ಆರೋಗ್ಯ ಕಾಪಾಡುವ ತುಳಸಿ

Team Udayavani, Jun 18, 2019, 5:00 AM IST

ಮನೆಯಂಗಳದಲ್ಲಿ ಏನಿಲ್ಲದಿದ್ದರೂ ತುಳಸಿ ಗಿಡವೊಂದು ಇದ್ದೇ ಇರುತ್ತದೆ. ಅದು ಭಾರತೀಯ ಸಂಸ್ಕೃತಿ. ಎಲ್ಲ ಔಷಧೀಯ ವಸ್ತುಗಳಿಗೆ ವಿಶೇಷ ಸ್ಥಾನವಿದೆ. ಅವುಗಳಲ್ಲಿ ಒಂದು ತುಳಸಿ. ಒಸಿಮಮ್‌ ಟೆನುಫ್ಲೋರಂ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ತುಳಸಿ ಆರೋಗ್ಯಕ್ಕೆ ಬಹೂಪಯೋಗಿ. ರಾಮ ತುಳಸಿ, ಕೃಷ್ಣ ತುಳಸಿ, ವನ ತುಳಸಿ ಎಂಬ ಮೂರು ಬಗೆಯ ತುಳಸಿಗಳಿವೆ. ಮನೆಯಂಗಳದಲ್ಲಿ ಇರುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

·  ತುಳಸಿ ಅತಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ದ ಗಾಳಿಯ ಸೇವನೆಗೆ ಸಹಕಾರಿ
·  ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು ಜ್ವರದ ಸಂದರ್ಭದಲ್ಲಿ ಇದರು ರಸವನ್ನು ಸೇವಿಸುವುದರಿಂದ ಜ್ವರ ಬೇಗನೆ ಶಮನವಾಗುತ್ತದೆ.
·  ಅಸ್ತಮಾ ರೋಗವನ್ನು ಹೋಗಲಾ ಡಿಸುವಲ್ಲಿಯೂ ತುಳಸಿ ಪರಿಣಾಮಕಾರಿ. ಇದರಲ್ಲಿರುವ ಖನಿಜಾಂಶಗಳು ಉಸಿರಾಟದ ಸಮಸ್ಯೆಗೆ ಪರಿಹಾರವಾಗುತ್ತವೆ.
·  ವಿಟಮಿನ್‌ ಸಿ ಹೇರಳವಾಗಿರುವ ಒಂದು ಸಸ್ಯ ತುಳಸಿ. ಶ್ವಾಸಕೋಶದ ಸಮಸ್ಯೆಯಿದ್ದವರು ಎಲೆಯ ಬಳಕೆಯನ್ನು ಮಾಡುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
·  ಕಿಡ್ನಿ ಸ್ಟೋನ್‌ ಸಮಸ್ಯೆಯಿರುವವರು ತುಳಸಿ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ 6 ತಿಂಗಳು ಸೇವಿಸಿದರೆ ಸಮಸ್ಯೆ ದೂರವಾಗುತ್ತದೆ.
·  ತುಳಸಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆರೋಗ್ಯವಂತ ವ್ಯಕ್ತಿಯೊಬ್ಬ ದಿನಕ್ಕೆರಡು ಬಾರಿ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಒತ್ತಡ ದೂರವಾಗುತ್ತದೆ.
·  ತುಳಸಿ ಕಾಂಡವನ್ನು ಹುಡಿಮಾಡಿ ರಾತ್ರಿ ನೀರಿಗಡ ಬೆರೆಸಿಟ್ಟು ಬೆಳಗ್ಗೆ ಸೇವಿಸುವುದರಿದ ಡಯಾಬಿಟಿಸ್‌ನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು


ಈ ವಿಭಾಗದಿಂದ ಇನ್ನಷ್ಟು

  • ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್‌ ಮಾರ್ಕ್‌ ಮೂಡುತ್ತದೆ ಎನ್ನುವುದು ಬಹುತೇಕ‌ರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ...

  • ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ...

  • ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ...

  • ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ....

  • ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್‌ ಬಳಸಿಕೊಂಡು ತಮ್ಮ ತ್ವಚೆಯನ್ನು...

ಹೊಸ ಸೇರ್ಪಡೆ