‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಅಧಿವೇಶನದಲ್ಲಿ ಗಂಭೀರ ಚರ್ಚೆ: ಸ್ಪೀಕರ್ ಕಾಗೇರಿ
Team Udayavani, Nov 28, 2020, 5:51 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದು, ಸಭಾಧ್ಯಕ್ಷರಿಗೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಲೋಕಸಭೆಯಲ್ಲಿ ಚರ್ಚೆಗೆ ಬರುವಂತೆ ಮಾಡುವ ಜವಾಬ್ದಾರಿ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ನ ಕೆವಡಿಯಾದಲ್ಲಿ ಸಭಾಧ್ಯಕ್ಷರ 80ನೇ ಸಮ್ಮೇಳನ ನಡೆದಿದ್ದು, ಇದರಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿವೆ. 25 ರಾಜ್ಯಗಳ ಸಭಾಧ್ಯಕ್ಷರು ಪಾಲ್ಗೊಂಡಿದ್ದು, ನವೆಂಬರ್ 26 ರಂದು ರಾಷ್ಟ್ರಪತಿಗಳು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಿದರು. ಸಂವಿಧಾನ ಬದ್ದ ಜವಾಬ್ದಾರಿ ಇರುವ ನಾವು ಸಮರ್ಥವಾಗಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ.
ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತೆಯ ಮೂರ್ತಿ ಎಲ್ಲರಿಗೂ ಅವಿಸ್ಮರಣೀಯ ಕ್ಷಣಗಳು. ಆ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಆಶ್ಚರ್ಯ ಮೂಡಿಸುವಂತಿದೆ. ಮಕ್ಕಳಿಗೆ ಚಿಲ್ಡ್ರನ್ ಪಾರ್ಕ್, ಕ್ಯಾಕ್ಟಸ್ ಗಾರ್ಡನ್, ಲೋಟಸ್ ಗಾರ್ಡನ್ ಎಲ್ಲವೂ ಭವ್ಯವಾಗಿ ನಿರ್ಮಾಣವಾಗಿದೆ.
ನರ್ಮದಾ ತಟದಲ್ಲಿ ಏಕತೆಯ ಮೂರ್ತಿ ಇರುವುದರಿಂದ ನೋಡಲು ಅಭೂತಪೂರ್ವವಾಗಿದೆ. ನಾಡಿನ ಜನರು ತಮ್ಮ ಪ್ರವಾಸವನ್ನು ಗುಜರಾತ್ ಗೆ ಒಮ್ಮೆ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು?
ಪ್ರಧಾನಿ ಮೋದಿ, ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದು, ಇದನ್ನು ಲೋಕಸಭೆಯಲ್ಲಿ ಚರ್ಚೆಗೆ ಬರುವಂತೆ ಮಾಡುವ ಜವಾಬ್ದಾರಿ ಇದೆ. ಈ ವಿಷಯದಲ್ಲಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ. ಕುಮಾರಸ್ವಾಮಿ, ಮಾಧುಸ್ವಾಮಿ ಜೊತೆ ಮಾತನಾಡಿ, ಅಧಿವೇಶನದ ಕೊನೆಯ ಎರಡು ದಿನ ಚರ್ಚಿಸಲು ತೀರ್ಮಾನಿಸಲಾಗಿದೆ.
ಶಾಸನ ಸಭೆಯ ಸದಸ್ಯರು ಇದನ್ನು ಗಂಭೀರವಾಗಿ ತೆಗೆದುಕೊಂಡು, ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ತಮ್ಮ ಸಲಹೆ ಸೂಚನೆ ನೀಡಿ, ಫಲಪ್ರದ ಚರ್ಚೆಯಾಗಿಸಬೇಕು. ಚುನಾವಣೆ ಸುಧಾರಣೆಯ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೆಲವು ಜಿಜ್ಞಾಸೆಗಳಿದ್ದು, ಮುಕ್ತವಾಗಿ ಚರ್ಚೆಯಾಗಲಿ ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ಅಧಿವೇಶನ ನಡೆಯಲಿದೆ. ಶಾಸಕರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು. ಪತ್ರಕರ್ತರಿಗೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 10 ಬಿಲ್ ಅಧಿವೇಶನದಲ್ಲಿದಲ್ಲಿ ಮಂಡನೆಯಾಗುವ ಸಾಧ್ಯತೆಯಿದ್ದು, ಇನ್ನು ಕೆಲವು ಬಿಲ್ ಗಳು ಸರ್ಕಾರದಿಂದ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್
ಕೋವಿಡ್ ಟೆಸ್ಟ್ ಮಾಡುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದು ರಾಷ್ಟ್ರಪತಿಗೆ ಪ್ರಧಾನಿಗೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ, ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಮಾಹಿತಿ ನೀಡಲು ಎಲ್ಲ ಸಿದ್ಧತೆಗಳನ್ನು.ಮಾಡಿಕೊಂಡಿದ್ದೇವೆ. ಈ ಕುರಿತ ಒಂದು ಪುಸ್ತಕ ಹೊರತರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ.
ನಾವು ಮಾಡಿದ ಚರ್ಚೆಯ ಬಗ್ಗೆ, ಸಭೆಯ ಮಾಹಿತಿಯನ್ನು ಸ್ಪೀಕರ್ ಸಮ್ಮೇಳನದಲ್ಲಿ ಎಲ್ಲರಿಗೂ ನೀಡಲಾಗಿದೆ. ಶೀಘ್ರವಾಗಿ ದೆಹಲಿಗೆ ತೆರಳಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444