ಸ್ವಚ್ಛತೆ‌ಗೆ ನಮ್ಮ ಮೊದಲ ಆದ್ಯತೆ ಅಭಿಯಾ‌ನಕ್ಕೆ ಚಾಲನೆ


Team Udayavani, Aug 20, 2021, 10:22 AM IST

fgfugh

ಶಿರಸಿ:  ಜೀವ ಜಲ‌ ಸಂರಕ್ಷಣೆಯಲ್ಲಿ‌  ರಾಜ್ಯಕ್ಕೆ ‌ಮಾದರಿ‌ ಕಾರ್ಯ‌ ಮಾಡುತ್ತಿರುವ ಜಲಯೋಗಿ ಶ್ರೀನಿವಾಸ ಹೆಬ್ಬಾರ್ ಅವರ ಬಹು ದಿನದ‌ ಕನಸಿನ ಸ್ವಚ್ಛತೆಗೆ  ನಮ್ಮ ಮೊದಲ ಆದ್ಯತೆಗೆ ಶುಕ್ರವಾರ ಚಾಲನೆ ಸಿಗಲಿದೆ.

ಕೆರೆ ಹೆಬ್ಬಾರ್ ಎಂದೇ ಹೆಸರಾದ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ  ಜೀವ ಜಲ ಕಾರ್ಯಪಡೆ ಕಟ್ಟಿಕೊಂಡು ನಗರದಲ್ಲಿ ಆರಕ್ಕೂ ಅಧಿಕ ಕೆರೆಗಳಿಗೆ ಪುನರುಜ್ಜೀವನ ಮಾಡುವ ಮೂಲಕ ಮನೆ ಮಾತಾಗಿದ್ದರು. ಆ ತಂಡ‌ ಈಗ ಈ ನಿರಂತರ ಅಭಿಯಾನ ಶುರುವಾಗಲಿದೆ.

ನಗರದ ಹೊರ ವಲಯದಲ್ಲಿ ‌ಬೇಕಾ ಬಿಟ್ಟಿ ತ್ಯಾಜ್ಯ ಬಿಸಾಕುವವರಿಗೂ ಈ ಹಿಂದೆ ದುಃಸ್ವಪ್ನವಾಗಿ‌‌ ಕೂಡ ಹೆಬ್ಬಾರ್ ರ ಜೀವ ಜಲ‌ಕಾರ್ಯಪಡೆ ಕೆಲಸ‌ ಮಾಡಿತ್ತು.

ಜಲ ಸಂರಕ್ಷಣೆಯ ಕಾರ್ಯದ‌ ಜೊತೆಗೆ ಕಾಲೇಜ್ ರಸ್ತೆಯಲ್ಲಿ ಬೇಕಾ ಬಿಟ್ಟಿ ಕಸ ಹಾಕುತ್ತಿದ್ದರು. ಇದಕ್ಕೂ ಸಿಸಿಟಿವಿ ಹಾಕಿಸಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಜಲ ಉಳಿಸಿದರೆ ಆಗದು, ಜಲ‌ ಮಲೀನ ಆಗದಂತೆ ನೋಡಿಕೊಳ್ಳಬೇಕು ಎಂದು ಹೆಬ್ಬಾರ್ ಕೆಲಸ‌ ಆರಂಭಿಸಿದ್ದರು.

ಇದೀಗ ಶ್ರೀನಿವಾಸ ಹೆಬ್ಬಾರ ಅವರ ತಂಡ ಮತ್ತೊಮ್ಮೆ ಸ್ವಚ್ಛತಾ ಅಭಿಯಾನಕ್ಕೆ ಕಂಕಣ ಕಟ್ಟಿಕೊಂಡಿದೆ.

ಇಡೀ‌ ನಗರದ ಹಾಗೂ ನಗರ ಜೋಡಿಸುವ ಪ್ರಮುಖ ರಸ್ತೆಗಳ ಮಾರ್ಗದಲ್ಲಿ ಸ್ವಚ್ಛತೆ ಮಾಡುವ ಹಾಗೂ ಶಿರಸಿ ಸುಂದರ ನಗರವಾಗಿಸುವ ಕನಸಿನಲ್ಲಿ ಈ ಕಾರ್ಯ ಆರಂಭವಾಗಿದೆ.

ಕುಮಟಾ, ಬನವಾಸಿ, ಯಲ್ಲಾಪುರ, ಕುಳವೆ, ಕರಿಗುಂಡಿ, ಸಿದ್ದಾಪುರ ಸೇರಿದಂತೆ ಎಲ್ಲ‌ ಮಾರ್ಗಗಳ ಸುಮಾರು ೫ ಕಿಮಿ ವ್ಯಾಪ್ತಿಯಲ್ಲಿ ಸ್ವಚ್ಛತೆ ‌ನಡೆಸಲಿದ್ದಾರೆ.

ಈ ನೂತನ ಅಭಿಯಾನಕ್ಕೆ ಈಗಾಗಲೇ ಒಂದು ಹೊಸ ಟ್ರಾಕ್ಟರ್ ಖರೀದಿಸಿದ್ದಾರೆ. ಟಿಪ್ಪರ್ ಹಾಗೂ ಜೆಸಿಬಿ ಬಳಸಿ ಹತ್ತು‌ ಜನರ ತಂಡ ಕಸ ಎತ್ತಲಿದೆ‌. ನಗರಸಭೆ ಈಗಾಗಲೇ ನಡೆಸುತ್ತಿರುವ ತ್ಯಾಜ್ಯ ಸಂಗ್ರಹ ನಡೆಸುತ್ತಿದ್ದು, ಅದಕ್ಕೆ ಪೂರಕವಾಗಿ ಇದು ಜೊತೆಯಾಗಲಿದೆ. ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇದನ್ನು ಹಾಕಲು ಮಾತುಕತೆ ನಡೆಸಲಾಗಿದೆ.

ಈ‌ ಸ್ವಚ್ಛತಾ ಅಭಿಯಾನ ಶುಕ್ರವಾರ ಬೆಳಿಗ್ಗೆ11 ಗಂಟೆಗೆ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ವಿಜಯ ಕರ್ನಾಟಕದ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ನಗರಸಭೆ ಅಧ್ಯಕ್ಷ ಗಣಪತಿ‌ ನಾಯ್ಕ, ಪೌರಾಯುಕ್ತ ಕೇಶವ ಛೌಗಲೆ ಇತರರು ಪಾಲ್ಗೊಳ್ಳಲಿದ್ದಾರೆ.

ಸ್ವಚ್ಛತೆಗೆ ಎಲ್ಲರೂ ಜೊತೆಯಾಗಬೇಕು. ಒಟ್ಟಾರೆ ಶಿರಸಿ ಸುಂದರವಾಗಿರಬೇಕು ಎಂಬುದು ನಮ್ಮ ಆಶಯ. ಒಂದು ತಿಂಗಳು ಸಮಾರೋಪಾದಿ‌ ಕೆಲಸ‌ ಮಾಡಿದರೆ ಒಂದು ಹಂತದ ಸ್ವಚ್ಛತೆ ಆಗಬಹುದು ಎಂದು ಶ್ರೀನಿವಾಸ ಹೆಬ್ಬಾರ್ ಹೇಳಿದರು.

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.