ಅರ್ಧ ಮೆದುಳಿಲ್ಲದವರು ಹೇಗಿರುತ್ತಾರೆ?

Team Udayavani, Nov 22, 2019, 7:18 AM IST

ನ್ಯೂಯಾರ್ಕ್‌: ಅರ್ಧ ಮೆದುಳು ಇಲ್ಲದ ವ್ಯಕ್ತಿಗಳು ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾರೆ ಎಂಬ ಭಾವನೆ ಮೂಡುವುದು ಸಹಜ. ಆದರೆ, ನಿಜಕ್ಕೂ ಅರ್ಧ ಮೆದುಳು ಕಳೆದುಕೊಂಡವರು ಹೇಗಿರುತ್ತಾರೆ ಗೊತ್ತಾ?, ಈ ಸುದ್ದಿ ಓದುತ್ತಿರುವ ನಿಮ್ಮಷ್ಟೇ ಶಕ್ತರಾಗಿರುವ ಕಾರ್ಯವೈಖರಿ ಹೊಂದಿರುತ್ತಾರೆ. ಇದು ಅಮೆರಿಕದಲ್ಲಿ ಅತ್ಯುನ್ನತ ಸಂಸ್ಥೆಯ ಸಂಶೋಧಕ‌ರು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.

ಅರ್ಧ ಮೆದುಳು ಇರುವ ಮನುಷ್ಯರು ಕೂಡ ಸಾಮಾನ್ಯರಂತೆ ಕಾರ್ಯ ಚಟುವಟಿಕೆ ನಡೆಸಬಲ್ಲರು ಎಂದು ಎಂಆರ್‌ಐ ಅಧ್ಯಯನ ಮೂಲಕ ಸಾಬೀತಾಗಿದೆ. ಬಾಲ್ಯದಲ್ಲಿ ವಿವಿಧ ಕಾರಣಗಳಿಂದ ಅರ್ಧ ಮೆದುಳು ಕಳೆದುಕೊಂಡವರು ಹಾಗೂ ಮೆದುಳು ಹಾನಿಗೊಳಗಾದವರು ಸಾಮಾನ್ಯ ವ್ಯಕ್ತಿಗಳಂತೆಯೇ ಮಾತನಾಡುವುದು, ಆಲಿಸುವುದು, ದಿನನಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ಕಂಡು ಬಂದಿದೆ.

ಅಧ್ಯಯನಕ್ಕೆ 1482 ಮಂದಿಯ ಬಳಕೆ: ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಆರು ಮಂದಿ ಸಂಶೋಧಕ ತಂಡವು, ಬಾಲ್ಯದಲ್ಲಿ ಅರ್ಧಭಾಗ ಮೆದುಳು ಕಳೆದುಕೊಂಡ 1482 ಮಂದಿಯನ್ನು ಎಂಆರ್‌ಐ ಸ್ಕ್ಯಾನ್‌ ಮಾಡಿ ಅಧ್ಯಯನ ನಡೆಸಿದಾಗ ಎಲ್ಲರಂತೆಯೇ ಇವರೂ ಜೀವನ ನಡೆಸುತ್ತಿರುವುದು ದೃಢಪಟ್ಟಿದೆ.
ನಾನು ಕಂಪ್ಯೂಟರ್‌ ಮುಂದೆ ಕುಳಿತುಕೊಂಡು ಅರೆ ಮೆದುಳು ಹೊಂದಿರುವವರ ವ್ಯಕ್ತಿಗಳ ಇಮೇಜ್‌ ನೋಡಿದೆ. ಅಚ್ಚರಿಯ ರೀತಿಯಲ್ಲಿ ಅವರು ಸಾಮಾನ್ಯರಂತೆಯೇ ಮಾತನಾಡುತ್ತಿದ್ದಾರೆ. ನಡೆದಾಡುತ್ತಿದ್ದಾರೆ. ಎಲ್ಲ ರೀತಿಯಲ್ಲೂ ಚುರುಕಾಗಿದ್ದಾರೆ. ಇವರ ಕಾರ್ಯವೈಖರಿ ನಿಜಕ್ಕೂ ಅಚ್ಚರಿದಾಯಕ ನಡೆ ಎಂದು ಇನ್ ಸ್ಟಿಟ್ಯೂಟ್ ನ ನರರೋಗ ವಿಜ್ಞಾನಿ ಡೋರಿಟ್‌ ಕ್ಲೆಮಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ