ಮಕ್ಕಳ ಅಲರ್ಜಿಗಳು ತಪಾಸಣೆ ಪತ್ತೆ ಮತ್ತು ಚಿಕಿತ್ಸೆ

Team Udayavani, Aug 8, 2021, 7:30 AM IST

Untitled-1

ಮಕ್ಕಳಲ್ಲಿ ಅಲರ್ಜಿಗಳು ಉಂಟಾಗುವುದು ಸಾಮಾನ್ಯ. ಆದರೆ ಇದನ್ನು ನಿರ್ಲಕ್ಷಿಸಿದರೆ ಮುಂದೆ ಮಕ್ಕಳ ಮೇಲೆ ದೀರ್ಘ‌ಕಾಲದವರೆಗೆ ಪರಿಣಾಮ ಬೀರಬಹುದು. ಶೀಘ್ರ ಪತ್ತೆ ಹಾಗೂ ಚಿಕಿತ್ಸೆಯಿಂದ ಅಲರ್ಜಿಯನ್ನು ಉತ್ತಮವಾಗಿ ನಿಭಾಯಿಸಲು ಮತ್ತು ಅಗತ್ಯವಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಮಕ್ಕಳ ಅಲರ್ಜಿ ಕ್ಲಿನಿಕ್‌ ಇತ್ತೀಚೆಗೆ ಆರಂಭವಾಗಿದೆ. ಇಲ್ಲಿ ಮಕ್ಕಳಲ್ಲಿ ಕಂಡುಬರುವ ಅಲರ್ಜಿಗಳಿಗೆ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಅಲರ್ಜಿ ಬಹು ಸಾಮಾನ್ಯವಾದುದು. ಅವು ನಿರಪಾಯಕಾರಿ ಎಂಬುದಾಗಿ ಪರಿಗಣಿತವಾಗಿರುವುದು ಮತ್ತು ಅನೇಕ ಮಕ್ಕಳು ಇದರಿಂದ ಬಳಲುವುದರಿಂದ ತಮ್ಮ ಮಗು ಕೂಡ ತಾನೇ ತಾನಾಗಿ ಗುಣ ಹೊಂದಬಹುದು ಎಂಬ ಹೆತ್ತವರ ಭಾವನೆಯಿಂದಾಗಿ ಮಕ್ಕಳ ಅಲರ್ಜಿಗಳ ಬಗ್ಗೆ ಯಾರೂ ಹೆಚ್ಚು ಗಮನ ಹರಿಸಲು ಹೋಗುವುದಿಲ್ಲ.ಅಲರ್ಜಿಗಳು ಆಹಾರದಿಂದ ಉಂಟಾಗಿ ಚರ್ಮದ ಕಡೆಗೆ ಮತ್ತು ಅಸ್ತಮಾ, ಅಲರ್ಜಿಕ್‌ ರಿನೈಟಿಸ್‌ ಆಗಿ ಪ್ರಗತಿ ಹೊಂದುವುದನ್ನು ತಡೆಯಲು ಸಾಧ್ಯವಾಗುವುದು ಮಕ್ಕಳ ಅಲರ್ಜಿಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದಾಗ ಮಾತ್ರ. ಅಲರ್ಜಿಗಳನ್ನು ಬೇಗನೆ ಪತ್ತೆಹಚ್ಚಿದಾಗ ಮಾತ್ರ ಶ್ವಾಸಾಂಗದಲ್ಲಿ ಹಾಗೂ ಚರ್ಮದಲ್ಲಿ ಶಾಶ್ವತ ಬದಲಾವಣೆ ಉಂಟಾಗುವುದನ್ನು ತಡೆಯಬಹುದು ಮತ್ತು ಇದರಿಂದ ಅಂಥ ಮಕ್ಕಳು ಉತ್ತಮ ಗುಣಮಟ್ಟದ ದೀರ್ಘ‌ಕಾಲಿಕ ಜೀವನವನ್ನು ನಡೆಸಬಹುದಾಗಿದೆ.

ಮಕ್ಕಳ ಅಲರ್ಜಿಯ ವಿಧಗಳು :

  • ಮಕ್ಕಳ ಅಸ್ತಮಾ ಮತ್ತು ಉಬ್ಬಸ
  • ಅಲರ್ಜಿಕ್‌ ರಿನೈಟಿಸ್‌
  • ಅಟಾಪಿಕ್‌ ಡರ್ಮಟೈಟಿಸ್‌ ಮತ್ತು ಚರ್ಮದ ಅಲರ್ಜಿ/ ದದ್ದುಗಳು
  • ಧೂಳಿನ ಅಲರ್ಜಿ
  • ಪರಾಗರೇಣುಗಳ ಅಲರ್ಜಿ
  • ಕ್ರಿಮಿಕೀಟಗಳ ಅಲರ್ಜಿ (ಜೇನ್ನೊಣ, ಕಣಜದ ಹುಳು, ಸೊಳ್ಳೆ)
  • ಅರ್ಟಿಕೇರಿಯಾ
  • ಆ್ಯಂಜಿಯೊಎಡೆಮಾ
  • ಆಹಾರದ ಅಲರ್ಜಿಗಳು
  • ಲೇಟೆಕ್ಸ್‌ ಅಲರ್ಜಿ
  • ಅಲರ್ಜಿಕ್‌ ಮತ್ತು ಕಾಂಟ್ಯಾಕ್ಟ್ ಡರ್ಮಟೈಟಿಸ್‌
  • ಔಷಧ ಅಲರ್ಜಿಗಳು
  • ಅನಾಫಿಲಾಕ್ಸಿಸ್‌

ಅಲರ್ಜಿಗಳ ಲಕ್ಷಣಗಳು :  ಈ ಕೆಳಗೆ ನೀಡಲಾಗಿರುವ ಯಾವುದೇ ಲಕ್ಷಣಗಳು ಅಥವಾ ಕೆಲವು ಲಕ್ಷಣಗಳು ಜತೆಗೂಡಿ ಉಂಟಾದರೆ ಅಲರ್ಜಿ ಎಂದು ಭಾವಿಸಬಹುದು

ಶ್ವಾಸಾಂಗದ ಅಲರ್ಜಿಗಳು: ಸೀನುವುದು, ಕೆಮ್ಮು, ಮೂಗಿನಲ್ಲಿ ನೀರಿಳಿಯುವುದು, ಮೂಗು ಕಟ್ಟುವುದು, ಎದೆ ಕಟ್ಟಿದಂತಾಗುವುದು, ಓಡುವಾಗ, ನಗುವಾಗ, ಆಟ ಆಡುವಾಗ ಉಸಿರು ಹಿಡಿದಂತಾಗುವುದು. ಈ ಲಕ್ಷಣಗಳು ಸಂಜೆ, ರಾತ್ರಿ ಮತ್ತು ಮುಂಜಾನೆ ಹೆಚ್ಚಿರುತ್ತವೆ.

ಚರ್ಮದ ಅಲರ್ಜಿಗಳು:

ಕೆಂಪು ಬಣ್ಣದ ದಡಿಕೆಗಳು ಮತ್ತು ತುರಿಕೆ, ಚರ್ಮ ಶುಷ್ಕವಾಗಿದ್ದು ದದ್ದುಗಳು. ಆಹಾರದ ಅಲರ್ಜಿಗಳು ಉಲ್ಬಣಿಸಿ ಚರ್ಮದ ಅಲರ್ಜಿಗಳ ಲಕ್ಷಣಗಳು ಉಂಟಾಗಲೂ ಬಹುದು.

ಆಹಾರದ ಅಲರ್ಜಿಗಳು:

ತುಟಿಗಳು ಬಾತುಕೊಳ್ಳುವುದು, ನಿರ್ದಿಷ್ಟ ಆಹಾರವಸ್ತುಗಳನ್ನು ಸೇವಿಸಿದ ಬಳಿಕ ಬಾಯಿ, ಗಂಟಲು ಮತ್ತು ತುಟಿಗಳಲ್ಲಿ ತುರಿಕೆ ಉಂಟಾಗುವುದು, ಹೊಟ್ಟೆನೋವು, ವಾಂತಿ ಮತ್ತು ಚರ್ಮದಲ್ಲಿ ದಡಿಕೆಗಳು ಉಂಟಾಗುವುದು.

ಅರ್ಟಿಕೇರಿಯಾ: ಚರ್ಮದ ಮೇಲೆ ಕೆಂಪಾದ ದಡಿಕೆಯ ಗುತ್ಛಗಳು

ಲಭ್ಯವಿರುವ ಮಕ್ಕಳ ಅಲರ್ಜಿ ಆರೋಗ್ಯ ಸೇವೆಗಳು :

  • ಮೇಲ್ಕಂಡ ಎಲ್ಲ ಅಲರ್ಜಿಗಳ ತಪಾಸಣೆ ಮತ್ತು ಪತ್ತೆ
  • ಆಹಾರ ಮತ್ತು ಔಷಧ ಅಲರ್ಜಿ ತಪಾಸಣೆ
  • ಸ್ಕಿನ್‌ ಪ್ರಿಕ್‌ ತಪಾಸಣೆ
  • ಪ್ಯಾಚ್‌ ತಪಾಸಣೆ
  • ಶ್ವಾಸಕೋಶ ಕಾರ್ಯಾಚರಣೆ ಪರೀಕ್ಷೆ
  • ಮೇಲ್ಕಂಡ ಎಲ್ಲ ಅಲರ್ಜಿಗಳಿಗೆ ಚಿಕಿತ್ಸೆ

ಡಾ| ಸೌಂದರ್ಯಾ ಎಂ.

ಮಕ್ಕಳ ಅಲರ್ಜಿ ತಜ್ಞೆ

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.