25ರಲ್ಲಿ ಹೂಡಿಕೆ ಮಾಡಿ, 50 ರಲ್ಲಿ ಅನುಭವಿಸಿ…

Team Udayavani, Jun 2, 2019, 6:00 AM IST

ಇಂದಿನ ಯುವ ಜನತೆ ಕೈಯಲ್ಲಿ ಹಣ ಇದ್ದರೆ ಸಾಕು ಖರ್ಚು ಮಾಡುವ ನಾನಾ ಮಾರ್ಗಗಳನ್ನು ಹುಡುಕುತ್ತಾರೆಯೇ ಹೊರತು ಭವಿತವ್ಯದಲ್ಲಿ ಅವುಗಳ ಉಪಯೋಗದ ಬಗ್ಗೆ ಕಿಂಚಿತ್ತು ಯೋಚಿಸುವುದಿಲ್ಲ. 20ನೇ ವಯಸ್ಸಿನಲ್ಲೇ ಹೂಡಿಕೆ ಆರಂಭಿಸಿದರೆ 50 ವಯಸ್ಸಿಗೆ ಚಿಂತೆಯಿಲ್ಲದೆ ಬದುಕಬಹುದು ಎಂಬ ಸಣ್ಣ ಲೆಕ್ಕಾಚಾರ ಮನದಲ್ಲಿದ್ದರೇ ಇಂದಿನ ಎಲ್ಲ ಯುವ ಜನಾಂಗ ಹೂಡಿಕೆ, ಉಳಿತಾಯದ ಕಡೆ ಮುಖ ಮಾಡ ಬಹುದೇನೋ. 25ರಲ್ಲೇ ಹೂಡಿಕೆ /ಉಳಿತಾಯ ಮಾಡಿ 50ರಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳಲು ಇಲ್ಲಿದೆ ದಾರಿ

1 ಐಆರ್‌ಎ ಆರಂಭಿಸಿ

ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೇ ನಿಮ್ಮ ಕಂಪೆನಿಯಲ್ಲಿ ವೈಯಕ್ತಿಕ ನಿವೃತ್ತಿ ಖಾತೆ (ಐಆರ್‌ಎ)/ ತೆರಿಗೆ ಅನೂಕಲ ನಿವೃತ್ತಿ ಯೋಜನೆಗಳು ಇರುತ್ತವೆ. ಅದರಲ್ಲಿ ತತ್‌ಕ್ಷಣ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಿರಿ. ನಿವೃತ್ತಿಯ ವೇಳೆ ತೆರಿಗೆ ಮುಂದುಲ್ಪಡುವುದು ಮಾತ್ರವಲ್ಲದೇ ನಿಮ್ಮ ಕೊಡುಗೆಯ ಕೆಲವು ಶೇಕಡಾವಾರಿಗೆ ಕಂಪೆನಿ ಕೂಡ ಕೊಡುಗೆಗಳನ್ನು ನೀಡುತ್ತದೆ.

1 ಆಕ್ರಮಣಕಾರಿಯಾಗಿರಿ

30 ಅಥವಾ 40ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆಗಿಂತ 25ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆ ನಮ್ಯತೆಯನ್ನು ಹೊಂದಿರುತ್ತದೆ. ಬಹುಬೇಗನೆ ಆರಂಭ ನಿಮ್ಮ ಹೂಡಿಕೆಯ ಆಯ್ಕೆ ಮೇಲೆ ಆಕ್ರಮಣಕಾರಿಯಾಗಿರುವಂತೆ ಮಾಡುತ್ತದೆ ಮತ್ತು ಯಾವುದಾದರೂ ಹೂಡಿಕೆ ನಷ್ಟದಿಂದ ಹೊರಬರಲು ಸಾಕಷ್ಟು ಸಮಯಗಳಿರುತ್ತವೆ.

2 ತುರ್ತು ನಿಧಿ

ವಿಮಾ ಪಾಲಿಸಿಗಳು ಆಪ್ತತ್ಬಾಂದವನ ಹಾಗೇ ಕಾರ್ಯ ನಿರ್ವಹಿಸುತ್ತವೆೆ. ಇಂದಿನಿಂದಲೇ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡಿ ಮುಂದೆ ಅನಾರೋಗ್ಯ, ಇತ್ಯಾದಿ ಸಮಸ್ಯೆಗಳು ಉಂಟಾದಾಗ ಅವುಗಳು ನಿಮ್ಮ ಕೈ ಹಿಡಿಯುವುದರಲ್ಲಿ ಅನುಮಾನವಿಲ್ಲ. ನಿಮ್ಮ 6 ತಿಂಗಳ ನಿಗದಿತ ಆದಾಯಕ್ಕೆ ಸಮಾನವಾಗಿ ತುರ್ತು ನಿಧಿ ಇದ್ದರೆ ಒಳ್ಳೆಯದು.

3 ನಂಬಿಕಸ್ಥ ಹೂಡಿಕೆ

ಹೂಡಿಕೆ ಮಾಡುವ ಸಂದರ್ಭದಲ್ಲಿ ನಂಬಿಕಸ್ಥ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಬೇಕು. ತಪ್ಪಿದಲ್ಲಿ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಹೂಡಿಕೆ ಮಾಡುವ ಮುನ್ನ ಅನೇಕ ಕಡೆಗಳಲ್ಲಿ ವಿಚಾರಿಸಿ, ಅನೇಕ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿ ಸರಿ ನಿರ್ಧಾರಕ್ಕೆ ಬರುವುದು ಉಳ್ಳೆಯದು.

4 ಹಣಕಾಸು ಯೋಜನೆ

ಸೂಕ್ತ ಹಣಕಾಸಿನ ಉಳಿತಾಯಕ್ಕೆ ಒಂದೊಳ್ಳೆ ಹಣಕಾಸಿನ ಯೋಜನೆ ಸಹಾಯಕವಾಗುತ್ತದೆ. ನೀವೇ ಯೋಜನೆ ಹಾಕಿಕೊಳ್ಳಬಹುದು ಅಥವಾ ಹಣಕಾಸಿನ ಯೋಜನೆ ಬಗ್ಗೆ ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ.

5 ಉತ್ತಮ ಅಭ್ಯಾಸವಿರಲಿ

ಹಣ ಉಳಿಸುವುದು ಎಂದರೆ ಗುರಿಯನ್ನು ನಿರ್ಧರಿಸುವುದು ಮತ್ತು ಆ ಗುರಿಯನ್ನು ತಲುಪಲು ನಿರಂತರವಾಗಿ ಶಿಸ್ತಿನಿಂದಿರುವುದು. ಹೂಡಿಕೆ ಯೋಜನೆಗೆ ಈ ಅಭ್ಯಾಸಗಳು ಅತೀ ಮುಖ್ಯ

ನಮ್ಮ ಮುಂದಿನ ಆವಶ್ಯಕತೆಗಳಿಗಾಗಿ ಇಂದು ಉಳಿತಾಯವನ್ನು ಮಾಡಲೇಬೇಕು. 30 , 40 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದಾಗ ಸಿಗುವ ಮೊತ್ತಗಿಂತ 25 ವಯಸ್ಸಿನಲ್ಲಿ ಆರಂಭಿಸುವ ಹೂಡಿಕೆಯಲ್ಲಿ ಲಭಿಸುವ ಲಾಭ ಅಧಿಕ. ಹೀಗಾಗಿ ಇಂದೇ ಹೂಡಿಕೆ/ ಉಳಿತಾಯದ ಕುರಿತು ಯೋಜನೆ ರೂಪಿಸಿಕೊಳ್ಳಿ.

•••ಧನ್ಯ ಶ್ರೀ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ