ಜನ ಬೇಡಿಕೆ ಇಟ್ಟರೂ ಬಾವಿ ತೆರೆಯದ ಸರಕಾರಗಳು


Team Udayavani, Jan 13, 2017, 11:22 PM IST

Endo-Bavi-13-1.jpg

ಪುತ್ತೂರು: ಎಂಡೋಸಲ್ಫಾನ್‌ ಪರಿಣಾಮ ಎಂಥ ಘೋರವಾದದ್ದು ಎಂಬುದು ಎಲ್ಲರಿಗೂ ತಿಳಿದೇ ಇದೆ. ಇಂತಹ ಪರಿಸ್ಥಿತಿಯ ಮಧ್ಯೆ ಎರಡು ವರ್ಷದ ಹಿಂದೆ ನೆಟ್ಟಣಿಗೆ ಮುಟ್ನೂರು ಗ್ರಾಮದ ತುದಿಯಲ್ಲಿರುವ ಮಿಂಚಿಪದವಿನ ಮುಚ್ಚಿದ ಬಾವಿಯಲ್ಲಿ ಎಂಡೋ ತುಂಬಿರುವ ಸ್ಫೋಟಕ ಸುದ್ದಿ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿತ್ತು. ಈಗಲೂ ಅದಕ್ಕೆ ಮುಕ್ತಿ ದೊರಕಿಲ್ಲ. ಪುತ್ತೂರು ತಾಲೂಕು ಮತ್ತು ಕಾಸರಗೋಡು ಜಿಲ್ಲೆಯ ಗಡಿಪ್ರದೇಶ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿಂಚಿಪದವು ಇದೆ. ಎರಡು ವರ್ಷದ ಹಿಂದೆ ಕೇರಳ ಪ್ಲಾಂಟೇಶನ್‌ ಕಾರ್ಪೊರೇಶನ್‌ ಮಿಂಚಿಪದವಿನ ಬಾವಿಯಲ್ಲಿ ಎಂಡೋ ಸುರಿದಿದೆ ಎಂಬ ಮಾಹಿತಿಯನ್ನು ಅದೇ ಸಂಸ್ಥೆಯ ನಿವೃತ್ತ ಕಾರ್ಮಿಕರು ನೀಡಿದ್ದರು. ಹಲವು ವರ್ಷಗಳಿಂದ ಗೇರು ತೋಟಗಳಿಗೆ ಎಂಡೋ ಸಿಂಪಡಣೆಯ ಕಾರ್ಯದಲ್ಲಿದ್ದ ಇವರು, ಬಾವಿಗೆ ಎಂಡೋ ಸುರಿಯಲು ಹೋದ ಬಗ್ಗೆಯೂ ಮಾಹಿತಿ ನೀಡಿದ್ದರು.

ಎಂಡೋ ಬಾಟ್ಲಿ ಬಾವಿಗೆ..!
ಎಂಡೋ ದುಷ್ಪರಿಣಾಮದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದ ಹೊತ್ತಿನಲ್ಲಿ ಮಿಂಚಿಪದವು ಬಾವಿಯಲ್ಲಿ ಎಂಡೋ ಬಾಟಲಿಗಳನ್ನು ಹಾಕಲಾಗಿತ್ತು. ಮೂರು ವರ್ಷಗಳ ಹಿಂದೆ ಈ ಬಾವಿಯನ್ನೂ ಮುಚ್ಚಲಾಗಿತ್ತು. ಹೀಗಾಗಿ ಎಷ್ಟು ಪ್ರಮಾಣದಲ್ಲಿ ಎಂಡೋ ಸುರಿಯಲಾಗಿದೆ ಎಂಬ ಮಾಹಿತಿ ಇಲ್ಲ. ಒಂದು ವೇಳೆ ಎಂಡೋ ಸುರಿದ ಸಂಗತಿ ನಿಜವಾಗಿದ್ದರೆ, ಮಿಂಚಿಪದವು ಹಾಗೂ ಆಸುಪಾಸಿನ ಅನೇಕ ಕಿ.ಮೀ. ವರೆಗೆ ಅಪಾಯ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು..!

ಈಗ ಎಂಡೋ ಸುರಿದ ಬಾವಿ ಮುಚ್ಚಿದೆ. ವರ್ಷದ ಹಿಂದೆ ಅಲ್ಲಿ ಬೆಳೆದಿದ್ದ ಮರವೊಂದು ಒಣಗಿತ್ತು. ಅದಕ್ಕೆ ಸ್ಪಷ್ಟ ಕಾರಣಗಳು ತಿಳಿದಿಲ್ಲ. 2002ರ ಸುಮಾರಿಗೆ ಎಂಡೋ ಸುರಿಯಲಾಗಿದ್ದು, ಆದರೆ ಅದು ಬೆಳಕಿಗೆ ಬಂದದ್ದು ಸುಮಾರು 10 ವರ್ಷಗಳ ಬಳಿಕ. ಅದರ ದುಷ್ಪರಿಣಾಮವೇನು? ಅದು ಭೂಮಿಯಲ್ಲಿ ಸೇರಿ ಅಂತರ್ಜಲ ಸೇರಿದಂತೆ ವಿವಿಧ ಜಲಮೂಲಗಳಿಗೆ ಅಪಾಯ ಉಂಟು ಮಾಡುವುದಿಲ್ಲವೆ? ಇತ್ಯಾದಿ ಅಂಶಗಳ ಬಗ್ಗೆ ಸ್ಪಷ್ಟವಾಗಿ ಯಾರೂ ಬೆಳಕು ಚೆಲ್ಲಿಲ್ಲ. ಹಾಗಾಗಿ ಇಲ್ಲಿ ಭಯದ ವಾತಾವರಣ ನಿವಾರಣೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಸಚಿವರು ಬಂದರೂ ಪ್ರಯೋಜನ ಇಲ್ಲ..!
ಯು.ಟಿ. ಖಾದರ್‌ ಆರೋಗ್ಯ ಸಚಿವರಾಗಿದ್ದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಿಂಚಿಪದವು ಕೇರಳ ರಾಜ್ಯದ ವ್ಯಾಪ್ತಿಯೊಳಗೆ ಬರುವ ಕಾರಣ, ಅಲ್ಲಿಗೆ ನಿಯೋಗ ಕರೆದದೊಯ್ದು ಮಾತುಕತೆ ನಡೆಸುವ ಭರವಸೆ ನೀಡಿದ್ದರು. ಸ್ಥಳೀಯ ಬಾವಿ, ಕೊಳವೆ ಬಾವಿಗಳಿಂದ ನೀರಿನ ಪರೀಕ್ಷೆ ನಡೆಸುವ ಬಗ್ಗೆಯೂ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಸ್ಥಳ ಕೇರಳದ ವ್ಯಾಪ್ತಿಯಲ್ಲಿದ್ದರೂ ಹೆಚ್ಚು ಅನಾಹುತವಾಗುವುದು ನಮಗೆ. ಈ ಬಗ್ಗೆ ರಾಜ್ಯದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಕೇರಳ ಸರಕಾರದತ್ತ ಬೆರಳು ತೋರಿಸುತ್ತಾರೆ. ಕೇರಳ ಸರಕಾರಕ್ಕೆ ನಿಯೋಗ ಕರೆದೊಯ್ದು ಅಪಾಯವನ್ನು ಮನವರಿಕೆ ಮಾಡುವ ಕೆಲಸ ಇನ್ನೂ ಆಗಿಲ್ಲ.

ತೆಳು ಎಂಡೋ ಅಂಶ ಪತ್ತೆ..!
ಆರೋಗ್ಯ ಇಲಾಖೆ ಮಿಂಚಿಪದವು ಪರಿಸರದ ಸ್ಥಳೀಯ ಬಾವಿ, ಕೆರೆ, ಕೊಳವೆ ಬಾವಿಗಳಿಂದ ನೀರಿನ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿತ್ತು. ಆದರೆ ಎಂಡೋ ಮುಚ್ಚಲಾದ ಬಾವಿಯ ಮಣ್ಣು ಪರೀಕ್ಷೆಗೆ ಒಳಪಡಿಸಿಲ್ಲ. ಈ ಹಿಂದೆ ಮಾಹಿತಿ ಹಕ್ಕು ಕಾರ್ಯಕರ್ತ ಸಂಜೀವ ಕಬಕ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈ ಬಗ್ಗೆ ಮಾಹಿತಿ ಕೋರಿದಾಗ, ಸ್ಥಳೀಯ ಪರಿಸರದ ನೀರಿನಲ್ಲಿ ಎಂಡೋ ತೆಳು ಅಂಶ ಪತ್ತೆ ಆಗಿರುವ ಬಗ್ಗೆ ವರದಿ ಹೇಳಿತ್ತು.

ನಿರ್ಣಯ ಕಳುಹಿಸಲಾಗಿದೆ
ನೆಟ್ಟಣಿಗೆ ಗ್ರಾ.ಪಂ.ವತಿಯಿಂದ ಸಂಬಂಧಪಟ್ಟ ಇಲಾಖೆಗೆ ನಿರ್ಣಯ ಕಳುಹಿಸಲಾಗಿದೆ. ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದರು. ಅನಂತರ ಏನಾಗಿದೆ ಎಂಬ ಮಾಹಿತಿ ಇಲ್ಲ. ಬಾವಿ ತೆರೆದು ಪರಿಶೀಲಿಸಬೇಕೆಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಕೇರಳ ಸರಕಾರ ಮುತುವರ್ಜಿ ತೋರಬೇಕಿದೆ.
– ಶ್ರೀರಾಮ ಪಕ್ಕಳ, ಉಪಾಧ್ಯಕ್ಷರು, ಗ್ರಾ.ಪಂ. ನೆಟ್ಟಣಿಗೆ ಮುಟ್ನೂರು

– ಕಿರಣ್‌ ಪ್ರಸಾದ್‌ ಕುಂಡಡ್ಕ

ಇದನ್ನೂ ಓದಿ:
► ಎಂಡೋ ಪೀಡಿತ ಕುಟುಂಬದ್ದು ಬದುಕು ಅಲ್ಲ; ಅದು ಬವಣೆ!: http://bit.ly/2jcQis0
► ‘ಹಳೆಯ ಔಷಧವನ್ನೇ ಸದ್ಯಕ್ಕೆ ಮುಂದುವರಿಸಿ’: http://bit.ly/2jr8en7
► ಇನ್ನೂ ಬಾರದ ಶಾಶ್ವತ ಪುನರ್‌ವಸತಿ ಕೇಂದ್ರ: http://bit.ly/2is2W6M
► ಭರವಸೆಯಲ್ಲೇ ಉಳಿದ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ: http://bit.ly/2jlSoWH
► ಉಚಿತ ಚಿಕಿತ್ಸೆ ನೀಡಲು ಮನಸ್ಸು ಮಾಡದ ಆರೋಗ್ಯ ಇಲಾಖೆ: http://bit.ly/2j7TSr7
► ನಾಲ್ಕು ವರ್ಷ ಕಳೆದರೂ ಜಾರಿಗೆ ಮನಸ್ಸು ಮಾಡದ ಸರಕಾರ: http://bit.ly/2j5yOiJ

ಟಾಪ್ ನ್ಯೂಸ್

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.