ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ
ಕೆಳ ಮಟ್ಟಕ್ಕೆ ಇಳಿದು ಉತ್ತರ ಕೊಡುವ ವ್ಯಕ್ತಿ ನಾನಲ್ಲ
Team Udayavani, May 29, 2022, 5:25 PM IST
ದಾವಣಗೆರೆ: ಪಠ್ಯಪುಸ್ತಕ ಮರು ಪರಿಷ್ಕರಣೆಯ ಸಂಬಂಧ ಉಂಟಾಗಿರುವ ವಿವಾದ ವಿಚಾರವಾಗಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೈಕ್ಷಣಿಕ ಘನತೆ ಉಳಿಯಬೇಕು ಎಂಬುದು ನನ್ನ ಕಳಕಳಿ. ಹಾಗಾಗಿ ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಬೇಕು. ಶೈಕ್ಷಣಿಕ ಘನತೆ ಉಳಿಯಲು ಮುಖ್ಯಮಂತ್ರಿ ಯವರ ಮಧ್ಯಪ್ರವೇಶ ಅನಿವಾರ್ಯವೂ ಹೌದು ಎಂದರು.
ನಮ್ಮ ಕಾಲದಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಅದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಹಾಗು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ನಡೆದಿತ್ತು. ಯಾವ ಪಠ್ಯವನ್ನ ಸೇರಿಸಲಾಗಿದೆ, ಬಿಟ್ಟಿದ್ದೇವೆ ಎಂಬುದಕ್ಕೆ ಸ್ಪಷ್ಟ, ನಿರ್ದಿಷ್ಟ ಕಾರಣ ನೀಡಲಾಗಿತ್ತು ಎಂದು ತಿಳಿಸಿದರು.
ಈಗ ಪಠ್ಯಪುಸ್ತಕ ಪರಿಷ್ಕರಣೆ ಆಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗು ಸಂವಿಧಾನ ಆಶಯಕ್ಕೆ ಪಠ್ಯಪುಸ್ತಕ ರಚನೆ ಆಗಬೇಕು. ಈ ಬಾರಿಯ ಮರು ಪರಿಷ್ಕರಣೆಯಲ್ಲಿ ಅನೇಕ ಮುಖ್ಯ ಪಠ್ಯಗಳು ಕೈಬಿಟ್ಟಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಈ ವಿವಾದ ಬಗೆಹರಿಸಲು ಮುಖ್ಯಮಂತ್ರಿಯವರು ಕೂಲಂಕುಶವಾಗಿ ಪರಿಶೀಲಿಸಿ ವಿವಾದಕ್ಕೆ ತೆರೆ ಎಳೆಯಬೇಕು. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗ್ಗೆಯೇ ಬೇಸರ ಬರಬಾರದು.ಅದಕ್ಕಾಗಿಯೇ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.
ಇದನ್ನೂ ಓದಿ : ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ
ಪಠ್ಯಪುಸ್ತಕ ಮರು ಪರಿಷ್ಕರಣೆ ಬಗ್ಗೆ ಅನೇಕ ಲೇಖಕರು ಆಕ್ಷೇಪಗಳನ್ನು ಮಾಡಿದ್ದಾರೆ.ವೈಯಕ್ತಿಕವಾಗಿ ನನ್ನ ಮೇಲೆಯು ಕೆಲವರು ಆರೋಪ ಮಾಡಿದ್ದಾರೆ. ಅನೇಕ ವೈಯಕ್ತಿಕ ವಾಗಿ ತೇಜೋವಧೆ ಮಾತುಗಳು ಬರುತ್ತಿರುವುದರಿಂದ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ಅವರ ಮಟ್ಟಕ್ಕೆ ಇಳಿದು ಉತ್ತರ ಕೊಡುವ ವ್ಯಕ್ತಿ ನಾನಲ್ಲ. ಕರ್ನಾಟಕದ ಜನ ಅದಕ್ಕೆ ಉತ್ತರ ಕೊಡುತ್ತಾರೆ. ಕಲುಷಿತ ವಿಷಯಗಳ ಬಗ್ಗೆ ಉತ್ತರ ಕೊಡುವುದಿಲ್ಲ. ಕನ್ನಡದ ಸಂವೇದನೆ,ಮೌಲ್ಯ ನನಗೆ ಕಲಿಸಿದಂತೆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್
ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ದೇಶ ಮತ್ತು ಧರ್ಮ ರಕ್ಷಣೆಗಾಗಿ ಅಗ್ನಿಪಥ ಯೋಜನೆಗೆ ಯುವಕರು ಸೇರಬೇಕು : ಶ್ರೀಶೈಲಗೌಡ ಪಾಟೀಲ
ಚಾಮುಂಡಿ ಬೆಟ್ಟದಲ್ಲಿರುವವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ; ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್
ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ