ಅಕ್ಷರ ಲೋಕದ ಅಂಗಳದಲ್ಲಿ


Team Udayavani, Jan 6, 2018, 12:57 PM IST

veena-books.jpg

ಚಾಣಕ್ಯ ನೀತಿ ಸೂತ್ರಗಳು
ಲೇ: ಡಾ. ಕೆ.ಎಸ್‌. ನಾರಾಯಣಾಚಾರ್ಯ
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪಿಕರ್‌ ಬೀದಿ, ಹುಬ್ಬಳ್ಳಿ
ಚಾಣಕ್ಯ ಒಬ್ಬ ಮಹಾಪುರುಷ. ನಮ್ಮ ದೇಶ ಕಂಡ ಅಪ್ರತಿಮ ರಾಜಶಾಸ್ತ್ರಜ್ಞ, ದಾರ್ಶನಿಕ. ತಕ್ಷಶಿಲೆಯಲ್ಲಿ ಬೋಧಿಸಿ, ದುರುಳ ಸಾಮ್ರಾಜ್ಯವನ್ನು ಅಳಿಸಿ ಶಿಷ್ಯನಾದ ಚಂದ್ರಗುಪ್ತ ಮೌರ್ಯನಿಗೆ ಪಟ್ಟ ಕಟ್ಟಿ ಮಂತ್ರಿ ಪದವಿ ಬೇಡವೆಂದು ಅಧ್ಯಾಪಕ ವೃತ್ತಿಯಲ್ಲೇ ಮುಂದುವರೆದ ತ್ಯಾಗಿ, ತಪಸ್ವಿ, ಚುರುಕು ರಾಜಕಾರಣಿ.

ಶ್ರೇಷ್ಟ ಚಿಂತನೆಯಲ್ಲಿ ಆಳದ ಪರಿಶ್ರಮ, ಆತ್ಮವಿಶ್ವಾಸ ಇಂಥ ಗುಣಗಳಿಂದ ಇಂದಿಗೂ ಆದರ್ಶಪ್ರಾಯನಾದ ಮಹಾನುಭಾವ. ರಾಜಕೀಯ ಸಲಹೆಗಳನ್ನು ಕೊಡುವುದರಲ್ಲಿ ನಿಷ್ಣಾತ. ಅವನ ಸಲಹೆ ಸೂಚನೆಗಳು “ಚಾಣಕ್ಯನೀತಿ’ ಎಂದೇ ಪ್ರಸಿದ್ಧ. ಪ್ರಸ್ತುತ ಈ ಕೃತಿಯಲ್ಲಿ ಒಟ್ಟು 8 ಅಧ್ಯಾಯಗಳಿವೆ. ಈ ಸೂತ್ರಗಳು ಅರ್ಥಶಾಸ್ತ್ರದ ತಿರುಳುಗಳು. ಇದನ್ನು ಎಲ್ಲರೂ ಅರಿಯಬೇಕು ಎಂಬುದು ಲೇಖಕರ ಉದ್ದೇಶ.

ಇದರಲ್ಲಿ ರಾಷ್ಟ್ರದ ಹಿತಕ್ಕೆ ಸರಿಯಾದ ಮಂತ್ರಾಲೋಚನೆ ಹೇಗಿರಬೇಕು, ನೀತಿಶಾಸ್ತ್ರದ ಸ್ಥಾನಮಾನವೇನು? ಮಿತ್ರಸಂಗ್ರಹದ ಅವಶ್ಯಕತೆ  ಎಷ್ಟಿರುತ್ತದೆ? ಶತ್ರು- ಮಿತ್ರರ ಚಹರೆಗಳನ್ನು ಗುರುತಿಸುವುದು ಹೇಗೆ? ರಾಜನ ಗ್ರಹ ಸಂದರ್ಭಗಳು ಹೇಗಿರಬೇಕು? ರಾಜರಿಗೆ ದುವ್ಯìಸನಗಳು ಅಂಟಿದರೆ ಅದರಿಂದಾಗುವ ಕೆಟ್ಟ ಪರಿಣಾಮವೇನು? ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಚಾಣಕ್ಯ ಹೇಳಿರುವುದನ್ನು ಯಥಾವತ್ತಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕರು.

***
ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು
ಲೇ:
ಗುಡಿಹಳ್ಳಿ ನಾಗರಾಜ
ಪ್ರ: ಅಕ್ಷರ ತೋರಣ, 25, ಚೊಕ್ಕಲಿಂಗಂ ಮೊದಲಿಯಾರ್‌ ಬೀದಿ, ಬ್ರೂಸ್‌ ಪೇಟೆ, ಬಳ್ಳಾರಿ
ಇತಿಹಾಸದಲ್ಲಿ ಹೆಣ್ಣಿನ ಶಕ್ತಿ, ಧೈರ್ಯಗಳನ್ನು ಸ್ತುತಿಸುವ ಅಧ್ಯಾಯಗಳು ಬಹಳ ಕಡಿಮೆ. ಚರಿತ್ರೆ ಅಂಥವರನ್ನು ಅಂತಃಪುರದ ಅಡುಗೆ ಮನೆಯೊಳಗೆ ಇರಿಸಿದೆ. ಸಂಸ್ಕೃತಿ ಮತ್ತು ನಾಗರೀಕತೆಯ ಬೆಳವಣಿಗೆಯಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯ ನಿರ್ಮಾಣದಲ್ಲಿ ಹೆಣ್ಣಿನ ಬೆವರೂ ಸೇರಿರುತ್ತದೆ. ಸಾಂಸ್ಕೃತಿಕ ಚರಿತ್ರೆಯಲ್ಲಂತೂ ಅವಳು ಅತಿರಥಮಹಾರಥರ ವೇಗದ ಜೊತೆಗೆ ಬರಿಗಾಲಲ್ಲೇ ಸ್ಪರ್ಶಿಸಿರಬೇಕು.

ಹಾಗಾಗಿಯೇ ಅವಳ ಹೆಜ್ಜೆ ಗುರುತುಗಳು ಆಳವಾಗಿ ಮೂಡಿವೆ ಎಂದರೂ ತಪ್ಪಾಗಲಾರದು. ಪ್ರಸಿದ್ಧ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರು ಅವರ ಯಶೋಗಾಥೆ ಈ ಪುಸ್ತಕದಲ್ಲಿ ಇಡಿಯಾಗಿ ದಾಖಲಾಗಿದೆ. ಅವರ ಹೋರಾಟದ ಬದುಕು, ಬಾಲನಟಿಯಾಗಿ ರಂಗಭೂಮಿ ಸೇರಿ ಸುಮಾರು ಅರು ದಶಕಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಸುಭದ್ರಮ್ಮ ಅವರಿಗೆ ಆರಂಭದಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಅವಕಾಶ ಸಿಗಲಿಲ್ಲ.

ಆನಂತರದಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲೇರಿದ ಸುಭದ್ರಮ್ಮ ರಂಗಭೂಮಿಯನ್ನೇ ತಮ್ಮ ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡರು. ಹಲವಾರು ರಾಗಗಳನ್ನು ಕಲಿತರು. ರಂಗಗೀತೆಗಳನ್ನು ಅವರ ಕಂಠದಲ್ಲಿ ಕೇಳುವುದೇ ಸೊಗಸಾಗಿದ್ದಿತು. ಅವರ ಶುದ್ಧ ಭಾಷೆ, ಧ್ವನಿಯ ಏರಿಳಿತ, ಸಂಭಾಷಣೆ ಒಪ್ಪಿಸುವ ಶೈಲಿ, ಪದಪ್ರಯೋಗ ಇವುಗಳು ಕಿರಿಯ ಕಲಾವಿದರಿಗೆ ಆದರ್ಶಪ್ರಾಯವಾದದ್ದು. ಇಂಥವೇ ಹಲವು ವಿವರಗಳನ್ನು ಈ ಪುಸ್ತಕ ತೆರೆದಿಡುತ್ತದೆ.

***
ಅಪೂರ್ವ ಪಶ್ಚಿಮ ಘಟ್ಟ
ಲೇ:
ನಾಗೇಶ್‌ ಹೆಗಡೆ
ಪ್ರ: ಭೂಮಿ ಬುಕ್ಸ್‌, ಮೊದಲ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು
ಭೂಮಿಯ ಎಂಟು ಮಹಾನ್‌ ಜೀವ ಚೈತನ್ಯ ಭಂಡಾರಗಳಲ್ಲೊಂದೆನಿಸಿದ ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯ ನೆನ್ನೆ ನಾಳೆಗಳ ಚಿತ್ರಣ ಈ ಪುಸ್ತಕದಲ್ಲಿದೆ. ಇಡೀ ನಾಳಿನ ನಾಡಿನ ಬದುಕಿಗೆ ಆಧಾರವೆಂಬಂತೆ ರಕ್ಷಿಸಲೇಬೇಕಾದ ನಿಸರ್ಗ ನಿಧಿಯ ಕುರಿತ ವಿವರ, ಮಾಹಿತಿ ಹಾಗೂ ಅಪರೂಪದ, ಆಕರ್ಷಕ ಚಿತ್ರಗಳನ್ನು ಒಳಗೊಂಡ ಪುಟ್ಟ ಸಂಕಲನವಿದು.

ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಪಶ್ಚಿಮಘಟ್ಟಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ನಾವು ಉಪಯೋಗಿಸುವ ವಿದ್ಯುತ್‌ ದೀಪ, ಕುಡಿಯುವ ಕಾಫಿ, ಬಳಸುವ ಪಾತ್ರೆ ತಯಾರಿಯಲ್ಲಿ ಬಳಸುವ ಕಬ್ಬಿಣ ಮ್ಯಾಂಗನೀಸ್‌ ಕೂಡಾ ಪಶ್ಚಿಮ ಘಟ್ಟಗಳದ್ದೇ.

ದಿನನಿತ್ಯದ ಆಹಾರದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ನಾವು ಸೇವಿಸುವ ಲವಂಗ, ಏಲಕ್ಕಿ, ಕೂರುವ ಕುರ್ಚಿಗೆ ಉಪಯೋಗಿಸುವ ಬಿದಿರು, ಎಲ್ಲವೂ ಪಶ್ಚಿಮಘಟ್ಟಗಳಿಂದಲೇ ದೊರೆಯುತ್ತದೆ. ಹೀಗಾಗಿ ನಮ್ಮ ನಾಡಿನ ಜನಜೀವನದಲ್ಲಿ ಪಶ್ಚಿಮಘಟ್ಟಗಳು ಎಷ್ಟು ಪ್ರಮುಖ ಪಾತ್ರ ವಹಿಸಿವೆ ಹಾಗೂ ಈ ಪ್ರಕೃತಿ ಸಂಪತ್ತನ್ನು ನಾವು ಹೇಗೆ ಉಳಿಸಿಕೊಳ್ಳಬೇಕು ಎಂದು ಈ ಕೃತಿಯಲ್ಲಿ ಲೇಖಕರು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. 

* ವೀಣಾ ಚಿಂತಾಮಣಿ

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.