ತ್ವಚೆಯ ಸಮಸ್ಯೆಗೆ ಮುಲ್ತಾನಿ ಮಿಟ್ಟಿ ಮದ್ದು

Team Udayavani, Oct 1, 2019, 5:00 AM IST

ಸುಂದರವಾರ ತ್ವಚೆ ಹೊಂದುವುದು ಎಲ್ಲರ ಆಸೆ. ಆದರೆ ಮಲಿನಗೊಂಡ ವಾತಾವರಣ, ಸರಿಯಾದ ಆರೈಕೆ ಮಾಡದಿರುವುದು, ಜೀವನಶೈಲಿಯಿಂದ ತ್ವಚೆ ಹೊಳಪು ಕಳೆದುಕೊಂಡಿರುತ್ತದೆ. ತ್ವಚೆಯ ಯಾವುದೇ ಸಮಸ್ಯೆಗೂ ನೈಸರ್ಗಿಕ ಮನೆಮದ್ದುಗಳು ಸುಲಭ ಪರಿಹಾರ. ನೈಸರ್ಗಿಕ ವಿಧಾನಗಳನ್ನು ಬಳಸಿ ತ್ವಚೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇಂತಹ ನೈಸರ್ಗಿಕ ಮನೆ ಮದ್ದುಗಳಲ್ಲಿ ಒಂದು ಮುಲ್ತಾನಿ ಮಿಟ್ಟಿ.

ಬಳಕೆ ಹೇಗೆ
·  ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಶ್ರೀಗಂಧದ ಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ಪೇಸ್ಟ್‌ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಹಚ್ಚಿ 15ರಿಂದ 20 ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆದುಕೊಳ್ಳಬೇಕು.

·  ಒಂದು ಚಮಚ ಮುಲ್ತಾನಿ ಮಿಟ್ಟಿ, ಅರ್ಧ ಚಮಚ ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿಕೊಳ್ಳಿ. ಬಳಿಕ ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಈ ಪೇಸ್ಟ್‌ ಹಚ್ಚಿ 15 ನಿಮಿಷ ಕಾಲ ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಚರ್ಮಕ್ಕೆ ಮೊಶ್ಚಿರೈಸ್‌ ದೊರಕುವುದು.

·  2 ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಶ್ರೀಗಂಧ ಹುಡಿ ಹಾಗೂ ಅರ್ಧ ಚಮಚ ಅರಿಶಿನ ಹುಡಿ ಮಿಶ್ರಣ ಮಾಡಿದ ಬಳಿಕ ಅದನ್ನು ಅರ್ಧ ಚಮಚ ಟೊಮೇಟೊ ರಸದೊಂದಿಗೆ ಪೇಸ್ಟ್‌ ತಯಾರಿಸಿಕೊಳ್ಳಿ. ಅನಂತರ ಮುಖಕ್ಕೆ ಹಚ್ಚಿಕೊಂಡು 10-15 ನಿಮಿಷ ಹಾಗೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಪ್ರಯೋಜನಗಳು
·  ಎಣ್ಣೆಯುಕ್ತ ಚರ್ಮಕ್ಕೆ ಉತ್ತಮ
·  ಮೊಡವೆಗಳ ನಿವಾರಣೆ
·  ಚರ್ಮದ ವಿನ್ಯಾಸ ಸುಧಾರಣೆ
·  ಬಿಸಿಲಿನ ಸುಟ್ಟ ಕಲೆಗಳು ಶಮನ
·  ನೈಸರ್ಗಿಕ ಕಾಂತಿ
·  ಕಲೆ ಮತ್ತು ಗಾಯದ ಕಲೆ ತೆಗೆಯುವುದು
·  ಚರ್ಮ ಮೃದುವಾಗಿಸುವುದು
·  ಮೊಡವೆಗಳ ಕಲೆ ನಿವಾರಣೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ