ಸಂತೋಷ ಮಾರಾಟಕ್ಕಿಲ್ಲ, ಕದಿಯುವಂಥದ್ದೂ ಅಲ್ಲ 

Team Udayavani, Jul 23, 2018, 3:12 PM IST

23-july-12.jpg

ಬದುಕಿನಲ್ಲಿ ಪ್ರೀತಿ, ಪ್ರಯತ್ನ ಮತ್ತು ಸಂತೋಷ ಬಹಳ ಮುಖ್ಯವಾದದ್ದು. ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರೀತಿಯಿಲ್ಲದೆ ವಿಶ್ವಾಸ ಗಳಿಸಲು ಆಗಲ್ಲ. ಆದ್ದರಿಂದಲೇ ಇವೆರಡಿದ್ದರೆ ಮಾತ್ರ ಜೀವನ ಸುಖಮಯ. ಸಂತೋಷ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಬೇರೆಯವರಿಂದ ಕದಿಯುವಂತಹದ್ದೂ ಅಲ್ಲ. ಅದು ನಮ್ಮೊಳಗೆ ಇರುವಂಥದ್ದು. ಅದೆಷ್ಟೋ ಬಾರಿ ಸಂತೋಷವನ್ನು, ಸುಖವನ್ನು ಹುಡುಕುವ ತವಕದಲ್ಲಿ ಇರುವ ಜೀವನವನ್ನು ಅನುಭವಿಸುವುದನ್ನೇ ನಾವು ಮರೆತು ಬಿಟ್ಟಿರುತ್ತೇವೆ.

ಒಮ್ಮೆ ರಾಜನೋರ್ವ ತನ್ನ ಮಂತ್ರಿಯೊಡನೆ ತನ್ನ ರಾಜ್ಯ ಸುತ್ತಲು ಹೊರಟ. ಹೀಗೆ ಹೋಗುವಾಗ ದಾರಿಯಲ್ಲಿ ಬಡಕುಟುಂಬವೊಂದನ್ನು ನೋಡಿದ. ಗಂಡ, ಹೆಂಡತಿ ಮತ್ತು ಮಗುವೊಂದಿರುವ ಕುಟುಂಬ ಅದಾಗಿತ್ತು. ರಾಜನಿಗೋ ಅವರ ಸಂತೋಷವನ್ನು ನೋಡಿ ಪರಮಾಶ್ಚರ್ಯ. ತನ್ನ ಕೌತುಕವನ್ನು ತಡೆಯಲಾರದೆ ಮಂತ್ರಿಯಲ್ಲಿ ಕೇಳಿದ. ಎಲ್ಲ ಇದ್ದರೂ ಅರಮನೆಯಲ್ಲಿರುವ ನಾವು ಇಷ್ಟು ಸಂತೋಷದಲ್ಲಿಲ್ಲ. ಆದರೇನೂ ಇರದ ಇವರು ಹೇಗೆ ಇಷ್ಟು ಸಂತೋಷದಲ್ಲಿ ಇದ್ದಾರೆ ಎಂದ. ರಾಜನ ಮಾತಿಗೆ ಮಂತ್ರಿ ಉತ್ತರಿಸದೆ ಆ ಕುಟುಂಬ ಮನೆಯೊಳಗೆ ಸೇರಿದ ಸಮಯ ನೋಡಿ ಬಂಗಾರದ ನಾಣ್ಯದ ಚೀಲವನ್ನು ಮನೆಯ ಬಾಗಿಲ ಬಳಿ ಇಟ್ಟುಬಂದ.

ರಾಜ ಕೇಳಿದ ಏನಿದು? ನನ್ನ ಪ್ರಶ್ನೆಗೆ ಉತ್ತರಿಸದೆ ಏನು ಮಾಡುತ್ತಿರುವೆ ಎಂದ. ಮಂತ್ರಿ ಹೇಳಿದ ಅವರ ಸಂತೋಷದ ಕಾರಣವನ್ನು ನಿದರ್ಶನದ ಮೂಲಕ ನಿಮಗೆ ತೋರಿಸ ಬಯಿಸಿದ್ದೇನೆ ಪ್ರಭುಗಳೇ. ನನಗೆ ಕೊಂಚ ಕಾಲಾವಕಾಶ ಕೊಡಿ ಎಂದ. ಮಂತ್ರಿಯ ಮಾತಿಗೆ ರಾಜನೂ ಒಪ್ಪಿದ.

ಮನೆಯ ಬಾಗಿಲ ಬಳಿ ಬಿದ್ದಿದ್ದ ಬಂಗಾರದ ನಾಣ್ಯಗಳ ಚೀಲವನ್ನು ನೋಡಿದ ಬಡವನ ಖುಷಿಗೆ ಪಾರವೇ ಇರಲಿಲ್ಲ. ಒಮ್ಮೆಲೆ ನಾಣ್ಯಗಳನ್ನು ಎಣಿಸತೊಡಗಿದ. 99 ನಾಣ್ಯಗಳು ಇದ್ದವು. ಗಡಿಬಿಡಿಯಲ್ಲಿ ತಪ್ಪಾಗಿ ಎಣಿಸಿರಬಹುದು ಎಂದು ಮತ್ತೂಮ್ಮೆ ಎಣಿಸಿದ. ಇಲ್ಲ. ಆಗಲೂ ತೊಬತ್ತೂಂಬತ್ತೇ. ಹೆಂಡತಿ ಮತ್ತು ಮಗನನ್ನು ಕರೆದು ಅವರ ಬಳಿಯೂ ಎಣಿಸುವಂತೆ ಹೇಳಿದ. ಅವರು ಎಣಿಸಿದಾಗಲೂ ನಾಣ್ಯ 99 ಇತ್ತು. ದೇವರೇ ನೂರು ನಾಣ್ಯಗಳಿದ್ದಿದ್ದರೆ ಎಂದುಕೊಂಡ ಬಡವ ಹೇಗಾದರೂ ಇನ್ನೊಂದು ನಾಣ್ಯ ಸಂಪಾದಿಸಬೇಕೆಂದು ನಿರ್ಧರಿಸಿದ. ಆತನ ಈ ನಿರ್ಧಾರದಿಂದ ಅವನ ಹೆಂಡತಿ ಕುಪಿತಗೊಂಡಳು. ನಿಮಗೆ ಹುಚ್ಚು. ಒಂದು ನಾಣ್ಯಕ್ಕಾಗಿ 99 ನಾಣ್ಯವನ್ನು ಉಪಯೋಗಿಸದೇ ಇರುವುದೇ ಎಂದು ಪ್ರಶ್ನಿಸಿದಳು.

ಆ ಕ್ಷಣಕ್ಕೆ ಆಕೆಯನ್ನು ಬಡವ ಗದರಿಸಿದ. ಆದರೆ ಮರುದಿನ ಆತ ಕೆಲಸ ಮುಗಿಸಿ ಬರುವಾಗ ನಾಣ್ಯಗಳು 97 ಮಾತ್ರ ಇದ್ದವು. 2 ನಾಣ್ಯಗಳನ್ನು ಹೆಂಡತಿ ಖರ್ಚು ಮಾಡಿದ್ದಳು. ಇದೇ ವಿಷಯಕ್ಕೆ ಮನೆಯಲ್ಲಿ ಗಲಾಟೆ ಆರಂಭವಾಯಿತು. ದಿನದಿಂದ ದಿನಕ್ಕೆ ನಾಣ್ಯಗಳೂ ಖರ್ಚಾಗ ತೊಡಗಿದವು. ಗಲಾಟೆಯೂ ಹೆಚ್ಚ ತೊಡಗಿತು. ಇದೇ ಸುಸಂದರ್ಭ ಎಂದು ಅರಿತ ಮಂತ್ರಿ ರಾಜನನ್ನು ಪುನಃ ಆ ಬಡವನ ಮನೆ ಬಳಿ ಕರೆದುಕೊಂಡು ಹೋದ. ರಾಜ ಒಂದು ಕ್ಷಣ ತಬ್ಬಿಬ್ಟಾದ. ನಂದನ ವನದಂತೆ ಇದ್ದ ಆ ಮನೆ ರಣಾಂಗಣವಾಗಿತ್ತು. ಮಂತ್ರಿ ಮಾಡಿದ ಒಂದು ಉಪಾಯದಿಂದ ಸಂತೋಷ ಎಲ್ಲಿದೆ ಎಂಬುದು ರಾಜನಿಗೆ ಅರ್ಥವಾಯಿತು.

ಬಹುಷಃ ನಮ್ಮೆಲ್ಲರ ಜೀವನವೂ ಹೀಗೆ. ಸಿಗದ ಒಂದು ನಾಣ್ಯಕ್ಕಾಗಿ ಇರುವ 99 ನಾಣ್ಯಗಳನ್ನು ವಿನಿಯೋಗಿಸದೆ ಕುಳಿತಿದ್ದೇವೆ. ಹೀಗಾದರೆ ಜೀವನದಲ್ಲಿ ಸಂತೋಷ, ನೆಮ್ಮದಿ ಸಿಗುವುದಾದರೂ ಎಲ್ಲಿಂದ ?

 ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.