ದಾವೂದ್ ಆಪ್ತನ ಹೊಸ ವರಸೆ
Team Udayavani, Nov 6, 2019, 12:10 AM IST
ಲಂಡನ್: ಇಲ್ಲಿನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯದಲ್ಲಿ ತನ್ನ ಗಡಿಪಾರು ಮನವಿಯ ವಿರುದ್ಧ ಹೋರಾಡುತ್ತಿರುವ ದಾವೂದ್ ಇಬ್ರಾಹಿಂ ಗುಂಪಿನ ಪ್ರಮುಖ ನಾಯಕ ಜಬೀರ್ ಮೋತಿ, ತನ್ನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡದಿರುವಂತೆ ತಾನು ಮಂಡಿಸಿರುವ ವಾದಕ್ಕೆ ಪುಷ್ಟಿ ನೀಡುವ ಪ್ರಕರಣವೊಂದನ್ನು ನ್ಯಾಯಾಲಯದ ಮುಂದಿಟ್ಟಿದ್ದಾನೆ.
ಇತ್ತೀಚೆಗೆ, ಅಮೆರಿಕದಲ್ಲಿ ಲೈಂಗಿಕ ಹಗರಣದವೊಂದರಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದ ಆ ದೇಶದ ಜೆಫ್ರಿ ಎಪ್ಸ್ಟೇನ್ ಎಂಬ ಉದ್ಯಮಿ, ತನ್ನ ಸೆಲ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ತನ್ನ ವಾದದಲ್ಲಿ ಪ್ರಸ್ತಾಪಿಸಿರುವ ಜಬೀರ್, ಅಮೆರಿಕದಲ್ಲಿನ ಜೈಲುಗಳ ಪರಿಸ್ಥಿತಿ ಉತ್ತಮವಾಗಿಲ್ಲ. ತನ್ನನ್ನು ಅಮೆರಿಕ ಜೈಲಿಗೆ ಕಳುಹಿಸಿದರೆ ತಾನೂ ಜೆಫ್ರಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಅಲವತ್ತುಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ