ಮಿಲ್ಲರ್‌ ಹೊಡೆತಕ್ಕೆ ತತ್ತರಿಸಿದ ಬಾಂಗ್ಲಾ


Team Udayavani, Oct 31, 2017, 7:40 AM IST

SA-wi-n-30.jpg

ಪೊಚೆಫ್ಸೂóಮ್‌: ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಅವರ ವಿಶ್ವದಾಖಲೆಯ ಶತಕಕ್ಕೆ ತತ್ತರಿಸಿದ ಬಾಂಗ್ಲಾದೇಶ, ರವಿವಾರ ರಾತ್ರಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 83 ರನ್ನುಗಳಿಂದ ಶರಣಾಯಿತು. ಇದರೊಂದಿಗೆ ಡ್ಯುಮಿನಿ ಸಾರಥ್ಯದ ಆತಿಥೇಯ ಆಫ್ರಿಕಾ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದು ಕ್ಲೀನ್‌ಸಿÌàಪ್‌ ಸಾಧನೆ ಮಾಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 4 ವಿಕೆಟಿಗೆ 224 ರನ್‌ ರಾಶಿ ಹಾಕಿತು. ಇದು ಬಾಂಗ್ಲಾ ವಿರುದ್ಧ ತಂಡವೊಂದು ಪೇರಿಸಿದ ಅತ್ಯಧಿಕ ರನ್‌. ಬಾಂಗ್ಲಾದೇಶ 18.3 ಓವರ್‌ಗಳಲ್ಲಿ 141ಕ್ಕೆ ಆಲೌಟ್‌ ಆಯಿತು.
ಹರಿಣಗಳ ಬೃಹತ್‌ ಮೊತ್ತದಲ್ಲಿ ಡೇವಿಡ್‌ ಮಿಲ್ಲರ್‌ ಅವರ ಶರವೇಗದ ಶತಕದ ಪಾತ್ರ ಮಹತ್ವದ್ದಾಗಿತ್ತು. ಮಿಲ್ಲರ್‌ ಕೇವಲ 36 ಎಸೆತಗಳಲ್ಲಿ 101 ರನ್‌ ಸಿಡಿಸಿ “ಸೆನ್ವೆಸ್‌ ಪಾರ್ಕ್‌’ನಲ್ಲಿ ವಿಜೃಂಭಿಸಿದರು. ಅವರ ಶತಕ ಕೇವಲ 35 ಎಸೆತಗಳಲ್ಲಿ ದಾಖಲಾಯಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದ ಅತೀ ವೇಗದ ಶತಕ. ಈ ಆರ್ಭಟದ ವೇಳೆ ಮಿಲ್ಲರ್‌ ಬ್ಯಾಟಿನಿಂದ 9 ಸಿಕ್ಸರ್‌ ಹಾಗೂ 7 ಬೌಂಡರಿ ಸಿಡಿಯಲ್ಪಟ್ಟಿತು. ಸ್ಟ್ರೈಕ್‌ರೇಟ್‌ 280.55.

ಆರಂಭಕಾರ ಹಾಶಿಮ್‌ ಆಮ್ಲ ಆಫ್ರಿಕಾ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌. ಅವರು 51 ಎಸೆತಗಳಿಂದ 85 ರನ್‌ ಬಾರಿಸಿದರು (11 ಬೌಂಡರಿ, 1 ಸಿಕ್ಸರ್‌).

ಜವಾಬಿತ್ತ ಬಾಂಗ್ಲಾದೇಶ ಆರಂಭಿಕ ಕುಸಿತಕ್ಕೊಳಗಾಯಿತು. ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಆರಂಭಕಾರ ಸೌಮ್ಯ ಸರ್ಕಾರ್‌ ಸರ್ವಾಧಿಕ 44 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-4 ವಿಕೆಟಿಗೆ 244 (ಮಿಲ್ಲರ್‌ ಔಟಾಗದೆ 101, ಆಮ್ಲ 85, ಶಕಿಬ್‌ 22ಕ್ಕೆ 2, ಸೈಫ‌ುದ್ದೀನ್‌ 53ಕ್ಕೆ 2). ಬಾಂಗ್ಲಾದೇಶ-18.3 ಓವರ್‌ಗಳಲ್ಲಿ 141 (ಸರ್ಕಾರ್‌ 44, ಮಹಮದುಲ್ಲ 24, ಸೈಫ‌ುದ್ದೀನ್‌ 23, ಡ್ಯುಮಿನಿ 23ಕ್ಕೆ 2, ಫ್ಯಾಂಗಿಸೊ 31ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್‌ ಮಿಲ್ಲರ್‌.

ಮಿಲ್ಲರ್‌ ವಿಶ್ವದಾಖಲೆಯ ಮಿಂಚು
ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಕಡಿಮೆ 35 ಎಸೆತಗಳಿಂದ ಶತಕ ಬಾರಿಸಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮದೇ ನಾಡಿನ ರಿಚರ್ಡ್‌ ಲೆವಿ ದಾಖಲೆಯನ್ನು ಮುರಿದರು. ಲೆವಿ ನ್ಯೂಜಿಲ್ಯಾಂಡ್‌ ಎದುರಿನ 2012ರ ಹ್ಯಾಮಿಲ್ಟನ್‌ ಪಂದ್ಯದಲ್ಲಿ 45 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಮತ್ತೂಬ್ಬ ಬ್ಯಾಟ್ಸ್‌ಮನ್‌ ಫಾ ಡು ಪ್ಲೆಸಿಸ್‌ ಮತ್ತು ಭಾರತದ ಕೆ.ಎಲ್‌. ರಾಹುಲ್‌ 46 ಎಸೆತಗಳಲ್ಲಿ ಶತಕ ಪೂರೈಸಿ ಅನಂತರದ ಸ್ಥಾನ ಅಲಂಕರಿಸಿದ್ದಾರೆ.

ಮಿಲ್ಲರ್‌ ಅವರ ಅರ್ಧ ಶತಕ 23 ಎಸೆತಗಳಿಂದ ಬಂತು. 51ರಿಂದ 100ಕ್ಕೆ ತಲುಪಲು ಮಿಲ್ಲರ್‌ ಎದುರಿಸಿದ್ದು ಬರೀ 12 ಎಸೆತ!

ಮಿಲ್ಲರ್‌ 4ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಲಿಳಿದು ಶತಕ ಹೊಡೆದ ಮೊದಲ ಆಟಗಾರ. ಇಲ್ಲಿ ಮಿಲ್ಲರ್‌ 5ನೇ ಕ್ರಮಾಂಕದಲ್ಲಿ ಬಂದಿದ್ದರು. ಇದೇ ವರ್ಷ ಬಾಂಗ್ಲಾದೇಶ ವಿರುದ್ಧ ಕೋರಿ ಆ್ಯಂಡರ್ಸನ್‌ 94 ರನ್‌ ಬಾರಿಸಿದ್ದು 5ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಓರ್ವನ ಸರ್ವಾಧಿಕ ಮೊತ್ತವಾಗಿತ್ತು.ಮೊಹಮ್ಮದ್‌ ಸೈಫ‌ುದ್ದೀನ್‌ ಪಾಲಾದ 19ನೇ ಓವರಿನಲ್ಲಿ ಮಿಲ್ಲರ್‌ ಸತತ 5 ಸಿಕ್ಸರ್‌ ಸಹಿತ 31 ರನ್‌ ಸಿಡಿಸಿದರು. ಇನ್ನಿಂಗ್ಸಿನ ಕೊನೆಯ 4 ಓವರ್‌ಗಳಲ್ಲಿ ಮಿಲ್ಲರ್‌ ಬ್ಯಾಟಿನಿಂದ ಹರಿದು ಬಂದ ರನ್‌ ಬರೋಬ್ಬರಿ 59. ಈ ವೇಳೆ ಅವರು 6 ಸಿಕ್ಸರ್‌, 4 ಬೌಂಡರಿ ಹೊಡೆದರು. ಬಾಂಗ್ಲಾದ ಕೊನೆಯ 10 ಓವರ್‌ಗಳಲ್ಲಿ 146 ರನ್‌, ಕೊನೆಯ 5 ಓವರ್‌ಗಳಲ್ಲಿ 90 ರನ್‌ ಸೋರಿ ಹೋಯಿತು.

ಟಾಪ್ ನ್ಯೂಸ್

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.