ಆರೋಗ್ಯಕರ ಬಾಳೆದಿಂಡು

Team Udayavani, Jun 17, 2019, 11:39 AM IST

ಬಾಳೆಗಿಡದ ಪ್ರತಿ ಒಂದು ಭಾಗ ತನ್ನದೇ ಆದ ಉಪಯೋಗಗಳನ್ನು ಹೊಂದಿದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಬಾಳೆ ಗಿಡದ ಒಂದು ಭಾಗ ಬಾಳೆ ದಿಂಡು. ಇತರ ಮರಗಳ ಕಾಂಡದಂತೆ ಬಾಳೆ ದಿಂಡು ಗಟ್ಟಿಯಾಗಿರುವುದಿಲ್ಲ ಆದರೆ ಅದರಲ್ಲಿರುವ ಸಣ್ತೀಗಳು ನಮ್ಮನ್ನು ಗಟ್ಟಿ ಯಾಗಿಸುತ್ತದೆ.

ನಾರಿನಂಶ: ಬಾಳೆದಿಂಡಿನಲ್ಲಿ ನಾರಿನಂಶ ಹೇರಳವಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿ. ಹೊಟ್ಟೆಯಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ. ಮಲಬದ್ದತೆಯಿಂದ ಬಳಲುವವರಿಗೆ ಬಾಳೆದಿಂಡಿನ ಜ್ಯೂಸ್‌ ರಾಮಬಾಣ.

ರೋಗ ನಿರೋಧಕ ಶಕ್ತಿ: ಬಾಳೆದಿಂಡಿನಲ್ಲಿ ರೋಗನಿರೋಧಕ ಶಕ್ತಿ ಇದ್ದು , ರೋಗಗಳೊಂದಿಗೆ ಹೋರಾಡುವ ಶಕ್ತಿ ಪಡೆಯಬಹುದು.

ಕಲ್ಲನ್ನು ಕರಗಿಸುವ ಶಕ್ತಿ: ಬಾಳೆದಿಂಡು ಮೂತ್ರಪಿಂಡದಲ್ಲಾಗುವ ಕಲ್ಲನ್ನು ಕರಗಿಸುತ್ತದೆ. ನೀರಿನಾಂಶ ಹೆಚ್ಚಿರುವುದು ಇದಕ್ಕೆ ಕಾರಣ.

ರಕ್ತಹೀನತೆ: ಇದರಲ್ಲಿ ಕಬ್ಬಿಣನಾಂಶ ಮತ್ತು ವಿಟಮಿನ್‌ ಬಿ 6 ಇದೆ. ರಕ್ತಹೀನತೆಯಿಂದ ಬಳಲುವವರಿಗೆ ಬಾಳೆದಿಂಡಿನ ಸೇವನೆ ಉಪಯುಕ್ತ.

ಮಧುಮೇಹ: ಮಧುಮೇಹದಿಂದ ಬಳಲುತ್ತಿರುವವರಿಗೆ ಬಾಳೆದಿಂಡಿನ ಜ್ಯೂಸ್‌ ಸೇವನೆ ಒಳ್ಳೆಯದು.

ತೂಕ: ಬಾಳೆದಿಂಡಿನ ಸೇವನೆ ಕೊಬ್ಬು ಕರಗಿಸುವುದರೊಂದಿಗೆ ತೂಕವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

ಪೋಷಕಾಂಶಗಳು
100 ಗ್ರಾಮ್‌ ಬಾಳೆದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾಬೋì ಹೈಡ್ರೇಟ್ಸ್‌, ಒಂದು ಗ್ರಾಮ್‌ನಷ್ಟು ಡಯೇಟ್ರಿ ಫೈಬರ್‌ ಹೊಂದಿದೆ.

ಧನ್ಯಶ್ರೀ ಬೋಳಿಯಾರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ