ಮ್ಯಾನ್ಮಾರ್‌ : ಸಂಕಷ್ಟದ ನೆರಳು ಹಿಂದಿದ್ದರೂ ಎಚ್ಚೆತ್ತಿಲ್ಲ !

Team Udayavani, Apr 3, 2020, 1:15 PM IST

ಮ್ಯಾನ್ಮಾರ್‌ : ಸಂಕಷ್ಟದ ನೆರಳು ಹಿಂದಿದ್ದರೂ ಎಚ್ಚೆತ್ತಿಲ್ಲ !

ಮ್ಯಾನ್ಮಾರ್‌ : ನೆರೆ ದೇಶದಲ್ಲೇ ಕೋವಿಡ್ ಸಾವಿನ ಕರೆ ರಿಂಗಣಿಸಿ, ಈಗ‌ ಇಡೀ ವಿಶ್ವದೆಲ್ಲೆಡೆ ಕ್ಷಣ ಕ್ಷಣಕ್ಕೂ ಕರೆ ನೀಡುತ್ತಿದೆ. ಅಮೆರಿಕ ಸಹ ತತ್ತರಿಸಿ ಹೋಗಿದೆ.

ಇಂಥ ಸಂದರ್ಭದಲ್ಲಿ ಮ್ಯಾನ್ಮಾರ್‌ ದೇಶವಂತೂ ತಣ್ಣಗೆ ಕುಳಿತಿದೆ.
ಅಲ್ಲೀಗ ನೈರ್ಮಲ್ಯಕ್ಕೂ ಮಹತ್ವ ಕಡಿಮೆ ನೀಡುತ್ತಿದ್ದಾರೆ. ಸ್ಥಳಾಂತರ ಮಾಡಿದ ಕಾರ್ಮಿಕರ ಕುಟುಂಬಗಳು ವಾಸ ಮಾಡುತ್ತಿರುವ ಪ್ರದೇಶದಲ್ಲಿ ಜನಸಂದಣಿ ಹೆಚ್ಚಿದೆ. ಲಾಕ್‌ಡೌನ್‌ ಆಗಲಿ ಸಾಮಾಜಿಕ ಅಂತರ ನಿಯಮವಾಗಲಿ ಪಾಲನೆ ಆಗುತ್ತಿಲ್ಲ, ಇದಾವುದನ್ನೂ ಸರಕಾರ ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸ್ಥಳೀಯ ಮಾನವ ಹಕ್ಕು ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಕಳಪೆ ಆರೋಗ್ಯ ವ್ಯವಸ್ಥೆ
ಸುಮಾರು 5.4 ಕೋಟಿ ಜನಸಂಖ್ಯೆಯ ಮ್ಯಾನ್ಮಾರ್‌ ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಹೊಂದಿಲ್ಲ. ಇಲ್ಲಿನ ಜನಸಂಖ್ಯೆಯ ಶೇ.80ರಷ್ಟು ಜನರು ಶುದ್ಧ ನೀರಿನ ಸೌಲಭ್ಯ, ಅಗತ್ಯ ಸೇವೆಗಳಿಂದ ವಂಚಿತರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನೆಹಗಿನ್‌ಪಾವೊ ಕಿಪೆjನ್‌ ಅಲ್ಲಿನ ಆರೋಗ್ಯ ಸ್ಥಿತಿಗಳನ್ನು ತೆರೆದಿಟ್ಟಿದ್ದಾರೆ.

40 ಜನರಿಗೆ ಒಂದೇ ಶೌಚಾಲಯ
ಈ ಹಿಂದೆ ಮ್ಯಾನ್ಮಾರ್‌ನಲ್ಲಿ ನಡೆದ ಕೋಮು ಗಲಭೆಯಿಂದ ಸಾವಿರಾರು ಜನರನ್ನು ಸ್ಥಳಾಂತರ ಗೊಳಿಸಿದ್ದು, ನರಕ ಯಾತನೆ ಅನುಭ ವಿಸುವಂತಾಗಿದೆ. ಇಲ್ಲಿನ ಸಮುದಾಯಗಳಲ್ಲಿ ವಾಸಿಸುತ್ತಿರುವ ವರು ಒಂದು ಶೌಚಾಲಯವನ್ನು 40 ಜನರು ಹಂಚಿಕೊಳ್ಳುತ್ತಿದ್ದು, ದಿನೇ ದಿನೆ ರೋಗ ಹರಡುವ ಭೀತಿ ಹೆಚ್ಚುತ್ತಲೇ ಇದೆ.

ಎಚ್ಚೆತ್ತುಕೊಳ್ಳದ ಸರಕಾರ
ಮ್ಯಾನ್ಮಾರ್‌ ಚೀನದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಪ್ರತಿನಿತ್ಯ ಕೆಲಸದ ನಿಮಿತ್ತ ಕಾನೂನು ಬಾಹಿರವಾಗಿ ಜನರು ಗಡಿ ದಾಟಿ ಹೋಗುತ್ತಲೇ ಇದ್ದಾರೆ.

ಚೀನ ಕೋವಿಡ್ 19 ಸಂಕಷ್ಟದಿಂದ ಇದೀಗ ಚೇತರಿಸಿಕೊಳ್ಳುತ್ತಿದೆ. ಇದರ ಮಧ್ಯೆಯೂ ನೂರಾರು ಕಾರ್ಮಿಕರು ಅತ್ತ ಪ್ರಯಾಣಿಸಿ ಬಂದರೂ ಯಾವುದೇ ತಪಾಸಣೆಗೆ ಒಳಗಾಗದಿರುವುದು ಆತಂಕವನ್ನು ಹೆಚ್ಚು ಮಾಡಿಸಿದೆ.

300 ಪ್ರಕರಣಗಳು ಹೆಚ್ಚಳ
ಕಳೆದ ವಾರವಷ್ಟೇ ಕೋವಿಡ್ 19 ಮೊದಲ ಪಾಸಿಟವ್‌ ಪತ್ತೆಯಾಗಿದ್ದ ಮ್ಯಾನ್ಮಾರ್‌ನಲ್ಲಿ ಇದೀಗ 300 ಪ್ರಕರಣಗಳಾಗಿದ್ದು, ಒಂದು ಸಾವು ಘಟಿಸಿದೆ. ಇಲ್ಲಿನ ಮಾಧ್ಯಮಗಳಲ್ಲಿ ಮ್ಯಾನ್ಮಾರ ಸರಕಾರದ ಮಂದಗತಿ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಅಲ್ಲದೇ, ಈ ಧೋರಣೆಯು ಮುಂಬರುವ ದಿನಗಳಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾದೀತು ಎಂದೂ ಎಚ್ಚರಿಸಿವೆ. ಆದರೂ ಸರಕಾರದ ಕ್ರಿಯಾಶೀಲತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನಲಾಗಿದೆ.

ಪ್ರಾಥಮಿಕ ಹಂತದಲ್ಲಿದೇವೆ ಎಂದು ನಿರ್ಲಕ್ಷé ತೋರಿದ ರಾಷ್ಟ್ರಗಳಿಂದು ಅಸಹಾಯಕ ಸ್ಥಿತಿಯಲ್ಲಿದ್ದು, ಮುಂದೆ ಮ್ಯಾನ್ಮಾರ್‌ ಕೂಡ ಇದೇ ಸರದಿಯಲ್ಲಿ ನಿಲ್ಲಲಿದೆ ಎಂಬ ಆತಂಕ ತಜ್ಞರದ್ದು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.