ಘಮಘಮಿಸುವ “ಮಲ್ಲಿಗೆ’ ಊಟ


Team Udayavani, Mar 3, 2018, 2:17 PM IST

5.jpg

ಬೆಂಗಳೂರು ಸೀಮೆಯವರಿಗೆ ಬಾಳೆಲೆಯ ಅನ್ನ-ಸಾರು, ಮಂಡ್ಯ-ಮೈಸೂರು-ಹಾಸನದವರಿಗೆ ಮುದ್ದೆ-ಉಪ್ಸಾರು, ಮಂಗಳೂರಿನವರಿಗೆ ಕುಸಲಕ್ಕಿ ಗಂಜಿ, ಮಲೆನಾಡಿನವರಿಗೆ ಅಕ್ಕಿ ರೊಟ್ಟಿ ಊಟ ಹೇಗೆ ಇಷ್ಟವೋ ಅದೇ ರೀತಿ ಉತ್ತರಕರ್ನಾಟಕದವರಿಗೆ ಜೋಳದ ರೊಟ್ಟಿ ಊಟವೇ ಇಷ್ಟ. ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಇರುವಂತೆ, ವಿಜಯನಗರದಲ್ಲೂ ಸ್ವಲ್ಪ ಜಾಸ್ತಿ ಅನ್ನುವಷ್ಟೇ ಉತ್ತರ ಕರ್ನಾಟಕದ ಜನ ಇದ್ದಾರೆ.

ವಿಜಯನಗರದ ತುಂಬಾ ಉತ್ತರ ಕರ್ನಾಟಕ ಭಾಗದ ರುಚಿಯನ್ನು ಹರಡುತ್ತಿರುವುದು “ಮಲ್ಲಿಗೆ ಊಟದ ಮನೆ’. ವಿಜಯನಗರದ ಮಾರುತಿ ಮಂದಿರದ ಪಕ್ಕದ ರಸ್ತೆಯಲ್ಲಿರುವ ಈ ಖಾನಾವಳಿಗೆ ಹೋದವರಿಗೆ ಮಿನಿ ಉತ್ತರ ಕರ್ನಾಟಕದ ದರ್ಶನವಾಗುತ್ತದೆ. 

ಶ್ರೀಶೈಲ ಜಿಗಜಿನ್ನಿಯವರು ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಮಲ್ಲಿಗೆ ಊಟದ ಮನೆಯಲ್ಲಿ ಸಿಗುವ ಜೋಳದ ರೊಟ್ಟಿ ಗ್ರಾಹಕರ ಪಾಲಿಗೆ ಅಚ್ಚುಮೆಚ್ಚು. 

ಕಡಿಮೆ ಬೆಲೆಗೆ ಗಡದ್‌ ಊಟ
ಕೇವಲ 65 ರೂಪಾಯಿಗೆ ಎರಡು ಜೋಳದ ರೊಟ್ಟಿ, ಮೂರು ಥರದ ಪಲ್ಯಗಳು ಹಾಗೂ ಅನ್ನ-ಸಾರು ಅಥವಾ ಕಲರ್ಡ್‌ ರೈಸ್‌ ಅನ್ನು ಇಲ್ಲಿ ಉಣಬಡಿಸುತ್ತಾರೆ. ಅÇÉೇ ತಯಾರಿಸಿ ಬಡಿಸುವ ಬಿಸಿಬಿಸಿ ರೊಟ್ಟಿ ಊಟದ ಜೊತೆಗೆ ಸೌತೆಕಾಯಿ, ಮೆಂತೆ ಸೊಪ್ಪು  ಹಾಗೂ ಮೂಲಂಗಿಯ ಸಲಾಡ್‌ ಊಟದ ಗಮ್ಮತ್ತನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಮಿರ್ಚಿ ಬಜ್ಜಿ, ಮಸಾಲ ಮಜ್ಜಿಗೆ
ಉತ್ತರ ಕರ್ನಾಟಕದ ಸಿಗ್ನೇಚರ್‌ ತಿನಿಸು ಎನ್ನಬಹುದಾದ ಮಿರ್ಚಿ ಬಜ್ಜಿ ಇಲ್ಲಿನ ವಿಶೇಷ ಆಕರ್ಷಣೆ. ದೇಹಕ್ಕೆ ತಂಪು ಹಾಗೂ ರುಚಿರುಚಿ ಪಾನೀಯ ಅನ್ನಿಸುವ ಮಸಾಲ ಮಜ್ಜಿಗೆ ಕೂಡಾ ದೊರೆಯುತ್ತದೆ. ಜೋಳದ ರೊಟ್ಟಿ ಬೇಡ ಅನ್ನುವವರಿಗಾಗಿ ಮೇಥಿ ರೋಟಿ ಹಾಗೂ ಚಪಾತಿ ಸಹ ಲಭ್ಯ. 

ಸಿಹಿಪ್ರಿಯರಿಗೆ ಸಿಹಿಸುದ್ದಿ
ಸಿಹಿ ಪ್ರಿಯರಿಗಾಗಿ ಪ್ರತಿದಿನವೂ ಶೇಂಗಾ ಹೋಳಿಗೆ ಇದೆ. ಪ್ರತಿ ಶನಿವಾರ ಬೇಳೆ ಹೋಳಿಗೆಯೂ ದೊರೆಯುತ್ತದೆ. ತುಪ್ಪದ ಘಮವಿರುವ ಬೇಸನ್‌ ಲಾಡೂ ಕೂಡಾ ಲಭ್ಯ. ಸಿಹಿಯ ಹೊರತಾಗಿ ಶೇಂಗಾ ಚಟ್ನಿಪುಡಿ, ಗುರೆಳ್ಳು ಚಟ್ನಿಪುಡಿ ಸೇರಿದಂತೆ  ಇನ್ನೂ ವಿವಿಧ ಬಗೆಯ ಚಟ್ನಿಪುಡಿಗಳು ಲಭ್ಯ. ಇಲ್ಲಿ ಸಿಗುವ ಎಲ್ಲ ಪದಾರ್ಥವೂ ಫ್ರೆಶ್‌ ಆಗಿರುತ್ತವೆ.

ಮಲ್ಲಿಗೆ ಊಟದ ಮನೆ ಮಾಲೀಕ ಶ್ರೀಶೈಲ, ಬಾಗಲಕೋಟೆಯವರು. “ಈ ಮೊದಲು ಸಂಬಂಧಿಕರ ಹೋಟೆಲಿನಾಗ ಕೆಲ್ಸ ಮಾಡಿದ್ದನ್ರೀ. ಆರ್‌ ವರ್ಷದ ಹಿಂದ ಈ ಹೋಟ್ಲು ಶುರು ಹಚRಂಡನ್ರಿ. ನನ್‌ ಜತೀಗ ಅವ್ವ ಇದಾರ್ರೀ. ರೊಟ್ಟಿ ಬಡಿಯಾಕ ನಮ್‌ ಕಡೀ ಜನಾನೇ ಇದಾರ್ರೀ…’ ಅನ್ನುತ್ತಾರೆ. ಹಸಿದು ಬಂದವರಿಗೆ ರುಚಿರುಚಿಯಾದ ಊಟ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ಅಡುಗೆ ಆಗುವವರೆಗೂ ಅಮ್ಮನೂ, ನಾನೂ ಅಡುಗೆ ಮನೆಯಲ್ಲೇ ಇದ್ದು ಶುಚಿ-ರುಚಿಯ ಬಗ್ಗೆ ಕಾಳಜಿ ವಹಿಸುತ್ತೇವೆ ಅನ್ನುತ್ತಾರೆ ಶ್ರೀಶೈಲ.

ಮನೆಗೂ ಒಯ್ಯಿರಿ
ಇಲ್ಲಿ ಕ್ಯಾಟರಿಂಗ್‌ ಸೌಲಭ್ಯ ಕೂಡಾ ಲಭ್ಯವಿದೆ. ಆರ್ಡರ್‌ ಕೊಟ್ಟರೆ ಹೋಳಿಗೆ, ಚಟ್ನಿಪುಡಿಗಳನ್ನು ತಯಾರಿಸಿಯೂ ಕೊಡುತ್ತಾರೆ. ಇಲ್ಲಿನ ಮತ್ತೂಂದು ವಿಶೇಷತೆ ಎಂದರೆ ಇಲ್ಲಿನ ಸಿಬ್ಬಂದಿ ವರ್ಗ. “ಏನ್‌ ಬಡಿಸಲಿ ಅಕ್ಕೋರೇ, ಅಣ್ಣೋರೆ’ ಅಂತ ನಗು ಮೊಗದಿಂದ ಉಪಚರಿಸುತ್ತಾ ಉದರದ ಜೊತೆಗೆ, ಮನಸ್ಸನ್ನೂ ತಂಪಾಗಿಸುತ್ತಾರೆ. ಗ್ರಾಹಕರನ್ನು ಅತಿಥಿಗಳಂತೆ ಸತ್ಕರಿಸುವ ಮಾಲೀಕ ಶ್ರೀಶೈಲರವರು, ಊಟ ಬಡಿಸುವುದು ಪುಣ್ಯದ ಕೆಲಸ ಅಂತಲೇ ನಂಬಿ ಹೋಟೆಲ್‌ ಉದ್ಯಮಕ್ಕೆ ಕಾಲಿಟ್ಟವರು. ಶುಚಿ ರುಚಿಯ ಜೊತೆಗೆ ಗುಣಮಟ್ಟದಲ್ಲಿ ರಾಜಿ ಮಾಡಕೊಳ್ಳದಿರುವುದೇ ಅವರ ಯಶಸ್ಸಿನ ಗುಟ್ಟು.

ಹೋಟೆಲ್‌ನ ಸಮಯ 
ಮ. 12-3.30 
ಸಂ.  7- 10 
ಮಂಗಳವಾರ ರಜೆ

ಎಲ್ಲಿದೆ?
ಮಲ್ಲಿಗೆ ಊಟದ ಮನೆ, ಮಾರುತಿ ಮಂದಿರ  ರಸ್ತೆ, ವಿಜಯನಗರ
 9741460777
7406460777

ಟಾಪ್ ನ್ಯೂಸ್

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.