Arogyavani: ನರಶಾಸ್ತ್ರೀಯ ಪುನರ್ವಸತಿ


Team Udayavani, Sep 10, 2023, 10:26 AM IST

5-health

ಬೆನ್ನುಹುರಿ ಗಾಯ (ಸ್ಪೈನಲ್‌ ಕಾರ್ಡ್‌ ಇಂಜುರಿ-ಎಸ್‌ಸಿಐ), ಲಕ್ವಾ, ಅಪಘಾತದಲ್ಲಿ ಮಿದುಳು ಹಾನಿ (ಟ್ರಾಮಾಟಿಕ್‌ ಬ್ರೈನ್‌ ಇಂಜುರಿ -ಟಿಬಿಐ) ಮತ್ತಿತರ ನರಶಾಸ್ತ್ರೀಯ ಸಮಸ್ಯೆಗಳು ವ್ಯಕ್ತಿಯೊಬ್ಬನ ಜೀವನವನ್ನು ನಾಟಕೀಯವಾಗಿ ಪರಿವರ್ತಿಸಿ ದೈಹಿಕ, ಗ್ರಹಣಾತ್ಮಕ ಮತ್ತು ಭಾವನಾತ್ಮಕವಾಗಿ ಅಪಾರ ಸವಾಲುಗಳನ್ನು ಒಡ್ಡಬಲ್ಲವು. ಆದರೆ ನರಶಾಸ್ತ್ರೀಯ ಪುನರ್ವಸತಿಯಲ್ಲಿ ಪ್ರಸ್ತುತ ಭಾರೀ ಪ್ರಗತಿ ಆಗಿದ್ದು, ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದವರು ತಮ್ಮ ಸ್ವಾವಲಂಬನೆಯನ್ನು ಮತ್ತೆ ಗಳಿಸಿಕೊಳ್ಳಲು, ಜೀವನ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಮತ್ತು ಸಮಾಜದಲ್ಲಿ ಮತ್ತೆ ಬೆರೆಯಲು ಸಹಾಯ ಮಾಡುತ್ತದೆ. ಪ್ರಸ್ತುತ ಈ ಲೇಖನದಲ್ಲಿ ನರಶಾಸ್ತ್ರೀಯ ಸಮಸ್ಯೆಯಿಂದ ಗುಣ ಹೊಂದುವುದು ಮತ್ತು ಸ್ವಾವಲಂಬನೆಯನ್ನು ಮರಳಿ ಗಳಿಸಿಕೊಳ್ಳುವ ನರಶಾಸ್ತ್ರೀಯ ಪುನರ್ವಸತಿಯ ಪರಿವರ್ತನಾತ್ಮಕ ಪ್ರಕ್ರಿಯೆಯನ್ನು ವಿವರಿಸಲಾಗಿದೆ.

  1. ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದವರ ಪುನರ್ವಸತಿ

ನರಶಾಸ್ತ್ರೀಯ ಪುನರ್ವಸತಿಯು ಒಂದು ಬಹು ವಿಭಾಗೀಯ ಪ್ರಕ್ರಿಯೆ. ವೈದ್ಯಕೀಯ ಪುನರ್ವಸತಿ, ದೈಹಿಕ ಚಿಕಿತ್ಸೆ, ಆಕ್ಯುಪೇಶನಲ್‌ ಥೆರಪಿ, ಭಾಷಿಕ ಚಿಕಿತ್ಸೆ, ಮನಶಾಸ್ತ್ರೀಯ ನೆರವು ಮತ್ತಿತರ ಆಯಾಮಗಳನ್ನು ಇದು ಒಳಗೊಂಡಿದೆ. ಈ ಸಮಗ್ರ ಕಾರ್ಯವಿಧಾನವು ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದ ವ್ಯಕ್ತಿಯ ದೈಹಿಕ, ಗ್ರಹಣಾತ್ಮಕ ಮತ್ತು ಭಾವನಾತ್ಮಕ ಕಲ್ಯಾಣಕ್ಕಾಗಿ ವ್ಯಕ್ತಿಗತ ಅಗತ್ಯಗಳಿಗೆ ಅನುಗುಣವಾಗಿ ಪುನರ್ವಸತಿ ಪ್ರಕ್ರಿಯೆಯನ್ನು ರೂಪಿಸಲು ನೆರವಾಗುತ್ತದೆ.

  1. ವಿವಿಧ ನರಶಾಸ್ತ್ರೀಯ ಸಮಸ್ಯೆಗಳನ್ನು ನಿಭಾಯಿಸುವುದು

ನರಶಾಸ್ತ್ರೀಯ ಪುನರ್ವಸತಿಯು ಕೇವಲ ಒಂದು ಅನಾರೋಗ್ಯಕ್ಕೆ ಸೀಮಿತವಾದುದಲ್ಲ; ಅದು ಬೆನ್ನುಹುರಿ ಗಾಯ, ಲಕ್ವಾ, ಅಪಘಾತದಿಂದ ಮೆದುಳು ಗಾಯ ಮತ್ತು ಇತರ ತೊಂದರೆಗಳು ಒಳಗೊಂಡಂತೆ ಹತ್ತು ಹಲವು ನರಶಾಸ್ತ್ರೀಯ ಸವಾಲುಗಳನ್ನು ಉದ್ದೇಶಿಸಿರುತ್ತದೆ. ಪ್ರತೀ ನರಶಾಸ್ತ್ರೀಯ ಸಮಸ್ಯೆಯು ಆಯಾ ವ್ಯಕ್ತಿಯ ಮೇಲೆ ಉಂಟು ಮಾಡುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ನಿಭಾಯಿಸಲು ವ್ಯಕ್ತಿನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸಬೇಕಾಗಿರುತ್ತದೆ.

  1. ದೌರ್ಬಲ್ಯಗಳನ್ನು ಪರಿಹರಿಸಿ ಸಶಕ್ತಗೊಳಿಸುವುದು ಮತ್ತು ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವುದು

ನರಶಾಸ್ತ್ರೀಯ ಪುನರ್ವಸತಿಯ ಒಂದು ಮೈಲಿಗಲ್ಲು ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದವರ ದುರ್ಬಲಗೊಂಡ ಅಂಗಾಂಗ ಗಳು ಮತ್ತೆ ಸದೃಢಗೊಳ್ಳಲು ಸಹಾಯ ಮಾಡು ವುದು ಮತ್ತು ಪ್ರಸ್ತುತ ಅವರಲ್ಲಿ ಇರುವ ಸಾಮರ್ಥ್ಯಗಳನ್ನು ಗರಿಷ್ಠ ಮಟ್ಟಕ್ಕೆ ಎತ್ತರಿಸು ವುದು. ಪಿಎಂಆರ್‌ ವೈದ್ಯರು ಔಷಧಗಳು ಮತ್ತು ಇಂಜೆಕ್ಷನ್‌ಗಳನ್ನು ನೀಡುವ ಮೂಲಕ ರೋಗಿಯ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾ ಗುವ ವೈದ್ಯಕೀಯ ಅಂಶಗಳನ್ನು ನಿಭಾಯಿಸುವತ್ತ ಗಮನ ಹರಿಸುವರು ಮತ್ತು ಒಟ್ಟಾರೆ ಪುನರ್ವಸತಿ ಪ್ರಕ್ರಿಯೆಯಲ್ಲಿ ಸಮನ್ವಯ ಸಾಧಿಸುವರು. ಇನ್ನಿತರ ವಿವಿಧ ಚಿಕಿತ್ಸಕರು ರೋಗಿಯ ಸ್ನಾಯು ದೃಢತೆ, ಸಮನ್ವಯ ಉತ್ತಮಪಡಿಸು ವುದು ಹಾಗೂ ಸಮಗ್ರ ದೈಹಿಕ ಚಟುವಟಿಕೆ ಗಳ ಪುನಶ್ಚೇತನಕ್ಕಾಗಿ ವ್ಯಾಯಾಮ ಕಾರ್ಯ ವಿಧಾನಗಳನ್ನು ಹಾಗೂ ಚಟುವಟಿಕೆಗಳನ್ನು ವಿನ್ಯಾಸಗೊಳಿಸುವುದಕ್ಕಾಗಿ ರೋಗಿಯ ಜತೆಗೆ ನಿಕಟವಾಗಿ ಕಾರ್ಯವೆಸಗುತ್ತಾರೆ.

  1. ದೈನಿಕ ಜೀವನದ ಚಟುವಟಿಕೆಗಳಲ್ಲಿ ಸ್ವಾವಲಂಬನೆ

ನರಶಾಸ್ತ್ರೀಯ ಪುನರ್ವಸತಿಯ ನಿರ್ಣಾಯಕ ವಿಷಯಗಳಲ್ಲಿ ಒಂದು ದೈನಿಕ ಜೀವನದ ಚಟುವ ಟಿಕೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು. ಉಡುಗೆ-ತೊಡುಗೆ ಧರಿಸುವುದು, ತಲೆ ಬಾಚಿ ಕೊಳ್ಳುವುದು, ಮುಖಕೌÒರ ಇತ್ಯಾದಿಗಳು, ಆಹಾರ ಸೇವನೆ ಮತ್ತು ಚಲನೆಯಂತಹ ವಿಷಯಗಳನ್ನು ಹೇಗೆ ನಡೆಸುವುದು ಎಂಬ ಬಗ್ಗೆ ಫಿಸಿಯೊಥೆರಪಿಸ್ಟ್‌ಗಳು ಗಮನಹರಿಸಿ ಕಲಿಸುತ್ತಾರೆ. ಇದು ರೋಗಿಗಳಲ್ಲಿ ಆತ್ಮವಿಶ್ವಾಸ ವನ್ನು ವರ್ಧಿಸುತ್ತದೆ ಮತ್ತು ಆರೈಕೆದಾರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

  1. ನೋವನ್ನು ಕಡಿಮೆ ಮಾಡುವುದು ಮತ್ತು ಸಂಕೀರ್ಣ ಸಮಸ್ಯೆಗಳನ್ನು ತಡೆಯುವುದು

ನರಶಾಸ್ತ್ರೀಯ ಸಮಸ್ಯೆಗಳ ಜತೆಗೆ ಕೆಲವೊಮ್ಮೆ ದೀರ್ಘ‌ಕಾಲಿಕ ನೋವು ಕೂಡ ಇರುತ್ತದೆ. ನರಶಾಸ್ತ್ರೀಯ ಪುನರ್ವಸತಿಯು ನೋವು ನಿರ್ವಹಣೆಯ ತಂತ್ರಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಔಷಧಗಳು, ಇಂಜೆಕ್ಷನ್‌ಗಳು, ದೈಹಿಕ ಚಿಕಿತ್ಸೆಗಳು ಮತ್ತು ಇತರ ಪೂರಕ ಕಾರ್ಯವಿಧಾನಗಳು ಸೇರಿರುತ್ತವೆ. ಅಧಿಕ ರಕ್ತದೊತ್ತಡ, ಸೋಂಕುಗಳು, ಸ್ನಾಯುಗಳು ಹಿಡಿದುಕೊಳ್ಳುವುದು ಮತ್ತು ಸೆಳೆತಗಳಂತಹ ಸಂಕೀರ್ಣ ಸಮಸ್ಯೆಗಳಿಂದಾಗಿ ರೋಗಿ ಮತ್ತೆ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯುವ ಕ್ರಮಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳಲಾಗುತ್ತದೆ.

  1. ಕುಟುಂಬದ ಭಾಗೀದಾರಿಕೆ ಮತ್ತು ಶಿಕ್ಷಣ

ನರಶಾಸ್ತ್ರೀಯ ಪುನರ್ವಸತಿಯು ಆಯಾ ರೋಗಿಗೆ ಮಾತ್ರ ಸಂಬಂಧಿಸಿದ್ದಲ್ಲ; ಬದಲಾಗಿ ಅವರಿಗೆ ಪೂರಕವಾದ ನೆರವು ಜಾಲವನ್ನೂ ಇದು ಒಳಗೊಳ್ಳುತ್ತದೆ. ರೋಗಿಗೆ ಆರೈಕೆ ಒದಗಿಸುವುದು, ಮಾನಸಿಕ ಬೆಂಬಲವನ್ನು ನೀಡುವುದು ಮತ್ತು ವ್ಯಕ್ತಿಯು ಬೇಗನೆ ಚೇತರಿಸಿಕೊಳ್ಳುವುದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವಂತಹ ವಿಚಾರಗಳ ಬಗ್ಗೆ ರೋಗಿಯ ಕುಟುಂಬದವರಿಗೆ ಶಿಕ್ಷಣವನ್ನು ಒದಗಿಸಲಾಗುತ್ತದೆ. ಚಲನೆಗೆ ಸಹಾಯ ಮಾಡುವುದು, ಪ್ರಯಾಣ ಮತ್ತು ಇತರ ಅಗತ್ಯ ಚಟುವಟಿಕೆಗಳಲ್ಲಿ ಸಹಾಯ ಮಾಡುವಂತೆ ಆರೈಕೆದಾರರಿಗೆ ತರಬೇತಿ ಒದಗಿಸಲಾಗುತ್ತದೆ.

  1. ಆರೈಕೆದಾರರ ಕ್ಷೇಮ

ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದ ವ್ಯಕ್ತಿಯನ್ನು ನೋಡಿಕೊಳ್ಳುವುದು, ಆರೈಕೆ ಒದಗಿಸುವುದು ಅವರ ಕುಟುಂಬ ಸದಸ್ಯರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಪಾರ ಶ್ರಮ, ಯಾತನೆ, ಒತ್ತಡವನ್ನು ಉಂಟು ಮಾಡುತ್ತದೆ. ನರಶಾಸ್ತ್ರೀಯ ಪುನರ್ವಸತಿ ಕಾರ್ಯಕ್ರಮವು ಇದನ್ನು ಕೂಡ ಗುರುತಿಸುತ್ತದೆ ಮತ್ತು ಆರೈಕೆದಾರರು ಎದುರಿಸಬಹುದಾದ ಸವಾಲುಗಳು ಮತ್ತು ಒತ್ತಡವನ್ನು ನಿಭಾಯಿಸಲು ನೆರವು ವ್ಯವಸ್ಥೆಗಳನ್ನು ಒದಗಿಸುತ್ತದೆ. ಆರೈಕೆದಾರರ ಆರೈಕೆ, ಆಪ್ತ ಸಮಾಲೋಚನೆ ಮತ್ತು ನೆರವು ಸಮೂಹಗಳು ರೋಗಿ ಮತ್ತು ರೋಗಿಯ ಆರೈಕೆದಾರರರ ಕಲ್ಯಾಣ ಮತ್ತು ಕ್ಷೇಮದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ.

  1. ಜೀವನ ಗುಣಮಟ್ಟ ವೃದ್ಧಿ

ನರಶಾಸ್ತ್ರೀಯ ಪುನರ್ವಸತಿಯ ಗುರಿಯು ಅಂತಿಮವಾಗಿ ನರಶಾಸ್ತ್ರೀಯ ಸಮಸ್ಯೆಗೆ ತುತ್ತಾದ ವ್ಯಕ್ತಿಯ ಒಟ್ಟಾರೆ ಜೀವನ ಗುಣಮಟ್ಟವನ್ನು ವೃದ್ಧಿಸುವುದೇ ಆಗಿದೆ. ಸ್ವಾವಲಂಬನೆಯನ್ನು ಪುನರ್‌ ಸ್ಥಾಪಿಸುವುದು, ನೋವನ್ನು ಕಡಿಮೆ ಮಾಡುವುದು, ಭಾವನಾತ್ಮಕ ಕ್ಷೇಮವನ್ನು ಪೋಷಿಸುವುದರ ಮೂಲಕ ಈ ಕಾರ್ಯಕ್ರಮಗಳು ಹೆಚ್ಚು ಸಂಪೂರ್ಣವಾದ ಮತ್ತು ಸಫ‌ಲ ಜೀವನವನ್ನು ನಡೆಸುವುದಕ್ಕೆ ಸಹಾಯ ಮಾಡುತ್ತವೆ.

  1. ಉಪಸಂಹಾರ

ನರಶಾಸ್ತ್ರೀಯ ಸಮಸ್ಯೆಗಳಿಗೆ ತುತ್ತಾಗಿರುವವರಿಗೆ ನರಶಾಸ್ತ್ರೀಯ ಪುನರ್ವಸತಿಯು ಒಂದು ಆಶಾಕಿರಣವಾಗಿದೆ. ಸಮಗ್ರವಾದ ಮತ್ತು ವ್ಯಕ್ತಿನಿರ್ದಿಷ್ಟವಾದ ಕಾರ್ಯವಿಧಾನದ ಮೂಲಕ ಅದು ವ್ಯಕ್ತಿಗಳನ್ನು ತಮ್ಮ ಜೀವನವನ್ನು ಮರಳಿ ಕಟ್ಟಿಕೊಳ್ಳಲು, ಸ್ವಾವಲಂಬನೆಯನ್ನು ಮರುಸ್ಥಾಪಿಸಿಕೊಳ್ಳಲು ಮತ್ತು ಸವಾಲುಗಳನ್ನು ದೃಢನಿಶ್ಚಯದೊಂದಿಗೆ ಎದುರಿಸಲು ಸಶಕ್ತಗೊಳಿಸುತ್ತದೆ. ಇದಕ್ಕೆ ನೆರವಾಗುವ ಪೂರಕ ತಂಡವಾಗಿ ನಾವು ನಿಮಗೆ ಸವಾಲುಗಳನ್ನು ದಾಟುವಲ್ಲಿ ಸಹಾಯ ಮಾಡುತ್ತ, ನಗುನಗುತ್ತ ಹೊಸ ಬದುಕನ್ನು ಅಪ್ಪಿಕೊಳ್ಳಲು ಈ ಪ್ರಯಾಣದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ನೀಡುತ್ತೇವೆ.

-ಡಾ| ಆ್ಯನ್‌ ಮೇರಿ ಜಾನ್‌,

ಅಸಿಸ್ಟೆಂಟ್‌ ಪ್ರೊಫೆಸರ್‌, ಫಿಸಿಕಲ್‌,

ಮೆಡಿಸಿನ್‌ ಮತ್ತು ರಿಹ್ಯಾಬಿಲಿಟೇಶನ್‌,

ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು.

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯುರಾಲಜಿ ವಿಭಾಗ,ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.