ಧೈರ್ಯ ತುಂಬಿದ ಹಿರಿಜೀವಕ್ಕೊಂದು ನಮನ

Team Udayavani, Apr 22, 2019, 6:05 AM IST

PTI10_30_2018_000088B

ಬುದ್ಧಿ ಬಂದಾಗಿನಿಂದ ಮನೆಯಿಂದ ಹೊರಗಡೆ ಒಬ್ಬಳೇ ಹೋಗುವ ಅಭ್ಯಾಸವಿದ್ದರೂ ಹೊಸ ಊರಿಗೆ ಹೋಗುವ ವೇಳೆ ಮನದಲ್ಲಿ ಹೆದರಿಕೆ, ತಳಮಳ. ಕೆಲವೊಂದು ಬಾರಿ ಈ ಹಿಂದೆ ಹೋದ ಊರಿಗೆ ಮತ್ತೆ ಹೋಗಬೇಕು ಎಂದಾಗಲು ಕೊಂಚ ಗಾಬರಿ. ಹೀಗೆ ಒಂದು ದಿನ ಮಣಿಪಾಲದಿಂದ ಕಟೀಲು ದೇವಸ್ಥಾನ ಏಕಾಂಗಿಯಾಗಿ ಹೊರಡಲು ನಿರ್ಧರಿಸಿದ್ದೆ. ಈ ಮೊದಲು ಹೋಗಿದ್ದರೂ ಮಣಿಪಾಲದಿಂದ ಹೋಗುವ ದಾರಿ ಮಾತ್ರ ಹೊಸದಾಗಿತ್ತು.

ದಾರಿಯನ್ನು ಮೊದಲೇ ಕೇಳಿಕೊಂಡಾಗಿತ್ತು. ಹೀಗಾಗಿ ದೈರ್ಯ ಮಾಡಿ ಮಂಗಳೂರಿನ ಬಸ್‌ ಹಿಡಿದು ಮೂಲ್ಕಿ ತಲುಪಿದೆ.

ಅಲ್ಲಿಂದ ಕಟೀಲು ಕಡೆ ಸಾಗುವ ಬಸ್‌ಗಳ ದಾರಿಯನ್ನು ತಿಳಿದು ಅಲ್ಲಿ ಬಂದು ನಿಂತೆ. ತುಂಬಾ ಹೊತ್ತಾದರೂ ಬಸ್‌ ಬರಲಿಲ್ಲ. ಅತ್ತ ಇತ್ತ ನೋಡುತ್ತಾ, ಸಮಯ ನೋಡುತ್ತಾ ಕಟೀಲು ತಲುಪುವುದು ತಡವಾಗುವುದೇ ಎಂದು ಯೋಚಿಸುತ್ತಾ ಇದ್ದೆ. ಕಾದು ಸುಸ್ತಾಗಿದ್ದ ನಾನು ಅಲ್ಲೇ ಬಸ್ಸಿಗಾಗಿ ಕಾಯುತ್ತಿದ್ದ ಹಿರಿಯ ವ್ಯಕ್ತಿ ಬಳಿ ಹೋಗಿ ಬಸ್ಸಿನ ಸಮಯದ ಬಗ್ಗೆ ವಿಚಾರಿಸಿದೆ. ತುಳುವಿನಲ್ಲೇ ಮಾತನಾಡಲಾರಂಭಿಸಿದ ಅವರು ಯಾವ ಊರು ಎಂದೆಲ್ಲ ಪ್ರಶ್ನಿಸಿ ಇಲ್ಲೇ ಇರು ಕಟೀಲು ಬಸ್‌ ಇಲ್ಲೇ ಬರುತ್ತೆ. ನಾನು ಅತ್ತ ಕಡೆಯೇ ಹೋಗುವವನು ಭಯ ಪಡಬೇಡ. ನನಗೂ ಮೊಮ್ಮಗಳಿದ್ದಾಳೆ. ಅವರು ಹೊರ ಹೋದಾಗಲೂ ಭಯ ಆಗುತ್ತೆ ಎಂದು ಹೇಳಿದರು.

ಅಷ್ಟರಲ್ಲೇ ಬಸ್ಸಿನ ಆಗಮನವಾಯಿತು. ಬಸ್‌ ಬಂದ ತತ್‌ಕ್ಷಣ ಇದು ಕಟೀಲು ಹೋಗುವ ಬಸ್‌ ಹತ್ತಿಕೋ, ನಾನು ಬಸ್‌ನ ಹಿಂದಿನಿಂದ ಹತ್ತುವೇ ಎಂದು ಹೇಳಿ ಅತ್ತ ಸಾಗಿದರು. ಬಸ್‌ ಹತ್ತಿ ಸೀಟಿನಲ್ಲಿ ಕೂತು ನಿರಾಳತೆಯ ಉಸಿರುಬಿಟ್ಟಾಗ ಹಿಂಬದಿ ಯಿಂದ ಮಗಾ,ಮಗಾ ಎಂಬ ಧ್ವನಿ ಕೇಳಿತು. ಹಿಂತಿರುಗಿ ನೋಡಿದಾಗ ಅಜ್ಜ ಇದು ಕಟೀಲು ಹೋಗುವ ಬಸ್ಸು. ನಾನು ಕಿನ್ನಿಗೋಳಿವರೆಗೆ ಇದ್ದೇನೆ ಎಂದು ಹೇಳಿ ಕುಳಿತುಕೊಂಡರು. ಕಿನ್ನಿ ಗೋಳಿ ಬರುತ್ತಿದ್ದಂತೆ ಅಜ್ಜ ಮತ್ತೆ ನನ್ನ ಹತ್ತಿರ ಬಂದು “ನಾನು ಇಳಿಯುತ್ತೇನೆ. ಕಟೀಲು ಲಾಸ್ಟ್‌ ಸ್ಟಾಪ್‌. ದೇವರ ದರ್ಶನ ಮಾಡಿಕೊಂಡು ಬೇಗ ಮನೆ ಸೇರು’ ಎಂದು ಹೇಳಿ ಮಾಯವಾದರು. ಮನದ ಅಳುಕಿನೊಂದಿಗೆ ಪಯಣ ಬೆಳೆಸಿದ್ದ ನನಗೆ ಆ ಅಜ್ಜನ ಮಾತುಗಳು ದೈರ್ಯ ತುಂಬಿದ್ದವು. ಪರಿಚಯವಿಲ್ಲದ ಊರಿನಲ್ಲೂ ಧೈರ್ಯ ತುಂಬುವ ಮನಸ್ಸುಗಳಿವೆ ಎಂದು ತಿಳಿದು ಅಜ್ಜನಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದೆ.

– ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.