“ಪೀಲೆ’ ಹುಡುಗರ ಜಾತಿ ಕಾಣಮ್ಮೋ…


Team Udayavani, Jun 16, 2018, 4:59 PM IST

2566dtds.jpg

ಟಿವಿ ನೋಡುತ್ತಿರುವವರ ಕಾಲ್ಗಳು ಅತ್ತಿತ್ತ ಅಲುಗಾಡುತ್ತಿವೆ; ಆದರೆ, ಪಾರ್ಕಿನ್ಸನ್‌ ಅಲ್ಲ. ಎದೆಬಡಿತ ಎಂದಿಗಿಂತ ವೇಗವಾಗಿ ಬಡಿದುಕೊಳ್ಳುತ್ತಿದೆ; ಇದು ಹೃದಯಾಘಾತದ ಮುನ್ಸೂಚನೆಯಲ್ಲ. ಕಣ್ಣಿನ ರೆಪ್ಪೆ ಮುಚ್ಚಲು ಮನಸ್ಸಾಗುತ್ತಿಲ್ಲ; ನರದೋಷದ ಪ್ರಾಬ್ಲಿಮ್ಮಂತೂ ಅಲ್ಲವೇ ಅಲ್ಲ. ರೆಪ್ಪೆ ಮುಚ್ಚಿದರೆ ಎಲ್ಲಿ ರೋಚಕ ಕ್ಷಣವೇ ಮಿಸ್ಸಾಗುವ ದಿಗಿಲಷ್ಟೇ. ಕಾಲ್ಚೆಂಡಿನ ಹಿಂದೆ ಆಟಗಾರರು ಓಡುತ್ತಿದ್ದಾರೋ, ಅದನ್ನು ನೋಡುತ್ತಾ ನಮ್ಮ ಕಂಗಳೇ ಆ ಚೆಂಡಿನ ಹಿಂದೆ ಓಡೋಡುತ್ತಿವೆಯೋ, ಗೋಡೆಯ ಮೇಲೆ ನೇತುಬಿದ್ದ ಟಿವಿಯೇ ಆ ಚೆಂಡನ್ನು ಹಿಂಬಾಲಿಸುತ್ತಿದೆಯೋ ಎಂಬ ಅನುಮಾನಗಳು ಒಟ್ಟೊಟ್ಟಿಗೆ ಆವರಿಸುತ್ತಿದ್ದರೆ, ನಿಮಗೆ “ಫ‌ುಟ್ಬಾಲ್‌ ಜ್ವರ’ ಬಂದಿರುವುದು ಪಕ್ಕಾ ಎನ್ನಲು ವೈದ್ಯರೇ ಸ್ಟೆತೋಸ್ಕೋಪ್‌ ಇಟ್ಟು ಹೇಳಬೇಕಂತೇನೂ ಇಲ್ಲ. 

  ಪ್ರತಿ ನಾಲಕ್ಕು ವರ್ಷಕ್ಕೊಮ್ಮೆ ಫ‌ುಟ್ಬಾಲ್‌ ಅಭಿಮಾನಿಗಳಿಗೆ ಹಿಂಗೆಲ್ಲ ಆಗುತ್ತೆ. ಈಗ ಕಾಲ್ಚೆಂಡಾಟದ ರಸಿಕರ ಚಿತ್ತ ರಷ್ಯಾದತ್ತ ನೆಟ್ಟಿದೆ. ಅಲ್ಲಿ ನಿತ್ಯದ ಪಂದ್ಯ ಮುಗಿದ ತಕ್ಷಣ ಇಲ್ಲಿನ ಗಲ್ಲಿಗಳಲ್ಲಿ ಮಕ್ಕಳ ಆಟ ಶುರುವಾಗಿರುತ್ತೆ. ಎಲ್ಲೋ ಕೋಲ್ಕತ್ತಾ, ಗೋವಾದಂಥ ನಗರಗಳನ್ನು ಹೊರತುಪಡಿಸಿ ಭಾರತದಲ್ಲಿ ಇವೆಲ್ಲ ಪುಳಕ, ಗುಂಗು, ಸಂಭ್ರಮಗಳು ವಿಶ್ವಕಪ್‌ ವೇಳೆಗಷ್ಟೇ ಹುಚ್ಚಾಗಿ ಕುಣಿಯುತ್ತದೆ. ಆದರೆ, ಬೆಂಗಳೂರಿನಲ್ಲೊಂದು “ಮಿನಿ ಬ್ರೆಜಿಲ್‌’ ಇದೆ. ಇಲ್ಲಿ ನಿತ್ಯವೂ ಕಾಲ್ಚೆಂಡಿನದ್ದೇ ಧ್ಯಾನ. ಪೀಲೆಯ ಪ್ರತಿಮೆಯ ಕೆಳಗೆ ಫ‌ುಟ್ಬಾಲೇ ಇವರ ಜೀವನ!
   ಅದು ಗೌತಮಪುರ. ಇಲ್ಲಿ ಯಾವ ಮನೆಗೆ ಹೋದರೂ ಕನಿಷ್ಠ ಒಬ್ಬರಾದರೂ ಫ‌ುಟ್ಬಾಲ… ಪ್ರತಿಭೆ ಸಿಗುತ್ತಾರೆ. ಅವರೆಲ್ಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಲು ಬಾರಿಸಿದ ಅನುಭವದ ಕತೆ ಹೇಳುತ್ತಾರೆ. ಕರ್ನಾಟಕ ಫ‌ುಟ್ಬಾಲ್‌ ತಂಡದ ಇತಿಹಾಸವನ್ನು ಒಮ್ಮೆ ಸೋಸಿಬಿಟ್ಟರೆ, ಶೇ.70ಕ್ಕೂ ಹೆಚ್ಚು ಆಟಗಾರರು ಇದೇ ಗಲ್ಲಿಯಿಂದ ಬಂದವರೇ ಸಿಗುತ್ತಾರೆ. 6 ವರ್ಷದ ಹುಡುಗನಿಂದ 60 ವರ್ಷದ ಮುದುಕರ ವರೆಗೂ ಇಲ್ಲಿ ಫ‌ುಟ್ಬಾಲ್‌ ಆಡುತ್ತಲೇ ಇದ್ದಾರೆ.

ಬರಿಗಾಲಲ್ಲಿ ಒಲಿಂಪಿಕ್ಸ್‌
1948ರಲ್ಲಿ ಗೌತಮಪುರದವರೇ ಆದ ಬಶೀರ್‌ ಅವರು ಬರಿಗಾಲಿನಲ್ಲಿ ಒಲಿಂಪಿಕ್ಸ್‌ ಆಡಿದ್ದರಂತೆ. ಅವರಿಗೆ ಸಿಕ್ಕ ಗೌರವ, ಪ್ರಶಸ್ತಿಗಳನ್ನು ಕಂಡ ಇಲ್ಲಿನ ಜನ ಸ್ಫೂರ್ತಿ ಪಡೆದು ಫ‌ುಟ್ಬಾಲ… ಮೂಲಕವೇ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಮುಂದಾದರು. ಬಶೀರ್‌ ಅವರಿಗೆ ಪಕ್ಕದÇÉೇ ಇದ್ದ ಆರ್ಮಿ ಗ್ರೌಂಡ್‌ ಅಭ್ಯಾಸದ ಮೈದಾನವಾಯಿತು. ತಮ್ಮ ಏರಿಯಾದ ಜನರೇ ಸೇರಿ “ಮಾರ್ಸ್‌’ ಎಂಬ ಫ‌ುಟ್ಬಾಲ… ತಂಡ ಕಟ್ಟಿಕೊಂಡು, ಆರಂಭದಲ್ಲಿ ಚಿಕ್ಕಪುಟ್ಟ ಕ್ಲಬ್‌ಗಳ ಪರ ಆಡಿ ನಂತರ ರಾಜ್ಯ ಸೇರಿದಂತೆ ಇತರ ಲೀಗ್‌ ಪಂದ್ಯಗಳನ್ನು ಗೆದ್ದುಬಿಟ್ಟರು. “ಈಗ ಗೌತಮಪುರದಲ್ಲಿ 20 ಮಂದಿ ಫೀಫಾ ಮಾನ್ಯತೆ ಪಡೆದ ರೆಫ‌ರಿಗಳು ಇದ್ದಾರೆ’ ಎನ್ನುತ್ತಾರೆ ಮಾರ್ಸ್‌ ತಂಡದ ಕಾರ್ಯದರ್ಶಿ ವಿಮಲ್‌.

ಇದೊಂದು ಮಿನಿ ಬ್ರೆಜಿಲ…!
ಬೆಂಗಳೂರಿನ ಜನ ಗೌತಮ್‌ಪುರವನ್ನು “ಮಿನಿ ಬ್ರೆಜಿಲ…’ ಎಂದು ಕರೆಯುತ್ತಾರೆ. ಅದಕ್ಕೆ ಕಾರಣವಿದೆ. ಇಲ್ಲಿನ ಪ್ರತಿಯೊಬ್ಬರ ಮೆಚ್ಚಿನ ತಂಡ ಬ್ರೆಜಿಲ್‌. ಇಲ್ಲಿನ ಫ‌ುಟ್ಬಾಲ್‌ ಆಟಗಾರರ ಅಭಿಮಾನ ಎಷ್ಟಿದೆಯೆಂದರೆ ತಾವು ಆಡುವಾಗ ಧರಿಸುವುದು ಹಳದಿ ಬಣ್ಣದ ಜೆರ್ಸಿ. ಬ್ರೆಜಿಲ್‌ ಆಟಗಾರರ ಹೇರ್‌ಕಟ್‌ ಅನ್ನು ಅನುಕರಿಸಿದವರೂ ಇಲ್ಲಿ ಸಿಗುತ್ತಾರೆ. ಮತ್ತೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹೆಸರಿನ ಜೊತೆಗೆ ಬ್ರೆಜಿಲ್‌ ಆಟಗಾರರ ಹೆಸರನ್ನು ಅಡ್ಡಹೆಸರಾಗಿ ಇಟ್ಟುಕೊಂಡಿದ್ದಾರೆ. ಇನ್ನು ಬ್ರೆಜಿಲ… ತಂಡದ ಪಂದ್ಯವೇನಾದರೂ ಇದ್ದರೇ ಇಲ್ಲಿನ ಬಹುತೇಕರು ಕೆಲಸಕ್ಕೆ ರಜೆ ಹಾಕಿ ಏರಿಯಾದ ಪ್ರಮುಖ ವೃತ್ತವೊಂದರಲ್ಲಿ ಕುಳಿತು ದೊಡ್ಡ ಪರದೆ ಹಾಕಿಕೊಂಡು, ಆಟ ವೀಕ್ಷಿಸುತ್ತಾರೆ!

ಫೀಪಾ ಅಂದ್ರೆ ದೀಪಾವಳಿ!
ಇಲ್ಲಿನ ಜನರಿಗೆ ಫೀಫಾ ವಿಶ್ವಕಪ್‌ ಎಂದರೆ ದೊಡ್ಡ ಹಬ್ಬ. ದೀಪಾವಳಿ ಇದ್ದಂತೆ. ಕಾಲೋನಿ ಪೂರ್ತಿ ಫ‌ುಟ್ಬಾಲ್‌ ಆಟಗಾರರ ಪೋಸ್ಟರ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತವೆ. ಏರಿಯಾದ ಜನರು ಒಂದೆಡೆ ಸೇರಿ ದೊಡ್ಡ ಪರದೆ ಹಾಕಿ ಆಟವನ್ನು ಸಂಭ್ರಮಿಸುತ್ತಾರೆ. ಹಿರಿಯರಿಂದ ಕಿರಿಯರವರೆಗೂ ತಮ್ಮದೇ ರೀತಿಯಲ್ಲಿ ಆಟದ ವಿಶ್ಲೇಷಣೆ ಮಾಡುತ್ತಾರೆ. ಆಗ ಫ‌ುಟ್ಬಾಲ್‌ ಹಬ್ಬ ಕಳೆಗಟ್ಟುತ್ತದೆ.

ಕೆಲಸದ ಮಧ್ಯೆ ಫ‌ುಟ್ಬಾಲ್‌
ಇಲ್ಲಿನ ಆಟಗಾರರಲ್ಲಿ ಬಹುತೇಕರು ವೃತ್ತಿಪರರಲ್ಲ. ಜೀವನೋಪಾಯಕ್ಕಾಗಿ ಗ್ಯಾರೇಜ…, ಪೇಂಟಿಂಗ್‌, ಕಟ್ಟಡ ಕೆಲಸ, ಗೂಡಂಗಡಿ ವ್ಯಾಪಾರ, ಬಾಡಿಗೆ ಆಟೋದಂಥ ಅತಿ ಸಾಮಾನ್ಯ ಕೆಲಸಗಳಲ್ಲಿ ಇರುವಂಥವರು. ಸಂಜೆ ಅಥವಾ ಇನ್ನಾವಾಗಲೋ ಬಿಡುವು ಮಾಡಿಕೊಂಡು ಕೆಲಸದ ಮಧ್ಯೆ ಫ‌ುಟ್ಬಾಲ್‌ ಆಡುತ್ತಾರೆ. ಆ ಮೂಲಕ ತಮ್ಮ ಎಲ್ಲಾ ನೋವು, ಜಂಜಾಟಗಳನ್ನು ಮರೆಯುತ್ತಾರೆ. ಇಲ್ಲಿನವರ ಫ‌ುಟ್ಬಾಲ್‌ ಪ್ರೇಮ ಎಷ್ಟಿದೆಯೆಂದರೆ ಮಕ್ಕಳು ಟಿ.ವಿ.ಯಲ್ಲಿ ಮನರಂಜನಾ ಕಾರ್ಯಕ್ರಮವನ್ನು ನೋಡುತ್ತಿದ್ದರೆ ಪೋಷಕರೇ ಬಯ್ದು, ಫ‌ುಟ್ಬಾಲ್‌ ಆಡಲು ಕಳಿಸುತ್ತಾರೆ. 

ಭಾರತ ತಂಡವನ್ನೇ ಸೋಲಿಸಿದ್ದರು! 
ಇಲ್ಲಿನ ಮಾರ್ಸ್‌ ತಂಡ ಬಲಿಷ್ಠವಾಗಿದ್ದು, ನಗರದ ಅನೇಕ ಪ್ರತಿಷ್ಠಿತ ಕ್ಲಬ್‌ಗಳ ವಿರುದ್ಧ ಜಯ ಗಳಿಸಿದೆ. ಹಿಂದೊಮ್ಮೆ ಮಾರ್ಸ್‌ ತಂಡ ಭಾರತದ ರಾಷ್ಟ್ರೀಯ ತಂಡದ ಜೊತೆ ಸೌಹಾರ್ದ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಮಾರ್ಸ್‌ ತಂಡ 2- 1 ಗೋಲಿನಿಂದ ಭಾರತ ತಂಡವನ್ನು ಸೋಲಿಸಿದ್ದನ್ನು ಇಲ್ಲಿನವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

ಇಲ್ಲಿ ಪೀಲೆ ಇದ್ದಾರೆ…
ಗೌತಮಪುರ ಮುಖ್ಯ ವೃತ್ತದಲ್ಲಿ ಫ‌ುಟ್‌ಬಾಲ… ದಂತಕತೆ ಪೀಲೆಯ ಪ್ರತಿಮೆಯನ್ನು ನಿರ್ಮಿಸಿಲಾಗಿದ್ದು, 6 ಅಡಿಯ ಫ‌ುಟ್ಬಾಲ್‌ ಮೇಲೆ ಕಾಲಿಟ್ಟು ಆಟದಲ್ಲಿ ತೊಡಗಿರುವಂತೆ ನಿಂತಿರುವ ಅವರ ಸ್ಮಾರಕವನ್ನು ನೊಡುವುದೇ ಚೆಂದ. ಹೊರಗಿನಿಂದ ಬಂದವರು ಈ ಪೀಲೆಯ ಪ್ರತಿಮೆ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವುದೂ ಇಲ್ಲಿ ಸಾಮಾನ್ಯ.

ಗೌತಮಪುರದ ಫ‌ುಟ್ಬಾಲ್‌ ಕಲಿಗಳು
ಎಸ್‌.ಎ. ಬಶೀರ್‌, ರವಿಕುಮಾರ್‌, ಪಿ. ಕಣ್ಣನ್‌ (ಏಷ್ಯನ್‌ ಪೀಲೆ), ಯತಿರಾಜ…, ಉಳಗನಾದನ್‌, ಮ್ಯಾಥ್ಯೂ, ಮೋಹನ್‌ ವೇಲು, ಯು. ಬಾಬು, ಸತೀಶ್‌, ಕಾರ್ತಿಕ್‌, ರವಿಚಂದ್ರ, ಶ್ರೀಧರನ್‌, ಅರುಮೈ ನಾಯಗಂ ಜಗನ್ನಾಥ್‌ ಸೇರಿದಂತೆ ಹಲವು ಮಂದಿ ಭಾರತ ಜೂನಿಯರ್‌ ಹಾಗೂ ಸೀನಿಯರ್‌ ತಂಡದಲ್ಲಿ ಆಡಿದ್ದಾರೆ.

– ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.