ಕಡಿಮೆ ಪರಿಶ್ರಮದ ಬೆಳೆ ದೀವಿ ಹಲಸು

Team Udayavani, May 19, 2019, 9:04 AM IST

b-6

ದೀವಿ ಹಲಸು ಒಂದು ಜನಪ್ರಿಯ ತರಕಾರಿ. ಅವಿಭಜಿತ ದಕ್ಷಿಣ ಕನ್ನಡ, ಮಲೆನಾಡು, ಕೊಡಗು ಮೊದಲಾದ ಕಡೆಗಳಲ್ಲಿ ಇದನ್ನು ತೆಂಗು, ಅಡಿಕೆ ತೋಟಗಳ ಮಧ್ಯೆ ಬೆಳೆಯಲಾಗುತ್ತದೆ.

ಅತ್ಯಂತ ಕಡಿಮೆ ಪರಿಶ್ರಮ, ಖರ್ಚು, ಆರೈಕೆ ಅಗತ್ಯವಿರುವ ದೀವಿ ಹಲಸಿನ ಬೇಸಾಯ ತೀರಾ ಸರಳ. ಮನೆಯ ಸುತ್ತಮುತ್ತ ಖಾಲಿ ಜಾಗ ಇದ್ದಲ್ಲಿ ಇದನ್ನು ನೆಟ್ಟು ಬೆಳೆಸಬಹುದು. ಇದೊಂದು ವಿಶಾಲವಾಗಿ ಕೊಂಬೆಗಳನ್ನು ಚಾಚಿ ಬೆಳೆಯುವ ಮರವಾಗಿದ್ದು, ಸುಮಾರು 15ರಿಂದ 20 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ದೀವಿ ಹಲಸು ಮೋರೆಸಿ ಸಸ್ಯ ಕುಟುಂಬಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್‌ ಆಲ್ತಿಲಿಸ್‌. ಇದು ಹಲಸಿನ ಮರದ ವರ್ಗಕ್ಕೆ ಸೇರಿದರೂ ದೀವಿ ಹಲಸಿನಲ್ಲಿ ಬೀಜಗಳಿಲ್ಲ, ಮೇಣವೂ ಕಡಿಮೆ. ಹಾಗಾಗಿ ಗುಣಧರ್ಮದಲ್ಲಿ ವೈರುಧ್ಯಗಳಿವೆ.

ಕನ್ನಡದಲ್ಲಿ ದೀವಿ ಹಲಸು, ತುಳುವಿನಲ್ಲಿ ಜೀಗುಜ್ಜೆ, ಆಂಗ್ಲ ಭಾಷೆಯಲ್ಲಿ ಬ್ರೆಡ್‌ ಫ್ರುಟ್, ತಮಿಳಿನಲ್ಲಿ ಕರಿಪಾಲ ಎಂದು ಕರೆಯುತ್ತಾರೆ. ಬೇರಿನಿಂದಲೇ ಸಸ್ಯಾಭಿವೃದ್ಧಿ ಮಾಡುವ ಕಾರಣ ಬೇರು ಹಲಸು ಎಂದೂ ಕರೆಯಲಾಗುತ್ತದೆ. ದೀವಿ ಹಲಸಿನಲ್ಲಿ ವಿಟಮಿನ್‌ ಸಿ, ಅಯೋಡಿನ್‌, ಕಾರ್ಬನ್‌, ಹೈಡ್ರೇಟ್, ಶರ್ಕರ ಪಿಷ್ಟ, ಕ್ಯಾಲ್ಸಿಯಂ, ರಂಜಕ, ಕ್ಯಾರೊಟಿನ್‌ ಮೊದಲಾದವುಗಳು ಅಧಿಕ ಪ್ರಮಾಣದಲ್ಲಿವೆ.

ಹವಾಗುಣ, ಮಣ್ಣು
ನೀರು ಹರಿಯುತ್ತಿರುವ ಹಳ್ಳಗಳ ಬದಿ, ತೋಟದ ತಂಪು ವಾತಾವರಣ ಬೆಳೆಗೆ ಅವಶ್ಯ. ಬೇಸಗೆಯಲ್ಲಿ ಬಿಸಿಲಿನ ಝಳ ಹೆಚ್ಚಾದರೆ ದೀವಿ ಹಲಸು ಪಕ್ವವಾಗುವ ಮೊದಲೇ ಬಾಡಿ ಬೀಳುವುದುಂಟು. ಕಪ್ಪು, ಕೆಂಪು ಸಹಿತ ಅಧಿಕ ತೇವಾಂಶವಿರುವ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.

ಗೊಬ್ಬರ, ಕಾಯಿಲೆ
ಹಟ್ಟಿಗೊಬ್ಬರ, ಆಡಿನ ಹಿಕ್ಕೆ, ಕೋಳಿ ಗೊಬ್ಬರ, ವಿವಿಧ ಹಿಂಡಿಗಳು, ಕುರಿಗೊಬ್ಬರ, ಸುಡುಮಣ್ಣು, ಸೊಪ್ಪು, ಸಾವಯವ ಗೊಬ್ಬರಗಳನ್ನು ಬಳಸಬಹುದು. ಮಳೆಗಾಲದಲ್ಲಿ ದೀವಿ ಮರದ ಕೊಂಬೆಗಳಿಗೆ ಶಿಲೀಂಧ್ರ ರೋಗ ತಗುಲುವ ಸಾಧ್ಯತೆಯಿದೆ. ಅದರಿಂದ ಕೊಂಬೆಗಳು ಸಾಯಲಾರಂಭಿಸುತ್ತವೆ. ನಿವಾರಣೆಗೆ ಬೋರ್ಡೋ ದ್ರಾವಣದ ಸಿಂಪಡಣೆ, ರೋಗ ಬಂದ ಕೊಂಬೆ ಕತ್ತರಿಸಿ ಆ ಜಾಗಕ್ಕೆ ಬೋರ್ಡೋ ಮಿಶ್ರಣ ಹಚ್ಚುವುದು ಸೂಕ್ತ.

ಕೃಷಿ ಹೇಗೆ?
ದೀವಿ ಹಲಸಿನ ಸಸ್ಯಾಭಿವೃದ್ಧಿಯನ್ನು ಸಾಮಾನ್ಯವಾಗಿ ಬೇರುಗಳಿಂದ ಮಾಡಲಾಗುತ್ತದೆ. ನೆಲದ ಆಳದಲ್ಲಿ ಹರಡಿ ಬೆಳೆಯುವ ಗಿಡದ ಬೇರನ್ನು ಸ್ವಲ್ಪ ಗಾಯಗೊಳಿಸಿ ಅನಂತರ ಅದನ್ನು ಮಣ್ಣಿನಿಂದ ಮುಚ್ಚಬೇಕು. ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಗಾಯಗೊಳಿಸಿದ ಜಾಗದಿಂದ ಚಿಗುರೊಡೆದು ಗಿಡವಾಗುತ್ತದೆ. ಗಿಡದ ಬೇರನ್ನು ಉಳಿಯುವಂತೆ ಮಾಡಿ, ಬೇರು ಸಹಿತ ಸಸ್ಯವನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ಬೆಳೆಸಿ, ಅನಂತರ ಸೂಕ್ತ ಸ್ಥಳದಲ್ಲಿ ಎರಡು ಅಡಿ ಉದ್ದ ಮತ್ತು ಅಗಲ ಹಾಗೂ ಒಂದೂವರೆ ಅಡಿ ಆಳದ ಗುಂಡಿ ತೋಡಿ ಅದಕ್ಕೆ ಸುಡುಮಣ್ಣು ಮಿಶ್ರ ಮಾಡಿ ನೆಡಬೇಕು. ಬಳಿಕ ಗಿಡ ಚೆನ್ನಾಗಿ ಚಿಗುರುವ ವರೆಗೆ ಪ್ರತಿ ದಿನ ಸ್ವಲ್ಪ ನೀರುಣಿಸುವುದು ಉತ್ತಮ. ಬಳಿಕ ಅದಕ್ಕೆ ಹಟ್ಟಿಗೊಬ್ಬರ, ಸೊಪ್ಪು, ಇತ್ಯಾದಿಗಳನ್ನು ಹಾಕಿದರೆ ಗಿಡ ಚೆನ್ನಾಗಿ ಬೆಳೆಯುವುದು. ಮಳೆಗಾಲ ಇದರ ನಾಟಿಗೆ ಹೆಚ್ಚು ಸೂಕ್ತ ಸಮಯ. ಗಿಡನೆಟ್ಟು ನಾಲ್ಕೈದು ವರ್ಷಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. 15- 20 ವರ್ಷಗಳವರೆಗೂ ಫ‌ಲ ನೀಡುತ್ತದೆ. ಸ್ಥಳೀಯ ತಳಿಯಲ್ಲದೇ ಕಸಿ ಕಟ್ಟುವ ಮೂಲಕ ಕೆಲವೊಂದು ಹೈಬ್ರಿಡ್‌ ತಳಿಗಳನ್ನೂ ಈಗ ಅಭಿವೃದ್ಧಿ ಪಡಿಸಲಾಗಿದೆ.

  • ಗಣೇಶ ಕುಳಮರ್ವ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.