ಸಾಧನೆಯ ಹಸಿವಿರಲಿ

Team Udayavani, Jul 23, 2018, 3:57 PM IST

23-july-15.jpg

ಜೀವನದಲ್ಲಿ ವೈಫ‌ಲ್ಯದ ಮೇಲೆ ವೈಫ‌ಲ್ಯ ಅನುಭವಿಸಿದ ವ್ಯಕ್ತಿ ಈಗ ವಿಶ್ವದ ಅಗ್ರ ಶ್ರೀಮಂತರಲ್ಲಿ ಒಬ್ಬ. ಆತ ಬೇರೆ ಯಾರೂ ಅಲ್ಲ ಚೀನದ ಕುಬೇರ ಜಾಕ್‌ ಮಾ. ಜಾಕ್‌ ಮಾ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಹಣಕಾಸಿನ ವಿಚಾರಕ್ಕೆ ಬಂದ್ರೆ ಅವರೇನು ಅಂತಹ ಸ್ಥಿತಿವಂತರಂತೂ ಆಗಿರಲಿಲ್ಲ. ಆದರೆ ಓದುವ ವಿಚಾರದಲ್ಲಿ ಜಾಕ್‌ ಮಾ ತುಂಬಾ ಜಾಣ. ಜತೆಗೆ ತುಂಬಾ ಹಠಮಾರಿ. ಶಾಲಾ ದಿನಗಳಲ್ಲೇ ತನ್ನೂರಿಗೆ ಬರುತ್ತಿದ್ದ ವಿದೇಶೀ ಪ್ರವಾಸಿಗರಿಗೆ ಇಂಗ್ಲಿಷ್‌ ಟೂರ್‌ ಹೆಸರಲ್ಲಿ ಅವರನ್ನು ಊರು ಸುತ್ತಾಡಿಸುವ ಕೆಲಸ ಮಾಡುತ್ತಿದ್ದ.

ವಿದ್ಯಾಭ್ಯಾಸ ಎಲ್ಲ ಮುಗಿದ ಬಳಿಕ ಆರಿಸಿಕೊಂಡಿದ್ದು ಶಿಕ್ಷಕ ವೃತ್ತಿ. ಅವರು ಶಾಲಾ ದಿನಗಳಿಂದಲೂ ತುಂಬಾ ಹಾಸ್ಯಪ್ರಿಯ. ಅವರ ಹಾವಭಾವಗಳೆಲ್ಲ ಹಾಸ್ಯಭರಿತವಾಗಿತ್ತು. ಪಾಠ ಮಾಡುವಾಗ್ಲೂ ಅದೇ ಶೈಲಿ ಮುಂದುವರಿಸಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷರಾದರು. ಆ ಕಾಲಕ್ಕೆ ಅವರಿಗೆ ಬರುತ್ತಿದ್ದ ಸಂಬಳ 12 ಡಾಲರ್‌. ಆದರೆ ಎಷ್ಟು ದಿನ ಇದನ್ನೇ ಮಾಡುವುದು ಅನ್ನೋದು ಅವರ ತಲೆಯಲ್ಲಿ ಬೇಸರ ಕಾಡುತ್ತಲೇ ಇತ್ತು. ಆಗಿದ್ದಾಗಲಿ ಎಂದು ಸಿಕ್ಕಸಿಕ್ಕ ಕಡೆಯೆಲ್ಲ ಕೆಲಸಕ್ಕೆ ಹಾತೊರೆಯುತ್ತಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಕೆ.ಎಫ್.ಸಿ. ಚೀನದಲ್ಲಿ ತನ್ನ ಬ್ರ್ಯಾಂಚ್‌ ಆರಂಭಿಸುವಾಗ 24 ಜನ ಕೆಲಸಕ್ಕೆ ಅರ್ಜಿ ಹಾಕಿದರು. ಅದರಲ್ಲಿ 23 ಜನ ಆಯ್ಕೆಯಾದರು. ಆದರೆ ಜಾಕ್‌ ಮಾ ಮಾತ್ರ ಆಯ್ಕೆಯಾಗಲಿಲ್ಲ.!

ಅನಂತರ ಬೇರೆಬೇರೆ ಕೆಲಸಕ್ಕೆ ಅರ್ಜಿ ಹಾಕಿದರೂ ತಿರಸ್ಕೃತಗೊಂಡಾಗ ಅವರು ಬೇಸರಿಸಲಿಲ್ಲ. ಇಂಗ್ಲಿಷ್‌ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅವರ ಇಂಗ್ಲಿಷ್‌ ಅದೆಷ್ಟು ಅದ್ಭುತವಾಗಿತ್ತು ಎಂದರೆ 1995ರಲ್ಲಿ ಚೀನಾ ಸರಕಾರದ ಒಂದು ಪ್ರಾಜೆಕ್ಟ್ಗೆ ಜಾಕ್‌ ಮಾ ಆಯ್ಕೆಯಾಗಿ ಅಮೆರಿಕಕ್ಕೆ ಭೇಟಿ ಕೊಡುತ್ತಾರೆ. ಅಲ್ಲಿಂದ ಅವರ ಜೀವನ ಹೊಸ ತಿರುವು ಪಡೆಯುತ್ತೆ..!

ಅಮೆರಿಕಕ್ಕೆ ಹೋದವರು ಮೊದಲ ಬಾರಿಗೆ ಇಂಟರ್‌ನೆಟ್‌ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಚೀನಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಅವರಿಗೆ ಸಿಗುವುದಿಲ್ಲ. ಆಗಲೇ ಅವರು ಚೀನದಲ್ಲಿ ಇಂಟರ್‌ನೆಟ್‌ ಕ್ರಾಂತಿ ಮಾಡೋಕೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ ತನ್ನ ಸ್ನೇಹಿತರೊಂದಿಗೆ ಚೀನಾದಲ್ಲಿ ಇ- ಕಾಮರ್ಸ್‌ ಕಂಪೆನಿ ಪ್ರಾರಂಭಿಸುವ ಐಡಿಯಾ ನೀಡುತ್ತಾರೆ. ಸ್ನೇಹಿತರ ಪರ- ವಿರೋಧದ ನಡುವೆಯೂ ಅವರು ಚೀನದಲ್ಲಿ ಶೇ. 5ರಷ್ಟು ಜನ ಕಂಪ್ಯೂಟರ್‌ ಉಪಯೋಗಿಸುವ ಸಮಯದಲ್ಲಿ ‘ಆಲಿಬಾಬ’ ಕಂಪೆನಿ ಶುರು ಮಾಡುತ್ತಾರೆ. ಆರಂಭದಲ್ಲಿ ಕಷ್ಟ ಎಂದೆಸಿದರೂ ಜಾಕ್‌ ಮಾ ಚಿಂತೆ ಮಾಡಲಿಲ್ಲ. ಕಂಪೆನಿ ಹಂತಹಂತವಾಗಿ ಬೆಳೆದು ಈಗ ಜಾಕ್‌ ಮಾ ಅವರ ಆಸ್ತಿ 25 ಬಿಲಿಯನ್‌ ಡಾಲರ್‌! 2014ರ ಚೀನಾದ ಶ್ರೀಮಂತರ ಪಟ್ಟಿಯಲ್ಲಿ ಜಾಕ್‌ ಮಾ ಈಗ ನಂಬರ್‌ ವನ್‌.

 ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.