ಟ್ರಾಫಿಕ್‌ ಸಮಸ್ಯೆಗೆ ಮ್ಯಾಜಿಕ್‌ ವೃತ್ತಾಕಾರ

Team Udayavani, Sep 8, 2019, 5:35 AM IST

ನಗರೀಕರಣದ ಪ್ರಭಾವ ಬೆಳೆದಂತೆ ಅಲ್ಲಿನ ಸಮಸ್ಯೆಗಳ ವ್ಯಾಪ್ತಿ ಕೂಡ ಬೆಳೆಯುತ್ತಾ ಹೋಗುತ್ತದೆ. ಒಂದು ಕೇಂದ್ರದ ಕಡೆ ಜನರು ಅವಲಂಬಿತವಾದಾಗ ಅಲ್ಲಿನ ವ್ಯವಸ್ಥೆಗಳು ವೈಜ್ಞಾನಿಕವಾಗಿ ಮತ್ತು ಮುಂದಾಲೋಚನೆಯಾಗಿ ನಗರ ನಿರ್ಮಾಣದ ಕಡೆ ಹೆಜ್ಜೆ ಹಾಕಬೇಕಾಗುತ್ತದೆ. ಈ ರೀತಿ ವ್ಯವಸ್ಥೆಗಳು ಸಂಪೂರ್ಣಗೊಳ್ಳದೆ ಅವ್ಯವಸ್ಥೆಗೊಂಡಾಗ ಸಹಜವಾಗಿ ಅಲ್ಲಿ ಸಮಸ್ಯೆಗಳು ಎದ್ದು ನಿಲ್ಲಲು ಆರಂಭಿಸುತ್ತವೆ. ಸದ್ಯ ಬೆಳೆಯುತ್ತಿರುವ ನಗರಗಳು ಇಂತಹ ಸಮಸ್ಯೆಗಳನ್ನು ಹೊಂದಿಕೊಂಡೇ ಎಷ್ಟೇ ರೂಪುರೇಷೆಗಳ ಹೊರತಂದರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಇವತ್ತು ನಗರ ಎಂದಾಕ್ಷಣ ಸಾವಿರಾರು ವಾಹನಗಳು, ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ನೆನಪಿಗೆ ಬರುತ್ತದೆ. ವಾಹನ ದಟ್ಟಣೆಗೆ ಸರಿಯಾಗಿ ರಸ್ತೆಗಳು ಇರದಿರುವುದು ಒಂದು ಸಮಸ್ಯೆಯಾದರೆ, ನಿಯಮಗಳು ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ ಇಲ್ಲದಿರುವುದು ಮೂಲ ಸಮಸ್ಯೆಯಾಗಿದೆ. ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಟ್ರಾಫಿಕ್‌ ಸಮಸ್ಯೆಗೆ ಅನೇಕ ರೀತಿಯ ಪರಿಹಾರೋಪಾಯದ ಪ್ರಯತ್ನಗಳು ನಡೆಯುತ್ತಿವೆ. ಅಂತಹುದರಲ್ಲಿ ನಮ್ಮಲ್ಲೂ ಅಳವಡಿಸಬಹುದಾದ ಟ್ರಾಫಿಕ್‌ ಯೋಜನೆ ಮ್ಯಾಜಿಕ್‌ ವೃತ್ತಾಕಾರ.

ಏನಿದು ಮ್ಯಾಜಿಕ್‌ ವೃತ್ತಾಕಾರ?
ಇಂಗ್ಲೆಂಡ್‌ನ‌ ಸ್ವೀಡನ್‌ನಲ್ಲಿ ಮ್ಯಾಜಿಕ್‌ ವೃತ್ತಾಕಾರವನ್ನು 1972ರಲ್ಲಿ ಜಾರಿಗೆ ತರಲಾಯಿತು. ಆರು ಮಾರ್ಗಗಳು ಒಂದು ಕೇಂದ್ರ ವೃತ್ತದ ಸುತ್ತ ವೃತ್ತದಲ್ಲಿ ವೈಜ್ಞಾನಿಕವಾಗಿ ಜೋಡಿಸಲಾದ ಐದು ಮಿನಿವೃತ್ತಾಕಾರಗಳನ್ನು ಒಳಗೊಂಡಿರುವ ರಿಂಗ್‌ ಜಂಕ್ಷನ್‌ ಆಗಿದೆ. ಸಂಕೀರ್ಣ ಜಂಕ್ಷನ್‌ ರಸ್ತೆಗಳ ನಡುವೆ ಟ್ರಾಫಿಕ್‌ ಒತ್ತಡವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಒಳಗೊಂಡಿದೆ. ಹೊರಗಿನ ವೃತ್ತ ಸಂಚಾರವನ್ನು ಪ್ರದಕ್ಷಿಣಾಕಾರವಾಗಿ ಸಾಮಾನ್ಯ ವೃತ್ತಾಕಾರದಂತೆ (ರಸ್ತೆಯ ಎಡಭಾಗದಲ್ಲಿ ಟ್ರಾಫಿಕ್‌ ಡ್ರೈವ್‌ ಮಾಡುವ ಸ್ಥಳಗಳಲ್ಲಿ) ಒಯ್ಯುತ್ತದೆ ಮತ್ತು ಕಡಿಮೆ ಪ್ರವೀಣ ಬಳಕೆದಾರರು ಹೊರಗಿನ ವಲಯವನ್ನು ಮಾತ್ರ ಬಳಸಲು ಆಯ್ಕೆ ಮಾಡಬಹುದು. ಆಂತರಿಕ ವಲಯವು ದಟ್ಟಣೆಯನ್ನು ಆ್ಯಂಟಿಕ್ಲಾಕ್‌ ವೈಸ್‌ ದಿಕ್ಕಿನಲ್ಲಿ ಒಯ್ಯುತ್ತದೆ ಮತ್ತು ಹೆಚ್ಚು ಪ್ರವೀಣ ಬಳಕೆದಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತಹ ಆಯ್ಕೆಗಳಿವೆ. ಹೀಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಮ್ಯಾಜಿಕ್‌ ವೃತ್ತಾಕಾರದ ಬಳಕೆ ಮುಂದುವರಿದ ನಗರಗಳಲ್ಲಿದೆ.

ನಮ್ಮ ನಗರಗಳಲ್ಲಿ ಅಳವಡಿಕೆಯಾಗಲಿ
ಈ ಮೇಲಿನ ಕೆಲವೊಂದು ಚಿತ್ರಗಳನ್ನು ಗಮನಿಸಿದಾಗ ಇಲ್ಲಿನ ಕೆಲವೊಂದು ಟ್ರಾಫಿಕ್‌ ಕೇಂದ್ರಗಳನ್ನು ಕಂಡಂತೆ ಭಾಸವಾಗುತ್ತದೆ. ಸದಾ ಟ್ರಾಫಿಕ್‌ ಸಮಸ್ಯೆಯಲ್ಲಿ ಸುಳಿಯುತ್ತಿರುವ ನಂತೂರ್‌ ಸರ್ಕಲ್‌ ಅದೆಷ್ಟೋ ಅಪಘಾತಗಳನ್ನು ಕಂಡಿದೆ. ಇದಕ್ಕೆ ಅನೇಕ ಕಾರಣಗಳು. ಇಲ್ಲಿನ ಟ್ರಾಫಿಕ್‌ ಕೇಂದ್ರ ತುಂಬಾ ವಿಶಾಲವಾಗಿದೆ. ಸರಿಯಾದ ಟ್ರಾಫಿಕ್‌ ವ್ಯವಸ್ಥೆ ಇಲ್ಲದಿರುವುದು ಹೀಗೆ ಮುಂತಾದ ಕಾರಣಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತಿದು. ಈ ಮ್ಯಾಜಿಕ್‌ ವೃತ್ತಾಕಾರವನ್ನು ಅಳವಡಿಸಿದ ವಿದೇಶಿ ನಗರಗಳನ್ನು ಅನುಸರಿಸಿ ಅಲ್ಲಿನ ತಂತ್ರಜ್ಞರಿಂದ ಮಾಹಿತಿ ಸಂಗ್ರಹಿಸಿ ಮಂಗಳೂರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಿಕೊಡಬಹುದು.

ಎಲ್ಲಿ ಉಪಯೋಗ?
ಒಂದು ಕೇಂದ್ರ ಸ್ಥಳವು 5, 6 ರಸ್ತೆಗಳನ್ನು ಹೊಂದಿದ್ದಲ್ಲಿ ಅಲ್ಲಿ ಸಾಮಾನ್ಯವಾಗಿ ವಾಹನ ದಟ್ಟಣೆ, ಅಪಘಾತಗಳು ಕಂಡುಬರುತ್ತವೆ. ಇದನ್ನು ತಪ್ಪಿಸಲು ಮೇಲೆ ಹೇಳಿದ ಮ್ಯಾಜಿಕ್‌ ವೃತ್ತಾಕಾರದ ನಿಯಮವನ್ನು ಅಳವಡಿಸಬಹುದು. ಇದು ತಜ್ಞರನ್ನು ಒಳಗೊಂಡು ಮಾಡಬಹುದಾಗಿದ್ದು. ತುಂಬಾ ರಸ್ತೆಗಳು, ಕೇಂದ್ರ ಸ್ಥಳದ ವ್ಯಾಪ್ತಿಯ ಪರಿದಿಯನ್ನು ಆಧರಿಸಿ ನಿರ್ಮಿಸಲಾಗುತ್ತದೆ. ವ್ಯಾಪ್ತಿಯ ಲೆಕ್ಕವನ್ನು ಪರಿಗಣನೆಗೆ ಪಡೆದು ಜ್ಯಾಮಿತಿ ಮುಖೇನ ಇಲ್ಲಿ ರಸ್ತೆಯ ದಿಕ್ಕನ್ನು ಸಂಕೇತದ ಮೂಲಕ ಸೂಚಿಸಲಾಗುತ್ತದೆ.

- ವಿಶ್ವಾಸ್‌ ಅಡ್ಯಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

  • "ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ' ಎಂಬ ಮಾತಿದೆ. ಸಂತೋಷದ ಹಾಡುಗಳೂ...

  • ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ...

ಹೊಸ ಸೇರ್ಪಡೆ