3 ದಶಕದ ಕತೆಗಳು: ಪೇಜರ್‌ ಎಂಬ ಅಭಿಮನ್ಯು

Team Udayavani, Jan 25, 2020, 1:07 PM IST

ಲ್ಯಾಂಡ್‌ಲೈನ್‌ ಸಿಗುವುದೇ ದುಸ್ತರವೆಂದಿದ್ದ ಸಂದರ್ಭದಲ್ಲಿ ಬಂದದ್ದು ಪೇಜರ್‌ ಸೇವೆ. ಅಮೆರಿಕದಲ್ಲಿ ಬಹಳ ಬಳಕೆಯಲ್ಲಿದ್ದ ಈ ತಾಂತ್ರಿಕ ಆವಿಷ್ಕಾರ ಭಾರತದಲ್ಲೂ ಹೊಸ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಆದರೆ ಸಾಕಷ್ಟು ಪ್ರಯೋಜನವಿದ್ದರೂ ಬಳಕೆಯ ಉದ್ದೇಶದ ಮಿತಿಯಿಂದ ಬದುಕಲಾಗಲಿಲ್ಲ. ಬದಲಾವಣೆಯ ಚಕ್ರವ್ಯೂಹದ ಒಳಹೊಕ್ಕು ಹೊರ ಬರಲಾಗಲಿಲ್ಲ.

ಮೂರು ದಶಕಗಳಲ್ಲಿ ತಂತ್ರಜ್ಞಾನ ಉಂಟು ಮಾಡಿದ ಪಲ್ಲಟಗಳು ಹಲವಾರು. ಟೆಲಿಫೋನ್‌ನಿಂದ ಹಿಡಿದು ಟಿವಿ ವರೆಗೂ ಎಲ್ಲದರ ಉದ್ದೇಶಗಳನ್ನೇ ಬದಲಾಯಿಸಿಬಿಟ್ಟಿತು ಈ ಕ್ಷೇತ್ರದ ಸಂಶೋಧನೆಗಳು. ದೊಡ್ಡ ದೊಡ್ಡದೆಲ್ಲವೂ ಸಣ್ಣದಾಗಿ, ಸ್ಮಾರ್ಟ್‌ ಆಗಿ ಕಂಗೊಳಿಸತೊಡಗಿದ್ದು ಈ ಮೂರು ದಶಕಗಳಲ್ಲೇ.

ಹಿಂದಿನ ಬಾರಿ ಹೇಳಿದಂತೆ ಟೆಲಿಫೋನ್‌ ಎಂಬುದರ ಸಾಹಸಗಾಥೆಯಂತೆಯೇ ಈ ಅಲ್ಪಾಯುಷಿಯ ಕಥೆಯೂ ಇದೆ. ಒಂದು ಆರ್ಥದಲ್ಲಿ ಇದೊಂದು ಅಭಿಮನ್ಯುವಿದ್ದಂತೆ. ಚಕ್ರವ್ಯೂಹದೊಳಕ್ಕೆ ಹೊಕ್ಕುವ ಸಾಹಸವನ್ನೇನೋ ಮಾಡಿತು. ಆದರೆ ಹೊರಗೆ ಬರಲಾಗಲಿಲ್ಲ.

ಆಗಿನ್ನೂ ಫೋನ್‌ಗಳ ಭರಾಟೆ ಬಂದಿತ್ತು, ಮೊಬೈಲ್‌ ಫೋನ್‌ ಜನ ಬಳಕೆಗೆ ಸಿದ್ಧವಾದ ಸಮಯ. 1995 ರಲ್ಲಿ ನಮ್ಮ ದೇಶಕ್ಕೆ ಮೊಬೈಲ್‌ ಬಂದಿತ್ತು. ಆದರೆ ಹೀಗೆ ಎಲ್ಲೆಂದರಲ್ಲಿ ಸಿಗುತ್ತಿರಲಿಲ್ಲ. ಇದೇ ಸಂದರ್ಭದಲ್ಲೇ ಶುರುವಾದದ್ದು ಪೇಜರ್‌ ಸೇವೆ. 1995ರಲ್ಲಿ ಈ ಸೇವೆ ಆರಂಭವಾಗಿದ್ದಾಗ ನವದೆಹಲಿಯ 15ಕ್ಕೂ ಹೆಚ್ಚು ಕಂಪೆನಿಗಳು 27 ನಗರಗಳಲ್ಲಿ ಸೇವೆ ಆರಂಭಿಸಲು 94 ಪರವಾನಗಿಗಳನ್ನು ಪಡೆದವು. ಚಂಡೀಗಢ ಇಂದೋರ್‌ ಮುಂತಾದೆಡೆ ಸೇವೆ ಆರಂಭವಾದಾಗ ಮೊದಲ ತಿಂಗಳೇ ಮೂರು ಸಾವಿರದಷ್ಟು ಮಂದಿ ಚಂದಾದಾರರಾದರು.

ಮೋಟರೊಲಾ ಕಂಪೆನಿ ಲೆಕ್ಕ ಹಾಕಿದ ಪ್ರಕಾರ 145 ಮಂದಿ ಭಾರತೀಯರಲ್ಲಿ ಒಬ್ಬರಿಗೆ ದೂರವಾಣಿ ಸೇವೆ ಇತ್ತು. ಅದೂ ಲ್ಯಾಂಡ್‌ಲೈನ್‌ ಸೇವೆ. ಹೊಸದಾಗಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದವರು ವರ್ಷಾನುಗಟ್ಟಲೆಯಿಂದ ಕಾಯುತ್ತಿದ್ದರು. ಭಾರತದ ಪರಿಸ್ಥಿತಿಯನ್ನು ಅರಿತ ವಿದೇಶಿ ಕಂಪೆನಿಗಳ ಅಧ್ಯಯನಕಾರರು, 1999ರ ವೇಳೆಗೆ ಸುಮಾರು 23 ಲಕ್ಷ ಮಂದಿಯನ್ನು ತಲುಪುವ ಗುರಿ ಹೊಂದಿದ್ದರು.

ಪೇಜರ್‌ ಒಂದು ಮಾಹಿತಿ ರವಾನಿಸುವ ಸೇವೆ. ಈಗಿನ ಸಾಮಾನ್ಯ ಚಿಕ್ಕ ಮೊಬೈಲ್‌ನನ್ನು ಆಡ್ಡ ಹಿಡಿದರೆ ಎಷ್ಟು ಗಾತ್ರವಾಗುತ್ತದೋ ಅಷ್ಟಿತ್ತು ಅದು. ಅದಕ್ಕೊಂದು ಕೊಂಡಿ ಇಡುತ್ತಿದ್ದರು. ಅದನ್ನು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡಂತೆ ಕಟ್ಟಿಕೊಳ್ಳುತ್ತಿದ್ದರು. ಈಗಿನ ಮೊಬೈಲ್‌ ಸೇವೆಯಂತೆ ನಿರ್ದಿಷ್ಟ ಕಂಪೆನಿಗಳಿಗೆ ಹಣ ಪಾವತಿಸಿ ಪೇಜರ್‌ ಪಡೆಯಬೇಕಿತ್ತು. ಎರಡು ಬಗೆಯ ಸೇವೆ. ಧ್ವನಿ ಸಂದೇಶ ಹಾಗೂ ಅಕ್ಷರ ಸಂದೇಶ.

ಈಗಿನ ಮೊಬೈಲ್‌ಗೆ ಸಂದೇಶ ಬರುವ ಮಾದರಿಯೇ. ಸಂದೇಶ ಬಂದ ಕೂಡಲೇ ಮೂರು ಬಾರಿ ಬೀಪ್‌ ಶಬ್ದ ಬರುತ್ತಿತ್ತು. ವಾಸ್ತವವಾಗಿ ವಿದೇಶಗಳಲ್ಲಿ 1960-80 ರ ದಶಕದಲ್ಲಿ ಜನಪ್ರಿಯವಾಗಿದ್ದ ಪೇಜರ್‌ಗೆ ಮತ್ತೂಂದು ಹೆಸರು ಇದ್ದದ್ದು ಬೀಪರ್‌ ಎಂದೇ.

ಕುತೂಹಲ
ಆಗ ಈ ಪೇಜರ್‌ ನೋಡುವುದೇ ಒಂದು ಕುತೂಹಲ. ಎಲ್ಲರ ಬಳಿ ಪೇಜರ್‌ ಇರಲಿಲ್ಲ. ಕೆಲವು ಮೆಡಿಕಲ್‌ ಅಸಿಸ್ಟೆಂಟ್ಸ್‌, ಸೇಲ್ಸ್‌ ಎಕ್ಸಿಕ್ಯೂಟಿವ್ಸ್‌ ಮತ್ತಿತರರು ಈ ಸೇವೆಯನ್ನು ಹೊಂದಿದ್ದರು. ಸದಾ ಸುದ್ದಿಯ ಬೆನ್ನ ಹಿಂದಿರುವ ಮಾಧ್ಯಮಗಳಿಗೆ ಬಂದದ್ದೂ ಕೊಂಚ ತಡವಾಗಿಯೇ. ಟೆೆಲಿಗ್ರಾಂ ಸಂದೇಶದ ತಾಂತ್ರಿಕ ರೂಪವೆಂದರೆ ಹೆಚ್ಚು ಸೂಕ್ತ. ಒಂದೆರಡು ಸಾಲಿನ ಸಂದೇಶಗಳನ್ನು ಕಳುಹಿಸಬಹುದಾಗಿತ್ತು. ಅದನ್ನು ಹೊಂದುವುದೇ ಒಂದು ಅಂತಸ್ತಿನ ಕಥೆಯಾಗಿತ್ತು. ಹಾಗೆ ಹೇಳುವುದಾದರೆ ಮೋಟರೊಲ ಕಂಪೆನಿ ಜನರಿಗೆ ಪರಿಚಯವಾದದ್ದೇ ಈ ಪೇಜರ್‌ ಸೇವೆಯಿಂದ.

1991 ರಲ್ಲಿ ಉದಾರೀಕರಣದ ಬಾಗಿಲು ತೆರೆದ ಮೇಲೆ ಮೆಲ್ಲಗೆ ಆರ್ಥಿಕತೆಯ ಗಂಧಗಾಳಿ ಒಳಗೂ ಹೊರಗೂ ಸೋಕ ತೊಡಗಿದ ಕಾಲವದು. ಸಂದೇಶಗಳ ರವಾನೆಗೆ ಆಧುನಿಕ ತಾಂತ್ರಿಕ ಸ್ವರೂಪ ಸಿಕ್ಕಿದ್ದು ಆಗಲೇ. ಮೇಘ ಸಂದೇಶದ ಕಲ್ಪನೆಯನ್ನು ನನಸಾಗಿಸಿದ್ದು ಇದೇ ಪೇಜರ್‌ಗಳು. ಅಮೆರಿಕ-ಬ್ರಿಟನ್‌ನಲ್ಲಿ ಹೆಚ್ಚಾಗಿ ಕೊರಿಯರ್‌ ಕಂಪೆನಿಗಳ ಮಂದಿ ಬಳಸುತ್ತಿದ್ದ ಪೇಜರ್‌ಗಳಿಗೆ ನಮ್ಮಲ್ಲಿ ಕೆಂಫ‌ು ರತ್ನಗಂಬಳಿಯ ಸ್ವಾಗತ ದೊರೆತಿತ್ತು. 1998ರ ಸುಮಾರಿಗೆ 2 ಲಕ್ಷ ದಷ್ಟು ಪೇಜರ್‌ ಚಂದಾದಾರರು ಇದ್ದಿದ್ದರು.

ಇದೇ ಸಮಯದಲ್ಲಿಯೇ ಮೊಬೈಲ್‌ ಫೋನ್‌ ಬಂದಿದ್ದು. ಆದರೆ, ಅದರ ದರ ಮತ್ತು ಬಳಕೆಯ ವೆಚ್ಚ ಎರಡೂ ದುಬಾರಿಯಾದ ಕಾರಣ ಯಾರೂ ಅದರ ಬಳಿ ಹೋಗಿರಲಿಲ್ಲ. ಆರಂಭದಲ್ಲಿ ಪೇಜರ್‌ಗೆ 10 ರಿಂದ 15 ಸಾವಿರ ರೂ. ವರೆಗೆ ಬೆಲೆಯಿತ್ತು. ಬಳಿಕ ಸ್ವಲ್ಪ ಕಡಿಮೆಯಾಯಿತು. ಮೊಬೈಲ್‌ ಜನಪ್ರಿಯವಾಗದ ಕಾರಣ ಪೇಜರ್‌ಗೆ ಬೇಡಿಕೆ ಇದ್ದ ಕಾಲವದು. ಆದರೆ ಕ್ರಮೇಣ ಬದಲಾವಣೆಯ ಗಾಳಿ ಜೋರಾಗಿ ಬೀಸತೊಡಗಿತು. ಆ ಬಿರುಗಾಳಿಗೆ ಮೆಲ್ಲಗೆ ಬದಿಗೆ ಸರಿಯತೊಡಗಿದ್ದು ಪೇಜರ್‌ ಸೇವೆ. ಬಿಎಸ್‌ಎನ್‌ಎಲ್‌ ಅಧಿಕಾರಿಯೊಬ್ಬರ ಪ್ರಕಾರ ಈಗ ಅದರ ಸೇವೆ ನಮ್ಮಲ್ಲಿ ಎಲ್ಲೂ ಇಲ್ಲ.

ಪೇಜರ್‌ ಒಂದು ರೀತಿಯಲ್ಲಿ ನೈಟ್‌ ವಾಚ್‌ಮೆನ್‌ ಮಾದರಿಯಲ್ಲಿ ಬಂದಿದ್ದು. ಇತ್ತ ಲ್ಯಾಂಡ್‌ಲೈನ್‌ ಸಿಗುತ್ತಿರಲಿಲ್ಲ, ಮೊಬೈಲ್‌ ಕೈಗೆಟುಕುತ್ತಿರಲಿಲ್ಲ. ಈ ಹೊತ್ತಿನಲ್ಲಿ ಹೆಚ್ಚು ಬ್ಯಾಟರಿ ಲೈಫ್ ಹೊಂದಿದ್ದು, ಪುಟ್ಟದಾದ, ಕಡಿಮೆ ದರ (ಮೊಬೈಲ್‌ಗೆ ಹೋಲಿಸಿದರೆ) ಆಕರ್ಷಕವಾಗಿಯೂ ಇತ್ತು. ಆದರೆ ಮೊಬೈಲ್‌ ಎಂಬ ಮಾಂತ್ರಿಕನ ಮುಂದೆ ನಿಲ್ಲಲಾಗಲಿಲ್ಲ. ಬದಲಾವಣೆಯ ಚಕ್ರವ್ಯೂಹದ ಒಳಗೆ ಹೊಕ್ಕು ಹೊರ ಬರಲಾರದೇ ಹೋದ ಅಭಿಮನ್ಯು ಪೇಜರ್‌.

ಇಂಥ ಪೇಜರ್‌ನ ಮೊದಲ ಪೇಟೆಂಟ್‌ ಪಡೆದವನು
ಆಲ್ಫೆಡ್‌ ಜೆ ಕ್ರಾಸ್‌ ಎನ್ನುವಾತ. ಮೊದಲ ಪೇಜಿಂಗ್‌ ಸೇವೆ ಶುರುವಾದದ್ದೂ 1950 ರಲ್ಲಿ ನ್ಯೂಯಾರ್ಕ್‌ ನಗರದಲ್ಲಿನ ವೈದ್ಯರ ನಡುವೆ ಸಂದೇಶ ರವಾನಿಸುವುದಕ್ಕಾಗಿ. ಆ ಸೇವೆಗೆ ಆಗ ಪಾವತಿಸುತ್ತಿದ್ದುದು ತಿಂಗಳಿಗೆ 12 ಡಾಲರ್‌ಗಳು. 200 ಗ್ರಾಂ ತೂಕ ಹೊಂದಿತ್ತು. ಸುಮಾರು 40 ಕಿಮೀ ವ್ಯಾಪ್ತಿಯಲ್ಲಿ ಸಂದೇಶ ವನ್ನು ರವಾನಿಸುತ್ತಿತ್ತು. ಇಂಥದೊಂದು ಸೇವಾ ವಲಯ ಉದ್ದಿಮೆ ಅಮೆರಿಕದಲ್ಲಿ 2008 ರ ವೇಳೆಗೆ 2.1 ಶತಕೋಟಿ ಆದಾಯವನ್ನು ಗಳಿಸುತ್ತಿತ್ತು. ಅದು 2003 ಕ್ಕೆ ಹೋಲಿಸಿದರೆ ಕಡಿಮೆ (6.2 ಶತಕೋಟಿ). ಅಷ್ಟರಲ್ಲೇ ಮೊಬೈಲ್‌ ಫೋನ್‌ ಹಾವಳಿ ಜೋರಾಗಿತ್ತು. ಈಗ ಅಲ್ಲೂ ಮಂದಗತಿಯಲ್ಲಿದೆ.

ಭೂಪಾಲಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾತು ಎಂಬ ಎರಡು ಪದ ಒಂದು ವ್ಯಕ್ತಿಯನ್ನ ಅಥವಾ ಪ್ರತಿಯೊಂದು ವಿಚಾರವನ್ನು ಯಾವ ರೀತಿ ಬಣ್ಣಿಸಲು ಸಾಧ್ಯ. ಒಬ್ಬ ವ್ಯಕ್ತಿಯನ್ನ ಬಣ್ಣಿಸಲು ಮಾತು ಮುಖ್ಯವಾದರೆ ಅದೇ...

  • ನಾವು ಕಾಲ ಕಸಮಾಡಿ ಬಿಸಾಡುವ ಹಾಳೆಯೇ ಮುಂದೊಂದು ದಿನ ಗಾಳಿಪಟವಾಗಿ ಮೇಲೆ ಹಾರಬಹುದು. ಯಾರ ಶಕ್ತಿಯನ್ನೂ ಅವಗಣನೆ ಮಾಡುವುದು ಸರಿಯಲ್ಲ. ಜೀವನದಲ್ಲಿ ನಾವಂದುಕೊಂಡದ್ದು...

  • ಯಾರು ಏನೇ ಹೇಳಲಿ ಎಲ್ಲವನ್ನೂ ಕೇಳಿಸಿಕೊಳ್ಳಿ. ಅದರಲ್ಲಿ ಒಳ್ಳೆಯದೇನಿದೆಯೋ ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಕೆಟ್ಟದನ್ನು ಅಲ್ಲಿಯೇ ಮರೆತುಬಿಡಿ....

  • ಜೀವನದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಬಗ್ಗೆ ಲೆಕ್ಕಾಚಾರವನ್ನು ನಾವು ಮಾಡುತ್ತಿರುತ್ತೇವೆ. ಈ ಬಾರಿ ನಾನು ಅಂದುಕೊಂಡ ಕೆಲಸ ಆಗಬಹುದೇ, ಆಗುವುದಿಲ್ಲವೇ...

  • ವಯೋವೃದ್ಧನೊಬ್ಬ ಒಮ್ಮೆ ಸಮಯದ ಜತೆ ಜಗಳಕ್ಕೆ ಬಿದ್ದ. ಬದುಕಿನಲ್ಲಿ ಸಾಕಷ್ಟು ಸುಖ ದುಃಖ ನೋಡಿ ಬಂದವನು, ಮಾಗಿದ ಮನಸ್ಸಿನವನೂ ಆಗಿದ್ದ ಆ ವೃದ್ಧ. ಹಲವು ವರ್ಷ ಗಳಿಂದ...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು...

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...