ಟೆಸ್ಟ್ : ಸಿಡ್ನಿಯಲ್ಲೂ ಸಿಡಿದು ನಿಂತ ಆಸ್ಟ್ರೇಲಿಯ
Team Udayavani, Jan 5, 2020, 11:29 PM IST
ಸಿಡ್ನಿ: ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಕ್ಲಿಕ್ ಆದೀತೆಂಬ ನಿರೀಕ್ಷೆ ಹುಸಿಯಾಗಿದೆ. ಸಿಡ್ನಿಯಲ್ಲೂ ಸಿಡಿದು ನಿಂತ ಆಸ್ಟ್ರೇಲಿಯ “ನ್ಯೂ ಇಯರ್ ಟೆಸ್ಟ್’ನಲ್ಲೂ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ತಂಡದ ವೈಟ್ವಾಶ್ ಯೋಜನೆಯೂ ಸಾಕಾರಗೊಳ್ಳಲಿದೆ.
ಆಸ್ಟ್ರೇಲಿಯದ 454 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ನ್ಯೂಜಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೆ 63 ರನ್ ಮಾಡಿ ದ್ವಿತೀಯ ದಿನದಾಟ ಮುಗಿಸಿ ಭರವಸೆ ಮೂಡಿಸಿತ್ತು. ಆದರೆ ರವಿವಾರ ಬ್ಯಾಟಿಂಗ್ ಮುಂದುವರಿಸಿ 251ಕ್ಕೆ ಆಲೌಟ್ ಆಯಿತು. ಆಫ್ಸ್ಪಿನ್ನರ್ ನಥನ್ ಲಿಯೋನ್ 5, ವೇಗಿ ಪ್ಯಾಟ್ ಕಮಿನ್ಸ್ 3 ವಿಕೆಟ್ ಹಾರಿಸಿ ಕಿವೀಸ್ ರೆಕ್ಕೆ ಕತ್ತರಿಸಿದರು.
ಆಸೀಸ್ 203 ರನ್ ಬೃಹತ್ ಮುನ್ನಡೆ ಪಡೆದರೂ ಪ್ರವಾಸಿಗರಿಗೆ ಫಾಲೋಆನ್ ಹೇರಲಿಲ್ಲ. ದ್ವಿತೀಯ ಇನ್ನಿಂಗ್ಸ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 40 ರನ್ ಮಾಡಿದೆ. ತಂಡದ ಒಟ್ಟು ಮುನ್ನಡೆ 243ಕ್ಕೆ ಏರಿದೆ. ಇನ್ನೂ 2 ದಿನಗಳ ಆಟ ಬಾಕಿ ಇದೆ.
ಲಿಯೋನ್ ಘಾತಕ ಬೌಲಿಂಗ್
ರವಿವಾರ 5 ರನ್ ಆಗುವಷ್ಟರಲ್ಲಿ ನ್ಯೂಜಿಲ್ಯಾಂಡಿನ ಆರಂಭಿಕ ಜೋಡಿಯನ್ನು ಲಿಯೋನ್ ಬೇರ್ಪಡಿಸಿದರು. 34 ರನ್ ಮಾಡಿದ ಬ್ಲಿಂಡೆಲ್ ಕ್ಲೀನ್ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಲ್ಯಾಥಂ (49) ಮತ್ತು ರಾವಲ್ (31) 2ನೇ ವಿಕೆಟಿಗೆ 49 ರನ್ ಒಟ್ಟುಗೂಡಿಸಿದರು. ಈ ಜೋಡಿಯನ್ನೂ ಬೇರ್ಪಡಿಸುವ ಮೂಲಕ ಪ್ರವಾಸಿಗರ ಮೇಲೆ ಲಿಯೋನ್ ಅಪಾಯದ ಬಾವುಟ ಹಾರಿಸಿದರು.
ಬೇರೂರುವ ಸೂಚನೆ ನೀಡಿದ ನಾಯಕ ಲ್ಯಾಥಂ (49) ಅವರನ್ನು ಮುಂದಿನ ಓವರಿನಲ್ಲೇ ಕೆಡವಿದ ಕಮಿನ್ಸ್, ಬಳಿಕ ಟೇಲರ್ (22) ಮತ್ತು ಮೊದಲ ಟೆಸ್ಟ್ ಆಡುತ್ತಿದ್ದ ಗ್ಲೆನ್ ಫಿಲಿಪ್ಸ್ಗೆ (52) ಬಲೆ ಬೀಸಿದರು. ಅನಂತರ ಎರಡಂಕೆಯ ಸ್ಕೋರ್ ದಾಖಲಿಸಿದವರೆಂದರೆ ಆ್ಯಸ್ಟಲ್ (25) ಮತ್ತು ಗ್ರ್ಯಾಂಡ್ಹೋಮ್ (20) ಮಾತ್ರ.
ಸೋಮರ್ವಿಲ್ಲೆ (0) ಮತ್ತು ವ್ಯಾಗ್ನರ್ (0) ಅವರ ವಿಕೆಟ್ಗಳನ್ನು ಒಂದೇ ಓವರಿನಲ್ಲಿ ಹಾರಿಸಿದ ಲಿಯೋನ್, ಕೊನೆಯಲ್ಲಿ ಮ್ಯಾಟ್ ಹೆನ್ರಿಗೆ (3) ಪೆವಿಲಿಯನ್ ಹಾದಿ ತೋರಿಸಿ 17ನೇ “5 ಪ್ಲಸ್’ ವಿಕೆಟ್ ಬೇಟೆಯನ್ನು ಪೂರ್ತಿಗೊಳಿಸಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-454 ಮತ್ತು ವಿಕೆಟ್ ನಷ್ಟವಿಲ್ಲದೆ 40 (ವಾರ್ನರ್ ಬ್ಯಾಟಿಂಗ್ 23, ಬರ್ನ್ಸ್ ಬ್ಯಾಟಿಂಗ್ 16). ನ್ಯೂಜಿಲ್ಯಾಂಡ್-251 (ಫಿಲಿಪ್ಸ್ 52, ಲ್ಯಾಥಂ 49, ಬ್ಲಿಂಡೆಲ್ 34, ರಾವಲ್ 31, ಆ್ಯಸ್ಟಲ್ ಔಟಾಗದೆ 25, ಲಿಯೋನ್ 68ಕ್ಕೆ 5, ಕಮಿನ್ಸ್ 44ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ