕ್ಸಿಂಗ್ ಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಆದರೆ ಸಾಕ್ಷಿ ಚೌಧರಿ (57 ಕೆಜಿ) ಟೋಕಿಯೊ ಟಿಕೆಟ್ಗಾಗಿ ಇನ್ನೂ ಕಾಯಬೇಕಿದೆ.
ಸೋಮವಾರದ ಕ್ವಾರ್ಟರ್ ಫೈನ್ನಲ್ಲಿ ಮೇರಿ ಕೋಮ್ ಫಿಲಿಪ್ಪೀನ್ಸ್ನ ಐರಿಶ್ ಮ್ಯಾಗ್ನೊ ಅವರನ್ನು 5-0 ಅಂತರದಿಂದ ಮಣಿಸಿ ಮುನ್ನಡೆದರು.
ಸೆಮಿಫೈನಲ್ನಲ್ಲಿ ಮೇರಿ ಚೀನದ ಯುವಾನ್ ಚಾಂಗ್ ವಿರುದ್ಧ ಸೆಣಸಲಿದ್ದಾರೆ.
ಏಶ್ಯಾಡ್ ಹಾಗೂ ಏಶ್ಯನ್ ಚಾಂಪಿಯನ್ಶಿಪ್ ಕೂಟದ ಬಂಗಾರ ವಿಜೇತ, ಅಗ್ರ ಶ್ರೇಯಾಂಕದ ಅಮಿತ್ ಪಂಘಲ್ ಫಿಲಿಪ್ಪೀನ್ಸ್ನ ಕಾರ್ಲೊ ಪಾಲಂ ಅವರನ್ನು 4-1 ಅಂತರದಿಂದ ಹಿಮ್ಮೆಟ್ಟಿಸಿದರು. ಇದಕ್ಕೂ ಮುನ್ನ 2018ರ ಏಶ್ಯಾಡ್ ಸೆಮಿಫೈನಲ್ ಹಾಗೂ 2019ರ ವಿಶ್ವ ಚಾಂಪಿಯನ್ಶಿಪ್ ಕ್ವಾರ್ಟರ್ ಫೈನಲ್ನಲ್ಲೂ ಪಾಲಂ ವಿರುದ್ಧ ಪಂಘಲ್ ಜಯ ಸಾಧಿಸಿದ್ದರು. ಪಂಘಲ್ ಅವರ ಮುಂದಿನ ಎದುರಾಳಿ ಚೀನದ ಜಿಯಾಂಗ್ಜುವಾಂಗ್ ಹು.
ಕಾಯಬೇಕಿದೆ ಸಾಕ್ಷಿ, ಕೌಶಿಕ್
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಸಾಕ್ಷಿ ಚೌಧರಿ ಕ್ವಾರ್ಟರ್ ಫೈನಲ್ನಲ್ಲಿ ಕೊರಿಯಾದ ಐಮ್ ಏಜಿ ವಿರುದ್ಧ 0-5 ಅಂತರದಿಂದ ಸೋತು ಟೋಕಿಯೊ ಪ್ರವೇಶದಿಂದ ಸದ್ಯ ದೂರ ಉಳಿದಿದ್ದಾರೆ. ಇನ್ನು ಮೇ ತಿಂಗಳಲ್ಲಿ ನಡೆಯುವ ಮತ್ತೂಂದು ವರ್ಲ್ಡ್ ಕ್ವಾಲಿಫೈಯರ್ ಕೂಟದಲ್ಲಿ ಸಾಕ್ಷಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.
ಮನೀಷ್ ಕೌಶಿಕ್ (63) ಕೂಡ ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡರು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಸೋತವರ ನಡುವೆ ನಡೆಯಲಿರುವ “ಬಾಕ್ಸ್-ಆಫ್’ ಸುತ್ತಿನಲ್ಲಿ ಜಯ ಸಾಧಿಸಿ, ಅಗ್ರ ಆರರಲ್ಲಿ ಸ್ಥಾನ ಪಡೆದರೆ ಕೌಶಿಕ್ ಅವರಿಗೆ ಟೋಕಿಯೊ ಟಿಕೆಟ್ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ