ಸುನೀಲ್‌ ಫಿಟ್ನೆಸ್‌ ಚಾಲೆಂಜ್‌


Team Udayavani, Jun 16, 2018, 4:38 PM IST

256.jpg

ಈಗ ಎಲ್ಲೆಡೆ ಫಿಟ್ನೆಸ್‌ ಚಾಲೆಂಜಿನದ್ದೇ ಮಾತು. ಕೊಹ್ಲಿ ಆಯ್ತು, ಪ್ರಧಾನಿಯವರೂ ಮೈ ಬಗ್ಗಿಸಿದಾಯ್ತು, ಮುಖ್ಯಮಂತ್ರಿಗಳೂ ಅದಕ್ಕೆ ಉತ್ತರಿಸಿದ್ದಾಯ್ತು. ಫಿಟ್ನೆಸ್‌ ಎನ್ನುವುದು ತಾರೆಗಳಿಗೆ ಸೆಲೆಬ್ರೇಟ್‌ ಮಾಡುವ ಅಥವಾ ಪ್ರಚಾರಕ್ಕೆ ಮತ್ತೂಂದು ಸರಕೇ ಇದ್ದಿರಬಹುದು. ಆದರೆ, ಇಲ್ಲೊಬ್ಬ ಹುಡುಗನಿಗೆ ಫಿಟೆ°ಸ್‌ ಯಾವತ್ತೂ ಸರಕಾಗಿ ಕಾಣಲಿಲ್ಲ, ಬದುಕಾಗಿ ಕಂಡಿತು.

  ಲೈಟು ಕಂಬದ ಒಂದೇ ಒಂದು ರಾಡ್‌ನಿಂದ “ಮಿಸ್ಟರ್‌ ಏಷ್ಯಾ’ದ ವರೆಗೆ ಸಾಗಿದ ಈತನ “ಫಿಟ್ನೆಸ್‌ ಚಾಲೆಂಜ್‌’ಗೆ ಉಘೇ ಎನ್ನಲೇಬೇಕು. ಈತನ ಹೆಸರು ಸುನೀಲ್‌ ಕುಮಾರ್‌. 29 ವರುಷ. ಬೆಂಗಳೂರಿನ ಬೃಂದಾವನ ನಗರದಲ್ಲಿ ಇಂದು “ಲೆಜೆಂಡ್ಸ್‌ ಜಿಮ್‌’ ಸ್ಥಾಪಿಸಿರುವ ಸುನೀಲ್‌ರ ಬದುಕಿನ ಕತೆಯೇ ರೋಚಕ. ತೆರೆಮೇಲೆ ಬರುತ್ತಿದ್ದ ಟೈಗರ್‌ ಪ್ರಭಾಕರ್‌ರಂಥ ವಿಲನ್‌ ಪಾತ್ರಗಳನ್ನು ನೋಡಿ ಅವರಂತೆ ಆಗಬೇಕೆಂದು ಹಂಬಲಿಸಿದಾಗ ಇವರ ಬಳಿ ಜಿಮ್‌ ಪರಿಕರಗಳೇ ಇದ್ದಿರಲಿಲ್ಲ. ಆಗ ಅವರಿಗೆ ಕಂಡಿದ್ದು, ಕರೆಂಟ್‌ ಕಂಬಕ್ಕೆ ಅಳವಡಿಸಿದ್ದ ನಿರುಪಯುಕ್ತವಾಗಿ ಬಿದ್ದಿದ್ದ 2 ರಾಡ್‌ಗಳು. ಅವನ್ನೇ ಮನೆಗೆ ತಂದು ಡಂಬಲ್ಸ್‌ ರೀತಿ ಎತ್ತಿ, ಮೈ ಪಳಗಿಸಿಕೊಂಡರು. ಎಸ್ಸೆಸ್ಸೆಲ್ಸಿ ವರೆಗೆ ಮನೆಯಲ್ಲೇ ವ್ಯಾಯಾಮ ಮಾಡಿ, ಫಿಟ್‌ ಆದರು. ದೇಹದಾಡ್ಯìಪಟು ಆಗಬೇಕೆಂಬ ಕನಸು ಅವರಿಗೆ ಹುಟ್ಟಿದ್ದೂ ಆಗಲೇ.

ಅದು ತಾಯಿಯ ಕನಸು 

“ಮಗ ಸೈನ್ಯಕ್ಕೆ ಸೇರಬೇಕು. ಗಡಿಯಲ್ಲಿ ದಿಟ್ಟ ಹೆಜ್ಜೆ ಇಡಬೇಕು ಇಲ್ಲವೇ ದೇಹದಾಡ್ಯìಪಟುವಾಗಬೇಕು’ ಅನ್ನೋದು ಸುನೀಲ್‌ ತಾಯಿ ನಿರ್ಮಲ ಅವರ ಆಸೆಯಾಗಿತ್ತಂತೆ. ಆದರೆ, ತಂದೆ ಕೋದಂಡರಾಮ ಅವರು ಈ ಕನಸಿಗೆ ತದ್ವಿರುದ್ಧವಾಗಿದ್ದರು. ಮಗ ದೇಹದಾರ್ಡ್ಯ ಪಟು ಆಗುವುದು ಇಷ್ಟವಿರಲಿಲ್ಲ. ಮಗ ದಾರಿ ತಪ್ಪಿ ರೌಡಿ ಆಗಿಬಿಟ್ಟರೆ ಎಂಬ ಭಯ. ಅದೇ ವೇಳೆ ತಾಯಿಯೂ ಕಣ್ಮುಚ್ಚಿದ್ದು ಸುನೀಲ್‌ಗೆ ಬರಸಿಡಿಲೇ ಆಗಿಹೋಯಿತು. 6 ತಿಂಗಳು ಜಿಮ್‌ ಕಡೆ ಮುಖವೇ ಹಾಕಲಿಲ್ಲ.

  ತಾಯಿ ಕಂಡಿದ್ದ ಕನಸನ್ನು ಕೈಚೆಲ್ಲಿ, ಖನ್ನತೆಗೆ ಜಾರಿದ್ದ ಸುನೀಲ್‌ರ ಭುಜವನ್ನು ಅಂದು ನೇವರಿಸಿದ್ದು ಸ್ನೇಹಿತರು. ಅವರ ಒತ್ತಾಯದ ಮೇರೆಗೆ ಸುನೀಲ್‌ ಪುನಃ ಜಿಮ್‌ ಮೆಟ್ಟಿಲೇರಿದರು. ತಾಯಿಯ ಕನಸನ್ನು ಚಾಲೆಂಜ್‌ ಆಗಿ ಸ್ವೀಕರಿಸಿಬಿಟ್ಟರು. ನೋಡ್ತಾ ನೋಡ್ತಾ ಫಿಟ್‌ ಆದ ಸುನೀಲ್‌, 2004ರಲ್ಲಿ ವೃತ್ತಿಪರ ದೇಹದಾಡ್ಯì ಸ್ಪರ್ಧೆಯಲ್ಲಿ ಟಾಪ್‌-10 ರ್‍ಯಾಂಕ್‌ ಒಳಗೆ ಮಿಂಚಿಯೇಬಿಟ್ಟರು. ಬಳಿಕ ಸರ್ವೀಸಸ್‌ ಬೆಳ್ಳಿ ಪದಕ, ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕಗಳು ಕೊರಳಿಗೆ ಬಿದ್ದವು. ಮಿಸ್ಟರ್‌ ಬೆಂಗಳೂರು ಚಾಂಪಿಯನ್‌ ಪಟ್ಟ ಸೇರಿ ಹತ್ತಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದವು. ಬ್ಯಾಂಕ್‌ ಉದ್ಯೋಗಿ ನಿಶ್ಚಿತಾರನ್ನು ವರಿಸಿರುವ ಸುನೀಲ್‌ ಈಗ ಕತ್ರಿಗುಪ್ಪೆವಾಸಿ.
  2008ರಲ್ಲಿ ಬೆಂಗಳೂರಿನ ಎಂಇಜಿಗೆ (ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌) ದೇಹದಾಡ್ಯì ಪಟುವಾಗಿ ಕ್ರೀಡಾ ಕೋಟಾದಡಿ ಭಾರತೀಯ ಸೈನ್ಯಕ್ಕೂ ಸೇರಿಬಿಟ್ಟರು. ಅಲ್ಲೂ ಮಿಸ್ಟರ್‌ ಏಷ್ಯಾ ದೇಹದಾಡ್ಯì ಸ್ಪರ್ಧೆಗೆ ಆಯ್ಕೆಯಾದರೂ, ಅನಾರೋಗ್ಯದ ಕಾರಣದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 

2012ರಲ್ಲಿ ಜಿಮ್‌ ಶುರು
ನಾಲ್ಕು ವರುಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಸುನೀಲ್‌, ಬೆಂಗಳೂರಿನ ಬೃಂದಾವನ ನಗರದಲ್ಲಿ “ಲೆಜೆಂಡ್ಸ್‌ ಜಿಮ್‌’ ಆರಂಭಿಸಿದರು. ಇಲ್ಲಿ ದಿನಕ್ಕೆ 120ಕ್ಕೂ ಹೆಚ್ಚು ಮಂದಿ ತರಬೇತಿ ಪಡೆಯುತ್ತಿದ್ದಾರೆ. ಕಾರ್ಡಿಯೊ, ಫಿಟೆ°ಸ್‌ ಟ್ರೆçನಿಂಗ್‌, ವೇಟ್‌ ಗೈನ್‌, ವೇಟ್‌ ಲಾಸ್‌ ಸೇರಿದಂತೆ ವಯಸ್ಸಿಗೆ ತಕ್ಕಂತೆ ವ್ಯಾಯಾಮ ಮಾಡಿಸುವುದರಲ್ಲಿ ಸುನೀಲ್‌ ನಿಪುಣರು. ಎಲ್ಲ ವಯೋಮಾನದವರಿಗೂ ತರಬೇತಿ ಕೊಡುತ್ತಾರೆ. ಕಡಿಮೆ ಖರ್ಚಿನಲ್ಲಿ ಸುನೀಲ್‌ ಹಲವಾರು ದೇಹದಾಡ್ಯì ಪಟುಗಳನ್ನು ರೂಪಿಸಿದ್ದಾರೆ. ಇವರು “ಲೆಜೆಂಡ್ಸ್‌ ಜಿಮ್‌’ ಹುಡುಗರನ್ನು ವಾರಕ್ಕೆ ಒಂದು ಸಲ (ಶನಿವಾರ) ಔಟಿಂಗ್‌ ಕರಕೊಂಡು ಹೋಗಿ ವ್ಯಾಯಾಮ ಮಾಡಿಸುತ್ತಾರೆ. ಅಷ್ಟೇ ಅಲ್ಲ… ತಿಂಗಳಿಗೊಮ್ಮೆ, ಟ್ರೆಕ್ಕಿಂಗ್‌ಗೂ ಕರೆದೊಯ್ಯುತ್ತಾರೆ.

  ದೇಹದಾರ್ಡ್ಯ  ಪಟುವಾಗುವ ಕನಸು ಕಾಣುತ್ತಿರುವವರು, ವೈಯಕ್ತಿಕ ತರಬೇತಿ ಪಡೆಯಲು ಇಚ್ಛಿಸುವವರು ಅಥವಾ ಫಿಟೆ°ಸ್‌ ಹೊಂದುವ ಆಸಕ್ತಿ ಇರುವವರು ಸುನೀಲ್‌ ಕುಮಾರ್‌ (ಮೊ. 9980204060) ಅವರನ್ನು ಸಂಪರ್ಕಿಸಬಹುದು.

ಹೇಮಂತ್‌ ಸಂಪಾಜೆ 

ಟಾಪ್ ನ್ಯೂಸ್

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.