ಮೆಣಸು ಸಂಸ್ಕರಿಸುವ ಯಂತ್ರ

Team Udayavani, Nov 18, 2019, 5:00 AM IST

ಕರಿಮೆಣಸಿಗಿಂತಲೂ ಬಿಳಿಮೆಣಸಿಗೆ ಅಧಿಕ ಬೇಡಿಕೆ, ಬೆಲೆ. ಬಿಳಿಮೆಣಸು ಮಾಡುವ ಕಾರ್ಯ ಶ್ರಮದಾಯಕ. ಆದ್ದರಿಂದ ಅದನ್ನು ಹೆಚ್ಚು ಮಂದಿ ಸಂಸ್ಕರಿಸಲು ಮುಂದಾಗುವುದಿಲ್ಲ. ಇದನ್ನು ಮನಗಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮೆಣಸು ಸಂಸ್ಕರಣಾ ಯಂತ್ರ ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ಇದನ್ನು ಸಣ್ಣ, ಮಧ್ಯಮ ಪ್ರಮಾಣದ ಬೆಳೆಗಾರರ ಅವಶ್ಯಕತೆಗಳನ್ನು ಗುರಿಯಾಗಿರಿಸಿಕೊಂಡು ವಿನ್ಯಾಸ ಮಾಡಲಾಗಿದೆ.

ಈ ಯಂತ್ರ, ಒಂದು ತಾಸಿಗೆ ಗರಿಷ್ಠ 120 ಕೆ.ಜಿ ಕರಿ ಮೆಣಸನ್ನು ಸಂಸ್ಕರಿಸಿ ಬಿಳಿಯಾಗಿ ಮಾರ್ಪಡಿಸುತ್ತದೆ. ಇದಕ್ಕಾಗಿ ಮೊದಲಿಗೆ, ಚೆನ್ನಾಗಿ ಬಲಿತ, ಹಣ್ಣಾದ ಮೆಣಸು ಕಾಳುಗಳನ್ನು ನೀರಿನಲ್ಲಿ ನೆನಸಬೇಕು. ಹೀಗೆ ನೀರಲ್ಲಿ ಹದಗೊಂಡ ಮೆಣಸನ್ನು ನಂತರ ಯಂತ್ರದೊಳಕ್ಕೆ ಹಾಕಬೇಕು. ನೀರಲ್ಲಿ ನೆದ ಮೆಣಸಿನ ಹೊರಮೈ ತೆಳುವಾಗಿರುತ್ತದೆ. ಇದರಿಂದ ಅದನ್ನು ತಿರುಳಿಂದ ಬೇರ್ಪಡಿಸುವುದು ಸುಲಭ. ನಂತರ, ಅದನ್ನು ನೆರಳಿನಲ್ಲಿ ಒಣಗಿಸಿ ಬಳಸಬೇಕು. ಮೆಣಸು ಸಂಸ್ಕರಿಸುವ ಯಂತ್ರದ ಅಂದಾಜು ಮೌಲ್ಯ 35,000 ರೂ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್‌ ವಿಭಾಗ ಸಂಪರ್ಕಿಸಬಹುದು: 080- 23545640

– ಕುಮಾರ ರೈತ


ಈ ವಿಭಾಗದಿಂದ ಇನ್ನಷ್ಟು

  • ನಮ್ಮಲ್ಲಿ ಸೀಸನಲ್‌ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್‌ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ "ಕೊನೆಗಾರ'ನದ್ದು. ಅಡಕೆ ಕೊಯ್ಲು...

  • ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ್‌' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • ದೇಗುಲ ನಿರ್ಮಾಣಕ್ಕೆ ಒಂದು ಶಾಸ್ತ್ರವಿದೆ. ಇದರಂತೆ, ಕೆರೆಯ ಸ್ಥಳದ ಆಯ್ಕೆಗೂ ಇಂಥದ್ದೊಂದು ಪರಿಕಲ್ಪನೆ ಇದೆ. ರಾಜ್ಯದ ಕೆರೆಗಳನ್ನು ಸುತ್ತಿದರೆ ಬಂಡೆ ಬೆಟ್ಟದ...

  • ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ,...

ಹೊಸ ಸೇರ್ಪಡೆ