ಅಸ್ಸಾಂ-ಶಕ್ತಿ ಪೀಠ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ
Team Udayavani, Jan 1, 2021, 12:48 PM IST
ಬೆಂಗಳೂರು: ಹೊಸ ಕ್ಯಾಲೆಂಡರ್ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ ಶ್ರೀ ಕಾಮಾಕ್ಯ ದೇವಾಲಯ ಕ್ಕೆ ಭೇಟಿ ನೀಡಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಶೇಷ ಪೂಜೆ ಸಲ್ಲಿಸಿದರು.
ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ್, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ ಜಗನ್ಮಾತೆ ತಾಯಿಗೆ ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : 2021-ಹೊಸ ವರ್ಷ: ಯುವ ಜನಾಂಗಕಕ್ಕೆ ಅಭಿವೃದ್ಧಿ ಪಥದ ಯೋಜನೆ ಅಗತ್ಯ
ಇದನ್ನೂ ಓದಿ : Oppo Reno 5 ಸ್ಮಾರ್ಟ್ ಫೋನ್ ಬಿಡುಗಡೆ; ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ