ಕಣ್ಣಿನ ಒತ್ತಡ ನಿವಾರಣೆ

Team Udayavani, Oct 1, 2019, 5:00 AM IST

ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಾವು ದಿನದ ಹೆಚ್ಚು ಸಮಯ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ಮುಂದೆ ಇರುವ ಕಾರಣ ಈ ದೃಷ್ಟಿಯಲ್ಲಿ ಕಣ್ಣಿನ ರಕ್ಷಣೆ ಮಾಡಬೇಕಾಗುತ್ತದೆ. ಈ ಕುರಿತು ವೈದ್ಯರು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.

ಕಣ್ಣಿಗೆ ವಿಶ್ರಾಂತಿಯಿರಲಿ
ನಾವು ಹೊರಗಡೆಯಿಂದ ಬಂದಾಗ ನಮ್ಮ ಕಣ್ಣಿಗೆ ಒಂದಿಷ್ಟು ಸಮಯ ವಿಶ್ರಾಂತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸುಮಾರು 2-3 ನಿಮಿಷ ಕಣ್ಮುಚ್ಚಿ ಕಣ್ಣಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಸರಿಯಾಗಿ ನಿದ್ದೆಯನ್ನು ಕೂಡ ಮಾಡಬೇಕಾಗುತ್ತದೆ. ಇದರಿಂದ ದೇಹಕ್ಕೂ ಹಾಗೂ ಕಣ್ಣಿಗೂ ವಿಶ್ರಾಂತಿ ನೀಡಿದಂತಾಗುತ್ತದೆ. ಇನ್ನು ದಿನದಲ್ಲಿ ತಾಸುಗಟ್ಟಲೇ ಮೊಬೈಲ್‌, ಕಂಪ್ಯೂಟರ್‌. ಲ್ಯಾಪ್‌ಟಾಪ್‌ ಬಳಸಿದ ಅನಂತರ ನಾವು 5-10 ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಕಣ್ಣನ್ನು ಅಲುಗಾಡಿಸಿ
ಸೂಕ್ಷ್ಮ ಅಂಗವಾದ ಕಣ್ಣನ್ನು ದಿನದಲ್ಲಿ 7-10 ಬಾರಿಯಾದರೂ ಗಡಿಯಾರ ಸುತ್ತುವಿನಂತೆ ತಿರುಗಾಡಿಸಬೇಕಾಗುತ್ತದೆ. ಇದರಿಂದ ಕಣ್ಣಿನ ರಕ್ಷಣೆ ಮಾಡಬಹುದು.

ಐ ಡ್ರಾಪ್‌ ಹಾಕಿ
ದಿನದಲ್ಲಿ ಹೆಚ್ಚು ಸಮಯ ಹೊರಗಡೆ ತಿರುಗಾಡಬೇಕಾದ ಕಾರಣ ಕಣ್ಣಿಗೆ ಧೂಳು ಬಿದ್ದಿರುತ್ತದೆ. ಧೂಳು ಬಿದ್ದಾಗಲೇ ಶುದ್ಧ ನೀರಿನಿಂದ ಅದನ್ನು ತೆಗೆಯಬೇಕು. ಹಾಗೇ ದಿನಾ ಮಲಗುವಾಗ ಐ -ಡ್ರಾಪ್‌ ಲಿಕ್ವಿಡ್‌ಗಳನ್ನು ಹಾಕಿ ಮಲಗಬೇಕು. ಇದರಿಂದ ಕಣ್ಣಿನ ರಕ್ಷಣೆ ಸಾಧ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.

ನಿರಂತರ ವಿಶ್ರಾಂತಿ
ಹವಾನಿಯಂತ್ರಿತ ಕೋಣೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುವವರಿಗೆ ಹೆಚ್ಚು ಕಣ್ಣಿನ ಸಮಸ್ಯೆಗಳು ಕಾಣಬಹುದು. ಆ ಪರಿಸರದಿಂದ ಅವರ ಕಣ್ಣು ಒಣಗಿರುತ್ತವೆ. ದಿನದ ಒಂದು ಬಾರಿಯಾದರೂ ಶುದ್ಧ ನೀರಿನಲ್ಲಿ ಕಣ್ಣನ್ನು ಅದ್ದಿ ತೆಗೆಯಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ