ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ


Team Udayavani, Oct 12, 2020, 7:56 PM IST

ಆನ್‌ಲೈನ್ ‌ಕ್ಲಾಸಿಗೆ ಲ್ಯಾಪಿ

ಕೋವಿಡ್‌ ತಂದಿಟ್ಟಿರುವಈ ಸಂಕಷ್ಟಕಾಲದಲ್ಲಿವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಲ್ಲಿ ಕೂರುವಂತಾಗಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಆರಂಭವಾಗುವ ಆನ್‌ಲೈನ್‌ಕ್ಲಾಸುಗಳು,ಕೆಲವರಿಗೆ 4 ಗಂಟೆ, ಕೆಲವರಿಗೆ 5 ಗಂಟೆಗಳ ಕಾಲ ನಡೆಯುತ್ತಿವೆ. ಕೆಲ ಮಕ್ಕಳು ಮೊಬೈಲ್‌ ಫೋನಿನಲ್ಲಿ, ಇನ್ನು ಕೆಲವರು ಲ್ಯಾಪ್‌ಟಾಪ್‌ ಮೂಲಕ ಆನ್‌ಲೈನ್‌ ಪಾಠವನ್ನು ಆಲಿಸುತ್ತಾರೆ, ವೀಕ್ಷಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೊಸ ಲ್ಯಾಪ್‌ ಟಾಪ್‌ ಕೊಳ್ಳುವ ಸಲುವಾಗಿ ಪೋಷಕರು ಹುಡುಕಾಟ ನಡೆಸಿರುತ್ತಾರೆ.

ಕಡಿಮೆ ದರ, ಉತ್ತಮ ವೈಶಿಷ್ಟ್ಯವುಳ್ಳ ಅಂಥ ಒಂದು ಲ್ಯಾಪ್‌ಟಾಪ್‌ ಮಿ ನೋಟ್‌ ಬು ಕ್‌14 ಹಾರಿಝೋನ್‌. ಪೈಪೋಟಿಯ ದರದಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಈ ಲ್ಯಾಪಾrಪ್‌ ಒಳಗೊಂಡಿವೆ. ಇದು ಮ್ಯಾಗ್ನಿಷಿಯಂ ಅಲ್ಯೂಮಿನಿಯಂ ಲೋಹದ ದೇಹ ಹೊಂದಿದೆ. ಸಾಮಾನ್ಯವಾಗಿ ಹೆಚ್ಚಿನ ಲ್ಯಾಪ್‌ಟಾಪ್‌ಗ್ಳು ಪ್ಲಾಸ್ಟಿಕ್‌ ದೇಹಹೊಂದಿರುತ್ತವೆ. ಇದು ಲೋಹದ ಕವಚ ಹೊಂದಿಯೂ ಕೇವಲ 1.4 ಕೆಜಿ ಮಾತ್ರ ತೂಕವಿದ್ದು, 14 ಇಂಚಿನ ಪರದೆ ಹೊಂದಿದೆ. ಲ್ಯಾಪ್‌ ಟಾಪ್‌ನ ಗಾತ್ರ ಎ4 ಅಳತೆಯಕಾಗದದಷ್ಟಿದೆ.

ಟೈಪಿಂಗ್‌ ಮಾಡಲು ಸುಲಭ : ಇದರ ಪರದೆ 14 ಇಂಚಿದ್ದು, ಶೇ.91ಶೇ.ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿರುವುದರಿಂದ, ಅಳತೆಯಲ್ಲಿ ಇನ್ನಷ್ಟು ಚಿಕ್ಕದಾಗಿದೆ. ಪರದೆಯಿಂದ ಆಚೆಗೆ ಸಣ್ಣದಾದ ಅಂಚಷ್ಟೇ ಇದೆ. ಎಚ್‌ಡಿಎಂಐ ಪೋರ್ಟ್‌, ಒಂದು ಯುಎಸ್‌ಬಿ ಸಿ ಪೋರ್ಟ್‌, ಎರಡು ಯುಎಸ್‌ಬಿ 3.1 ಪೋರ್ಟ್‌, ಒಂದು ಯುಎಸ್‌ಬಿ 2.1 ಪೋರ್ಟ್‌ ಇದೆ.

10ನೇ ತಲೆಮಾರಿನ ಇಂಟೆಲ್‌ ಕೋರ್‌ ಐ7 ಪೊ›ಸೆಸರ್‌ ವೇಗವಾಗಿ ಕೆಲಸ ಮಾಡುತ್ತದೆ. ಕೇವಲ 10ರಿಂದ 15 ಸೆಕೆಂಡ್‌ ನಲ್ಲಿ ಆನ್‌ ಆಗುತ್ತದೆ. ಅಪ್ಲಿಕೇಷನ್‌ಗಳ ತೆರೆದುಕೊಳ್ಳುವಿಕೆ, ನೆಟ್‌ ಸರ್ಫಿಂಗ್‌, ಚಿತ್ರಗಳು, ವಿಡಿಯೊಗಳ ಓಪನ್‌, ಜಿಮೇಲ್‌ ಇತ್ಯಾದಿ ವೇಗವಾಗಿ ಕಾರ್ಯಾಚರಿಸುತ್ತವೆ. ಲ್ಯಾಪ್‌ಟಾಪ್‌ ವಿಂಡೋಸ್‌10 ಹೋಮ್‌ ಎಡಿಷನ್‌ ಹೊಂದಿದೆ. ಲ್ಯಾಪ್‌ಟಾಪ್‌ನ ಕೀಬೋರ್ಡ್‌ಗಳು ಬಹಳ ಅನುಕೂಲಕರವಾಗಿವೆ. ಬೆರಳುಗಳನ್ನಿಡುವ ಸ್ಥಳಾವಕಾಶ ತೃಪ್ತಿಕರವಾಗಿದೆ. ಹೀಗಾಗಿ ವೇಗವಾಗಿ ಟೈಪಿಂಗ್‌ ಮಾಡಲು ಸುಲಭ. ಆದರೆ ಟ್ರಾಫಿಕ್‌ ಪ್ಯಾಡ್‌ ಅಗಲ ಕಡಿಮೆ.

ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ : ಪರದೆ ಫ‌ುಳ್ ಎಚ್‌ಡಿ ಆಗಿದ್ದು ಚಿತ್ರ, ವಿಡಿಯೊಗಳು ಬಹಳ ಚೆನ್ನಾಗಿ ಕಾಣುತ್ತವೆ. ಪರದೆಯ ನೇರಕ್ಕೆ ನೋಡಿದರೆ ಮಾತ್ರ ಚಿತ್ರ ಕಾಣುತ್ತವೆ. ಅಚೀಚೆ ನೋಡಿದರೆ ಮಸುಕಾಗಿರುತ್ತದೆ. ಆದರೆ ಎಫ್ಎಚ್‌ಡಿ ಪರದೆಯಲ್ಲಿ ಆ ಸಮಸ್ಯೆಯಿಲ್ಲ. ಯಾವ ಕೋನದಲ್ಲಿ ನೋಡಿದರೂ ಚಿತ್ರ ಸ್ಪಷ್ಟವಾಗಿ ಶ್ರೀಮಂತವಾಗಿ ಕಾಣುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ. 7ರಿಂದ 8 ಗಂಟೆಗಳ ಕಾಲ ಬರುತ್ತದೆ. ಡಿಟಿಎಸ್‌ ಆಡಿಯೋ ಸೌಲಭ್ಯ ಹೊಂದಿವೆ. ಮಿ ಕ್ವಿಕ್‌ ಶೇರ್‌ ಮೂಲಕ ಅಂಡ್ರಾಯx… ಸ್ಮಾರ್ಟ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ನಡುವೆ ಫೈಲ್‌ಗ‌ಳನ್ನು ಹಂಚಿ ಕೊಳ್ಳಬಹುದಾಗಿದೆ. ಅಂಚನ್ನು ಸಣ್ಣ ಮಾಡುವ ಉದ್ದೇಶದಿಂದ ವೆಬ್‌ಕ್ಯಾಮ್‌ ಅನ್ನು ಅಂತರ್ಗತವಾಗಿ ನೀಡಿಲ್ಲ.­

 

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.