ವೋಕಲ್‌ ಫಾರ್‌ ಲೋಕಲ್‌


Team Udayavani, Nov 2, 2020, 8:05 PM IST

ವೋಕಲ್‌ ಫಾರ್‌ ಲೋಕಲ್‌

ಕ್ರಿಕೆಟ್‌ ಯಾರಿಗೆ ತಾನೇ ಪರಿಚಯವಿಲ್ಲ? ಕ್ರಿಕೆಟ್‌ ನೋಡದೇ ಇರುವವರು ಅಥವಾ ಆಡದೇ ಇರುವವರು ವಿರಳ. ಭಾರತದಲ್ಲಿ ಟೆನಿಸ್‌ ಬಾಲ್‌ ಗಳು ಟೆನ್ನಿಸ್‌ ಆಡುವುದಕ್ಕಿಂತ ಹೆಚ್ಚಾಗಿ ಕ್ರಿಕೆಟ್‌ ಆಡುವುದಕ್ಕಾಗಿಯೇ ಹೆಚ್ಚು ಬಳಕೆಯಾಗುತ್ತವೆ. ಕರ್ನಾಟಕದ ಏಕೈಕ ಕ್ರಿಕೆಟ್‌ ಟೆನ್ನಿಸ್‌ ಬಾಲ್‌ ಘಟಕ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿದೆ. ಇಲ್ಲಿರುವ ಸೋಹಮ್‌ ರಬ್ಬರ್‌ ಟೆಕ್‌, ಕಳೆದ 35 ವರ್ಷಗಳಿಂದ “ಒಲಿಂಪಿಕ್‌’ ಬ್ರಾಂಡ್‌ನ‌ ಬಾಲ್‌ಗ‌ಳನ್ನು ಉತ್ಪಾದಿಸುತ್ತಿದ್ದು, ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಮನೆಮಾತಾಗಿದೆ. ಆ ಮೂಲಕ ಸ್ವದೇಶಿ ಕ್ರಾಂತಿಗೆ ಹೊಸ ಭಾಷ್ಯ ಬರೆದಿದೆ.

ಉದ್ಯಮ ಸ್ಥಾಪನೆ :  ಮೂಲತಃ ಕುಮಟಾದ ಮಾನೀರ ಗ್ರಾಮದವರಾದ ಎಂ.ಜಿ.ಹೆಗಡೆ ಹಲವು ವರ್ಷ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವ ಹಿಸಿದ್ದರು. ಗುಜರಾತಿನ ಬಾಲ್‌ ಉತ್ಪಾದನಾ ಕಂಪನಿಯೊಂದರಲ್ಲಿ ಕೆಲಕಾಲ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಅದೇ ಸಂಸ್ಥೆಯಲ್ಲಿ ಪಾಲುದಾರರಾದರು. ಅಲ್ಲಿ ಬಾಲ್‌ ಉತ್ಪಾದನೆಯ ಕುರಿತು ಅನುಭವ ಪಡೆದಹೆಗಡೆ, 1985ರಲ್ಲಿ ಸಹೋದರ  ನೊಂದಿಗೆ ಕುಮಟಾದಲ್ಲಿ “ಪ್ರಸಾದ ಪ್ರಾಡಕ್ಟ್’ ಎಂಬ ಹೆಸರಿನಲ್ಲಿ ಕ್ರಿಕೆಟ್‌ ಟೆನ್ನಿಸ್‌ ಬಾಲ್‌ ತಯಾರಿಕಾ ಘಟಕವನ್ನು ಆರಂಭಿಸಿದರು. ನಾನು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದರೂ, ನಮ್ಮೂರಿನಲ್ಲಿಯೇ ಏನಾದರೂ ಸಾಧಿಸಬೇಕೆಂಬ ಹುಮ್ಮಸ್ಸು ಹೆಚ್ಚಾಗಿತ್ತು. ಕಚ್ಚಾವಸ್ತುಗಳೂ ಕೂಡಾ ಸ್ಥಳೀಯವಾಗಿ ಲಭ್ಯವಾಯಿತು. 1985ರಲ್ಲಿ ಕುಮಟಾಕ್ಕೆ ಬಂದು ಸಹೋದರನೊಂದಿಗೆ ಸಣ್ಣಪ್ರಮಾಣದಲ್ಲಿ ಟೆನ್ನಿಸ್‌ ಬಾಲ್‌ ಉತ್ಪಾದನಾ ಘಟಕ ಪ್ರಾರಂಭಿಸಿದೆ ಎನ್ನುತ್ತಾರೆ ಎಂ.ಜಿ. ಹೆಗಡೆ.

ಸಂಪೂರ್ಣ ಮ್ಯಾನ್‌ಮೇಡ್‌ ಬಾಲ್‌ :  1985ರಲ್ಲಿ ಪ್ರಾರಂಭವಾದ ಪ್ರಸಾದ್‌ ಪ್ರಾಡಕ್ಟ್ಸ್ ಹೆಸರಿನ ಘಟಕ 2014ರಿಂದ “ಸೋಹಮ್‌ ರಬ್ಬರ್‌ ಟೆಕ್‌’ ಎಂಬ ಹೆಸರಿನಿಂದ ಟೆನ್ನಿಸ್‌ ಬಾಲ್‌ ತಯಾರಿಕೆಯನ್ನು ಮುಂದುವರಿಸಿದೆ. ನೈಸರ್ಗಿಕ ರಬ್ಬರ್‌ ಖರೀದಿ, ರಬ್ಬರ್‌ ಹದಗೊಳಿಸುವಿಕೆಯಿಂದ ಹಿಡಿದು ಚೆಂಡಿನ ಗುಣಮಟ್ಟದ ಪರೀಕ್ಷೆ, ಟ್ರೇಡ್‌ಮಾರ್ಕ್‌ ಅಂಟಿಸು ವುದು, ಪ್ಯಾಕಿಂಗ್‌… ಹೀಗೆ ಹದಿನೈದು ಹಂತಗಳಲ್ಲಿಯೂ ಮಾನವಶ್ರಮ ಬಳಕೆಯಾಗುತ್ತಿರುವುದು ವಿಶೇಷ! ಸೋಹಮ್‌ ರಬ್ಬರ್‌ ಟೆಕ್‌ ಘಟಕದಲ್ಲಿ ಸದ್ಯ ಸುಮಾರು 15 ಕಾರ್ಮಿಕರು ಕೆಲಸ ಮಾಡುತ್ತಿದ್ದು, 125 ಗ್ರಾಂ, 75 ಗ್ರಾಂ ಮತ್ತು 58 ಗ್ರಾಂನ ಟೂರ್ನಿಮೆಂಟ್‌ ಟೆನ್ನಿಸ್‌ ಬಾಲ್, ಹಾರ್ಡ್‌ ಟೆನ್ನಿಸ್‌ ಬಾಲ್, ಲೋ ಟೆನ್ನಿಸ್‌ ಬಾಲ್‌ ಮತ್ತು ಪೆಂಚ್‌ ಬಾಲ್‌ ಹೀಗೆ ವಿವಿಧ ರೀತಿಯ ಟೆನ್ನಿಸ್‌ ಬಾಲ್‌ ಸಿದ್ಧಗೊಳ್ಳುತ್ತಿದೆ. ಪ್ರತಿನಿತ್ಯ ಸುಮಾರು 1000 ಚೆಂಡುಗಳು ಇಲ್ಲಿ ಸಿದ್ಧಗೊಳ್ಳುತ್ತದೆ.

ಹೊರರಾಜ್ಯಗಳಲ್ಲೂ ಬೇಡಿಕೆ :  ಘಟಕದ ಎಲ್ಲಾ ಯಂತ್ರಗಳು ಸ್ವಯಂ ಚಾಲಿತ ಯಂತ್ರಗಳಲ್ಲ. ಇಲ್ಲಿ ಪ್ರತಿಯೊಂದೂ ಹಂತಗಳಲ್ಲಿಯೂ ಕಾರ್ಮಿಕರ ಭಾಗವಹಿಸುವಿಕೆ ಅಗತ್ಯ. ಹೀಗಾಗಿ ಉತ್ಪಾದನೆಯಾಗುವ ಪ್ರತಿಯೊಂದು ಚೆಂಡುಗಳ ಗುಣಮಟ್ಟ ಪರಿಶೀಲನೆಯಾಗುತ್ತದೆ. ರಾಯಚೂರು, ಬೀದರ್‌, ಮಂಗಳೂರು, ಉಡುಪಿ, ಕೊಪ್ಪಳ ಸೇರಿದಂತೆ ಕೇರಳ ಗೋವಾ, ಮಹಾರಾಷ್ಟ್ರದಲ್ಲಿಯೂ “ಒಲಿಂಪಿಕ್‌’ ಚೆಂಡಿಗೆ ಬೇಡಿಕೆ ಇದೆ ಎನ್ನುತ್ತಾರೆ ಸಂಸ್ಥೆಯ ಸಿಇಓ ದಿನೇಶ ಹೆಗಡೆ ಮಾನೀರ.

ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಘಟಕದಲ್ಲಿ 2 ತಿಂಗಳುಗಳ ಬಳಿಕ ಮತ್ತೆ ಉತ್ಪಾದನೆ ಪುನರಾರಂಭಗೊಂಡಿದೆ. ಮಳೆಗಾಲದ ಬಳಿಕ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಬಾಲ್‌ಗ‌ಳನ್ನು ತಯಾರಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. “ಮೇಕ್‌ ಇನ್‌ಇಂಡಿಯಾ’, “ಆತ್ಮನಿರ್ಭರ ಭಾರತ’ದಂಥ ಸ್ವದೇಶಿ ಅಭಿಯಾನಕ್ಕೆ ನಮ್ಮದೊಂದು ಪುಟ್ಟ ಕೊಡುಗೆ ಎನ್ನುತ್ತಾರೆ ಎಂ.ಜಿ. ಹೆಗಡೆ. ಬಾಲಿನ ದೀರ್ಘ‌ ಬಾಳಿಕೆ, ಗಟ್ಟಿತನ ಮತ್ತು ಮೈದಾನದಲ್ಲಿನ ವಿಶೇಷ ಪುಟಿತ ಗುಣಗಳಿಂದಾಗಿ”ಒಲಿಂಪಿಕ್‌’ ಬಾಲ್‌ ಕ್ರಿಕೆಟಿಗರ ಮನಸ್ಸನ್ನು ಗೆದ್ದಿದೆ.ಈ ಸಂಸ್ಥೆಯ ಎಂಡಿ, ಎಂ.ಜಿ. ಹಗಡೆ ಅವರನ್ನು ಸಂಪರ್ಕಿಸಲು: 9008012789, 9845806855.­

 

-ಎಂ.ಎಸ್‌. ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Gadag; Vinay came from England and voted

Gadag; ಇಂಗ್ಲೆಂಡ್‌ನಿಂದ ಆಗಮಿಸಿ ಮತದಾನ ಮಾಡಿದ ಗದಗದ ವಿನಯ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.