ಪುಸ್ತಕ ಪರಿಷೆ


Team Udayavani, Jan 20, 2018, 3:35 PM IST

bookkss-review.jpg

ಹಂಪಿ ಇತಿಹಾಸ ಅವಲೋಕನ
ಇತಿಹಾಸ ಪ್ರಸಿದ್ಧ ಹಂಪಿ ಕನ್ನಡಿಗರ ಹೆಮ್ಮೆ. ವರ್ತಕರು ಹಂಪಿಯ ಬೀದಿಗಳಲ್ಲಿ ಮುತ್ತು ರತ್ನಗಳನ್ನು ರಾಶಿ ಹಾಕಿ ವ್ಯಾಪಾರ ಮಾಡುತ್ತಿದ್ದರು ಎಂಬ ಮಾತೇ ಕನ್ನಡಿಗರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವೈಭವದಿಂದ ಮೆರೆದಿರುವ ಹಂಪಿ ಈಗ ತನ್ನ ಶ್ರೀಮಂತ ಸಾಂಸ್ಕೃತಿಕ ಕುರುಹುಗಳನ್ನು ಅಲ್ಪ ಸ್ವಲ್ಪ ಉಳಿಸಿಕೊಂಡು ನಮ್ಮೆದುರು ಭಗ್ನ ಸ್ಥಿತಿಯಲ್ಲಿದೆ.

ವಿಜಯನಗರದ ರಸರ ಕಾಲದಲ್ಲಂತೂ ಜಗತ್ತನೇ ಆಕರ್ಷಿಸುವ ರೀತಿಯಲ್ಲಿ ಕಟ್ಟಡಗಳು ದೇವಾಲಯಗಳು ನಿರ್ಮಾಣಗೊಂಡವು. ಪಂಪಾ ಕ್ಷೇತ್ರವೆಂದೂ ಪಂಪಾ ತೀರ್ಥವೆಂದು ಹೆಸರು ಪಡೆಯಿತು. ಇಲ್ಲಿನ ಬಸದಿಗಳು, ಬೌದ್ಧ ಸ್ಥೂಪಗಳು, ದೇವಾಲಯಗಳು ವಿಶಿಷ್ಟ ವಾಸ್ತು  ವೈಭವದಿಂದ ಕೂಡಿವೆ. ಹಂಪೆಯು ಕೇವಲ ಧಾರ್ಮಿಕ ಕೇಂದ್ರವೇ ಅಲ್ಲದೆ ಪ್ರಸಿದ್ಧ ವ್ಯಾಪಾರ ಕೇಂದ್ರವೂ ಆಗಿತ್ತು. ಹಂಪಿ ಸರ್ವಧರ್ಮಗಳ ನೆಲೆವೀಡಾಗಿತ್ತು.

ತನ್ನ ಪ್ರಾಕೃತಿಕ ಸೌಂದರ್ಯದಿಂದ ಹಾಗೂ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಕಬ್ಬಿಣ ಮ್ಯಾಂಗನೀಸ್‌ ಮುಂತಾದ ಖನಿಜಗಳಿಂದ ಸಂಪದ್ಭರಿತವಾಗಿತ್ತು. ಹಂಪಿಯ ಚರಿತೆಯನ್ನು ಈ ಬೃಹತ್‌ ಸಂಪುಟದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಹಂಪಿಯ ವೈಭವ, ಅಲ್ಲಿನ ಪ್ರಾಕೃತಿಕ ಸಂಪತ್ತು, ಹಂಪಿಯನ್ನು ಆಳಿದ ರಾಜಮನೆತನಗಳ ಪರಿಚಯ,  ಹಂಪಿಯ ವಾಸ್ತು ಪ್ರಸಿದ್ಧ ದೇವಾಲಯಗಳು, ಬಸದಿಗಳು, ಬೌದ್ಧ ಸ್ತೂಪಗಳು, ನದಿ ಕೆರೆ ಕಟ್ಟೆಗಳು, ಅಲ್ಲಿನ ಕೋಟೆ ಕೊತ್ತಲಗಳು  ಹೀಗೆ ಹಂಪಿಯ ಸಮಗ್ರ ಮಾಹಿತಿ ಇದೆ.

ಈ ಕೃತಿಯನ್ನು ಹಂಪಿಯ ವಿಶ್ವಕೋಶ ಎಂದರೂ ಅಡ್ಡಿ ಇಲ್ಲ. ಚಿತ್ತಾಕರ್ಷಕವಾದ ವರ್ಣಮಯ ಚಿತ್ರಗಳು ಪುಸ್ತಕದ ಸೊಬಗನ್ನು ಹೆಚ್ಚಿಸಿವೆ.  ಇತಿಹಾಸಪ್ರಿಯರು ಓದಲೇಬೇಕಾದ ಕೃತಿ ಇದು. ಒಂದು ವಿಷಾದನೀಯ ಸಂಗತಿ ಎಂದರೆ ಕೃತಿಯ ಬೆಲೆ ಆಕಾಶದಷ್ಟು ಎತ್ತರ. ಇದನ್ನು ರಾಜಮಹಾರಾಜರು ಕೊಂಡು ಓದಬಹುದೇ ವಿನಃ ಜನಸಾಮಾನ್ಯರಿಗೆ ಎಟುಕುವ ಬೆಲೆಯಲ್ಲಿ ಇಲ್ಲ. ಕೃತಿಯ ಉದ್ದೇಶ ಗುಣಾತ್ಮಕವಾಗಿದ್ದರೂ ದರದ ದೃಷ್ಟಿಯಿಂದ ಈ ಪುಸ್ತಕ ಎಲ್ಲರನ್ನೂ ತಲುಪುವುದಿಲ್ಲ.

ಸಂ: ಮಲ್ಲಿಕಾ ಘಂಟಿ.
ಪ್ರ: ಪ್ರಸಾರಾಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ.
ಬೆಲೆ: ರೂ 2500.

***

ಅಮ್ಮ ಆದ ಅಮ್ಮು ಜಯಲಲಿತಾ
ಪುರುಚ್ಚಿ ತಲೈವಿ ಎಂದು ಕರೆಸಿಕೊಂಡ  ಜಯಲಲಿತಾರನು °ಕುರಿತು ಇರುವ ಕಥೆಗಳು ಸಾವಿರಾರು. ಜಯಲಲಿತಾ ನಮ್ಮನ್ನಗಲಿ ಒಂದು ವರ್ಷವಾಗಿದ್ದರೂ ಅವರ ಕುರಿತ ಕುತೂಹಲ ಇನ್ನೂ ಜನರಲ್ಲಿ ಹಾಗೆಯೇ ಇದೆ.  ಕರ್ನಾಟಕದ ಜನತೆಗೆ ಜಯಲಲಿತಾ ಎಂದರೆ ನಮ್ಮ ಮಂಡ್ಯದ  ಅಥವಾ ಮೇಲುಕೋಟೆಯ ಹೆಣ್ಣುಮಗಳು ಎಂಬ ನಂಬಿಕೆ ಇದೆ. ಆದರೆ  ಈ ಕೃತಿಯ ಪ್ರಕಾರ ಅವರು ಖಂಡಿತಾ ಮಂಡ್ಯ ಅಥವಾ ಮೇಲುಕೋಟೆ ಮೂಲದವರಲ್ಲ.

ಜಯಲಲಿತಾ ವಂಶದ ಮೂಲ ಪುರುಷ ಲಕ್ಷಿಪುರಂ ಶ್ರೀನಿವಾಸ ಅಯ್ಯಂಗಾರ್‌ ರವರ ಮೂಲ ಸ್ಥಳ ತಮಿಳುನಾಡಿನ ತಿರಪ್ಪೂರ್‌ ಜಿಲ್ಲೆಯ ಧಾರಾಪುರಂ. ಜಯಲಲಿತಾ ತಂದೆ. ಜಯರಾಂಗೆ ಇಬ್ಬರು ಹೆಂಡತಿಯರು. ಮೊದಲನೆಯವರು ಜಯಮ್ಮಾಳ್‌ ಎರಡನೆಯವರು ವೇದವಲ್ಲಿ. ಈ ಜಯಮ್ಮಾಳ್‌ ಎಂಬುವರ ಮಗ ವಾಸುದೇವನ್‌ ಟಿ ನರಸೀಪುರದ ಬಳಿ ಇರುವ ಶ್ರೀರಂಗರಾಜಪುರದಲ್ಲಿ ನೆಲೆಸಿದ್ದಾರೆ.

ಈಗ ಅವರಿಗೆ ಸುಮಾರು 80/85 ವರ್ಷಗಳು.  ಈ ಕೃತಿಯ ಶೇ 80ರಷ್ಟು ಕತೆಯನ್ನು ಲೇಖಕರು ವಾಸುದೇವನ್‌ ಮುಖಾಂತರವೇ ತಿಳಿದಿರುವುದು. ಜಯಲಲಿತ ಕುರಿತು ನಮಗೆ ಗೊತ್ತಿಲ್ಲದ ಅನೇಕ ವಿಷಯಗಳು ಇಲ್ಲಿ ಅನಾವರಣಗೊಂಡಿವೆ. ಜಯಲಲಿತಾ ಎಷ್ಟು ಸುಂದರಿಯೋ ಅಷ್ಟೇ ಅಹಂಕಾರಿ, ಸಾಮಾನ್ಯ ತಿಳುವಳಿಕೆ ಇಲ್ಲದವಳು ಸಂಶಯಗ್ರಸ್ಥ ಮನೋಭಾವದ ಹೆಣ್ಣು ,

ಅವಳ ಸುತ್ತ ವಿಷವರ್ತುಲವನ್ನು ಅವಳೇ ನಿರ್ಮಿಸಿಕೊಂಡು ಕಷ್ಟಗಳನ್ನು ಅನುಭಸಿದಳು ಎನ್ನುತ್ತದೆ ಈ ಕೃತಿ. ಆದರೆ ಆಕೆ ಅಸಾಧಾರಣ ವಾಗ್ಮಿ, ಅದ್ಭುತ ಸಂಘಟನಾ ಶಕ್ತಿಯುಳ್ಳವಳು, ಅಪಾರ ಅಭಿಮಾನಿಗಳನ್ನು ಹೊಂದಿದ್ದವಳು.  ಜನ ಆಕೆಯನ್ನು ಪ್ರತ್ಯಕ್ಷ ದೇವತೆ ಎಂಬಂತೆ ಕಾಣುತ್ತಿದ್ದರು ಎಂಬ ವಿವರಣೆ ಕೂಡ  ಈ ಕೃತಿಯಲ್ಲಿದೆ. 

ಲೇ: ಎನ್‌.ಕೆ. ಮೋಹನ್‌ ರಾಂ.
ಪ್ರ: ಐಬಿಎಚ್‌ ಪ್ರಕಾಶನ, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್‌, ಬಿಎಸ್‌.ಕೆ 3ನೇ ಹಂತ, ಬೆಂಗಳೂರು. 

***

ಕಾನೂನು ನಿಘಂಟು
ಕನ್ನಡವು ರಾಜ್ಯ ಭಾಷೆಯಾಗಿ ಆಡಳಿತ ಕ್ಷೇತ್ರದಲ್ಲಿ ಕನ್ನಡದ ಬಳಕೆ ಕಡ್ಡಾಯವಾದ ಮೇಲೆ ಸಾಮಾನ್ಯ ಆಡಳಿತ ಕಾನೂನು ವ್ಯವಹಾರ, ಖಾಸಗಿ ಕ್ಷೇತ್ರ, ತಾಂತ್ರಿಕ ಕ್ಷೇತ್ರ, ಕಾರ್ಪೊರೇಟ್‌ ವಲಯ ಇತ್ಯಾದಿ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಅಧಿಕವಾಗುತ್ತದೆ. ಆಯಾಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪದಕೋಶಗಳ ರಚನೆಯಾದರೆ ಸಾಮಾನ್ಯ ಜನರಿಗೆ ಹೆಚ್ಚಿನ ಉಪಯೋಗವಾಗುತ್ತದೆ ಎಂಬ ದೃಷ್ಟಿಯಿಂದ ಈ ಕಾನೂನು ಪದಕೋಶ ತಯಾರಾಗಿದೆ.

ಇಲ್ಲಿ ಬರೀ ಕಾನೂನಿನ ಪದಗಳಷ್ಟೇ ಅಲ್ಲ, ಆ ಪದಗಳ ವ್ಯಾಪ್ತಿಯಲ್ಲಿ ಬರುವ ಮತ್ತು ಬಳಕೆಯಲ್ಲಿರುವ ಹಲವಾರು ರೂಪಗಳನ್ನು ಆ ಪದದೊಟ್ಟಿಗೆಯೇ ಕೊಟ್ಟು ಪದವ್ಯಾಪ್ತಿಯನ್ನು ಹುಡುಕಲು, ಅರಿಯಲು ಸುಲಭವಾಗುವಂತೆ ರೂಪಿಸಲಾಗಿದೆ. ನ್ಯಾಯವಾದಿಗಳು, ನ್ಯಾಯಾಲಯಗಳ, ನ್ಯಾಯಶಾಸ್ತ್ರ ವಿದ್ಯಾಲಯಗಳು, ನ್ಯಾಯಶಾಸ್ತ್ರ ವಿದ್ಯಾರ್ಥಿಗಳು ಇಷ್ಟೇ ಅಲ್ಲದೆ ಪೊಲೀಸ್‌, ಕಂದಾಯ,

ಪಂಚಾಯತ್‌, ಅಬಕಾರಿ, ಪೌರಾಡಳಿತ ನಿಗಮಗಳು, ಆಡಳಿತ ತರಬೇತಿ ಕೇಂದ್ರಗಳೂ, ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಗ್ರಂಥಾಲಯಗಳು ಹೊಂದಿರಲೇ ಬೇಕಾದ ಪುಸ್ತಕ ಇದಾಗಿದೆ. ಕಗ್ಗಂಟಿನ ಇಂಗ್ಲೀಷ್‌ ಪದಗಳನ್ನು ಲೇಖಕರು ತುಂಬಾ ಸರಳವಾಗಿ ಬಿಡಿಸಿ ಅದಕ್ಕಿರುವ ನಾನಾ ಅರ್ಥಗಳನ್ನು ವಿವರಿಸಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಸರಳವಾಗಿ ಬರೆದಿದ್ದಾರೆ. 

ಲೇ: ರವಿ ತಿರುಮಲೈ.
ಪ್ರ: ಕರ್ನಾಟಕ ಲಾ ಜರ್ನಲ್‌ ಪಬ್ಲಿಕೇಷನ್ಸ್‌, ಪುಲಿಯಾನಿ ಮತ್ತು ಪುಲಿಯಾನಿ, ಸುಜಾತ ಕಾಂಪ್ಲೆಕ್ಸ್‌, 1ನೇ ಕ್ರಾಸ್‌, ಗಾಂಧಿ ನಗರ, ಬೆಂಗಳೂರು. 

ಟಾಪ್ ನ್ಯೂಸ್

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.