ರಂಗ ಕನಸಿನ ಸರದಾರ ಲಕ್ಷ್ಮಣ ಪೂಜಾರಿ


Team Udayavani, Apr 14, 2017, 3:50 AM IST

14-KALA-1.jpg

ನಾಟಕದ ಗೀಳು ಹಚ್ಚಿಕೊಂಡವರು ಕಲಾ ಸಾಗರ ತಂಡದ “ಅರ್ಥವಿಲ್ಲದ ಬದುಕು’ ನಾಟಕವನ್ನು ನೋಡಿರಬಹುದು. ನಾಟಕ ನೋಡಿದವರು ಅದರಲ್ಲಿನ ಟಿ.ಸಿ. ಜಗಲೂರು ಪಾತ್ರ ವಹಿಸಿದ ಲಕ್ಷ್ಮಣ ಪೂಜಾರಿಯನ್ನು ಮರೆಯಲು ಸಾಧ್ಯವೇ? ಕಂಚಿನ ಕಂಠದ, ಗಂಭೀರ ಮುಖದ, ಕಣ್ಣುಗಳಲ್ಲೇ ನೋವನ್ನೂ ನಗುವನ್ನೂ ಸೂಸುವ ಲಕ್ಷ್ಮಣ ನಾಟಕ ನೋಡಿದವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. “ಅಭಿನವ ಚಾಪ್ಲಿನ್‌’ ನಾಟಕದ ಚಾಪ್ಲಿನ್‌ ಪಾತ್ರದಲ್ಲಾಗಲಿ, “ಅರಳಿದ ಗಝಲುಗಳು’ ನಾಟಕದ ಕಲ್ಲು ಮಿಯಾ ಪಾತ್ರದಗಲಿ, ನಾಟಕದ ಪಾತ್ರಕ್ಕೆ ಜೀವ ತುಂಬುತ್ತಾರೆ ಲಕ್ಷ್ಮಣ ಪೂಜಾರಿ.

ಕುಂದಾಪುರ, ಶೀರೂರು ಗ್ರಾಮದ ಉದೂರು ಎಂಬ ಚಿಕ್ಕ ಊರು ಲಕ್ಷ್ಮಣರದ್ದು. ಪ್ರಸ್ತುತ ಹೊಟೇಲಿನಲ್ಲಿ ಸಪ್ಲಾಯರ್‌ ಕೆಲಸ ಮಾಡುತ್ತಿದ್ದು, ನಾಟಕದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 

ಲಕ್ಷ್ಮಣ ಪೂಜಾರಿಯವರದ್ದು ಹುಟ್ಟು ಪ್ರತಿಭೆ. ಚಿಕ್ಕವನಿರುವಾಗಲೇ ಬಯಲಾಟ ನೋಡುತ್ತ ಕನಸಿನ ಲೋಕಕ್ಕೆ ತೆರಳುತ್ತಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ಹೊಟೇಲ್‌ ಕೆಲಸಕ್ಕೆ ಸೇರಿದರು. ಹಲವು ಊರುಗಳಲ್ಲಿ, ಹಲವು ಹೊಟೇಲುಗಳಲ್ಲಿ ಕೆಲಸ. ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದರೂ ಬಣ್ಣ ಹಚ್ಚುವ ಕನಸನ್ನು ಕಾಣತೊಡಗಿದರು. ಕನ್ನಡದ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಲಕ್ಷ್ಮಣ ಕೆಲಸ ಮಾಡುತ್ತಿದ್ದ ಹೊಟೇಲಿಗೆ ಬಂದಾಗ ಬಣ್ಣ ಹಚ್ಚುವ ಕನಸು ಮತ್ತೆ ಚಿಗುರೊಡೆಯಿತು. ಗಿರೀಶ ಕಾಸರವಳ್ಳಿಯವರ ಸಲಹೆಯಂತೆ ನಟನೆಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದರು. ಕಷ್ಟಪಟ್ಟು ಹಣ ಸಂಪಾದಿಸಿ ಖ್ಯಾತ ತರಬೇತಿ ಕೇಂದ್ರವೊಂದರಲ್ಲಿ ನಟನೆಯ ತರಬೇತಿ ಪಡೆದರು. ಸ್ನೇಹಿತನೊಬ್ಬ ಹೆಸರಾಂತ ನಾಟಕ ತಂಡ “ಕಲಾ ಸಾಗರ’ಕ್ಕೆ ಪರಿಚಯಿಸಿದಾಗ ಲಕ್ಷ್ಮಣರ ರಂಗ ಪ್ರಯಾಣ ಶುರುವಾಯಿತು. 

ಲಕ್ಷ್ಮಣರ ಮೊದಲ ನಾಟಕ ಕಲಾ ಸಾಗರ ತಂಡದೊಡನೆ, ನಾಟಕ -“ವಲಸೆ ಹಕ್ಕಿ ಹಾಡು’. ಇದೇ ನಾಟಕ ತಂಡದೊಡನೆ “ಅರ್ಥವಿಲ್ಲದ ಬದುಕು’, “ಕೊಳಗ’ ಮುಂದಿನ ನಾಟಕಗಳಾಗಿದ್ದವು. ಅಲ್ಲದೆ ಡ್ರಾಮಾಟ್ರಿಕ್ಸ್‌ ತಂಡದೊಡನೆ “ರಾಮ ಫ‌ಮ್‌ ತೆನಾಲಿ, “ಅರಳಿದ ಗಜಲುಗಳು’, “ಅಭಿನವ ಚಾಪ್ಲಿನ್‌’ ಹೀಗೆ ಹಲವಾರು ನಾಟಗಳಲ್ಲಿ ಅಭಿನಯಿಸಿದ್ದಾರೆ. ನಾಟಕವಲ್ಲದೆ ಕೆಲವು ಕನ್ನಡ ಟಿವಿ ಸಿರಿಯಲ್‌ ಮತ್ತು “ಕಾಮನ ಬಿಲ್ಲು’, ‘ಕೌತುಕ’ ಎಂಬ ಎರಡು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಲಕ್ಷ್ಮಣ ಈಗ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹೊಟೇಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹ ಕೆಲಸಗಾರರ ಮತ್ತು ಹೊಟೇಲ್‌ ಮಾಲಕರ ಸಹಕಾರದಿಂದ ಉದ್ಯೋಗ ಮತ್ತು ಅಭಿನಯವೆಂಬ ಅವಳಿ ದೋಣಿಗಳಲ್ಲಿ ಸಾಗಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಲಕ್ಷ್ಮಣ. 

ಗೀತಾ ಕುಂದಾಪುರ

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.