ಡ್ರೋಣಾ ಚಾರ್ಯರಾಗುವುದು ಹೇಗೆ?


Team Udayavani, Jan 7, 2020, 5:05 AM IST

camera

ಈಗ ಕಾಲ ಬದಲಾಗಿದೆ. ಡ್ರೋನ್‌ಗಳು ಸಿನಿಮಾ ಮಾತ್ರವಲ್ಲ. ಮದುವೆ, ನಾಮಕರಣ, ಪ್ರೀವೆಡ್ಡಿಂಗ್‌, ಕಾಲೇಜ್‌ ಡೇ, ಆಟೋಟ, ಶಾರ್ಟ್‌ ಮೂವಿ ಕ್ಷೇತ್ರಗಳಿಗೂ ಡ್ರೋನ್‌ ಲಗ್ಗೆ ಇಟ್ಟಿದೆ. ಇವುಗಳನ್ನು ನಿರ್ವಹಿಸುವ, ನಡೆಸುವ ಕಮರ್ಷಿಯಲ್‌ ಪೈಲಟ್‌ಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ಹೀಗಾಗಿ ಡ್ರೋಣ್‌ ನಿರ್ವಹಣೆಗೆ ಕೋರ್ಸ್‌ಗಳು ಹುಟ್ಟಿಕೊಂಡಿವೆ.

ಸ್ಕೆçಫಾಲ್‌ 2012 ರಲ್ಲಿ ತೆರೆಕಂಡ ಹಾಲಿವುಡ್‌ ಸಿನಿಮಾ. ಇದರಲ್ಲಿ ಜೇಮ್ಸ್‌ ಬಾಂಡ್‌ ಪಾತ್ರಧಾರಿ ಡೇನಿಯಲ್‌ ಕ್ರೇಗ್‌ ಉಗ್ರಗಾಮಿಯೊಬ್ಬನನ್ನು ಬೈಕ್‌ನಲ್ಲಿ ಬೆನ್ನಟ್ಟುವ ದೃಶ್ಯವಿದೆ. ಇಸ್ತಾಂಬುಲ್‌ನ ಗ್ರ್ಯಾಂಡ್‌ ಬಜಾರ್‌ನ ಕಟ್ಟಡಗಳು, ಮನೆಯ ಮಾಳಿಗೆಯ ಮೇಲೆ ನಡೆಯುವ ಬೈಕ್‌ ಚೇಸಿಂಗ್‌ ದೃಶ್ಯ ಮೈನವಿರೇಳಿಸುತ್ತದೆ. ಇಂಥ ಪ್ರಯತ್ನ ಹಾಲಿವುಡ್‌ ಸಿನಿಮಾಗಳ ಚಿತ್ರೀಕರಣ ತಂತ್ರವನ್ನೇ ಹೊಸ ಎತ್ತರಕ್ಕೆ ಕೊಂಡೊಯ್ಯಿತು.

ಸೀಟಿನ ಅಂಚಿಗೆ ಕುಳಿತುಕೊಳ್ಳವಂತೆ ಮಾಡಿದ ಈ ಚೇಸಿಂಗ್‌ ದೃಶ್ಯದ ಹಿಂದೆ ಡ್ರೋನ್‌ ಕ್ಯಾಮರಾದ ಕೈವಾಡವಿದೆ. ಈ ದೃಶ್ಯವನ್ನು ಚಿತ್ರೀಕರಿಸಿದ್ದ ಫ್ಲೆçಯಿಂಗ್‌ ಕ್ಯಾಮ್‌ಗೆ ವೈಜ್ಞಾನಿಕ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಯೂ ಬಂತು! ಇದಾದ ನಂತರ ಬಂದ ದಿ ಎಕ್ಸ್‌ಪೆಂಡೆಬಲ್ಸ್‌, ಜುರಾಸಿಕ್‌ ವರ್ಲ್ಡ್, ಸ್ಟೆಕ್ಟರ್‌, ಕ್ಯಾಪ್ಟನ್‌ ಅಮೆರಿಕಾ ಸಿವಿಲ್‌ ವಾರ್‌ ಚಿತ್ರಗಳಲ್ಲಿ ಡ್ರೋನ್‌ ಬಳಕೆ ಮಾಡಿದ್ದರಿಂದ ದೃಶ್ಯ ಶ್ರೀಮಂತಿಕೆಯ ಹೊಸ ಪರಿಭಾಷೆಯೇ ಮೂಡಿಬಂತು.

ಈಗ ಕಾಲ ಬದಲಾಗಿದೆ. ಡ್ರೋನ್‌ಗಳು ಸಿನಿಮಾ ಮಾತ್ರವಲ್ಲ. ಮದುವೆ, ನಾಮಕರಣ, ಪ್ರೀವೆಡ್ಡಿಂಗ್‌, ಕಾಲೇಜ್‌ ಡೇ, ಆಟೋಟ, ಶಾರ್ಟ್‌ ಮೂವಿ, ಡಾಕ್ಯುಮೆಂಟರಿ ಮೂವಿಗಳನ್ನು ಶೂಟ್‌ ಮಾಡಲು ಯಥೇತ್ಛವಾಗಿ ಬಳಸಲಾಗುತ್ತಿದೆ. ಸಮೀಕ್ಷೆ, ಅಡ್ವಟೈìಸಿಂಗ್‌, ವ್ಯವಸಾಯ, ರಕ್ಷಣಾ ಕಾರ್ಯ, ಪತ್ತೇದಾರಿಕೆ, ಅಪರಾಧ ಪತ್ತೆ ಕ್ಷೇತ್ರಗಳಿಗೂ ಡ್ರೋನ್‌ ಲಗ್ಗೆ ಇಟ್ಟಿದೆ. ಇವುಗಳನ್ನು ನಿರ್ವಹಿಸುವ, ನಡೆಸುವ ಕಮರ್ಷಿಯಲ್‌ ಪೈಲಟ್‌ಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ತಮ್ಮ ತಮ್ಮ ಉದ್ಯಮಗಳ ಅವಶ್ಯಕತೆಗನುಗುಣವಾಗಿ ಡ್ರೋನ್‌ಗಳ ಸೇವೆ ಪಡೆದುಕೊಳ್ಳಲಾಗುತ್ತಿದೆ. 2020 ಕ್ಕೆ ಇಡೀ ವಿಶ್ವದಾದ್ಯಂತ ಮೂರು ಲಕ್ಷ ಕೆಲಸಗಾರರು ಬೇಕಾಗುತ್ತದೆ ಎಂದಿರುವ ಅಮೆರಿಕದ ಫೆಡರಲ್‌ ಏವಿಯೇಶನ್‌ ಅಡ್ಮಿನಿಸ್ಟ್ರೇಶನ್‌ ಸಂಸ್ಥೆ ಇನ್ನೆçದು ವರ್ಷಗಳಲ್ಲಿ ಬೇಡಿಕೆ ನಾಲ್ಕು ಪಟ್ಟು ಹೆಚ್ಚಲಿದೆ ಎಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇವಲ ಹವ್ಯಾಸವೆನಿಸಿದ್ದ ಡ್ರೋನ್‌ ಶೂಟಿಂಗ್‌ನ ಮುಂದಿನ ಆರು ವರ್ಷಗಳಲ್ಲಿ ಶೇ. 51 ರಷ್ಟು ವೃದ್ಧಿಯಾಗಲಿದೆ.

ಉದ್ಯೋಗದ ವಿಧ
ಡ್ರೋನ್‌ ನಡೆಸುವ ಪೈಲಟ್‌ಗಳಲ್ಲಿ ಶೇ. 62ರಷ್ಟು ಜನ ಸ್ವಂತವಾಗಿಯೇ ಕೆಲಸ ಮಾಡಲು ಇಚ್ಛಿಸುತ್ತಾರೆ. ದಿನದ 24 ಗಂಟೆಗಳೂ ಸೇವೆ ಒದಗಿಸಬಹುದಾದ ಸ್ವಾತಂತ್ರ್ಯವಿರುತ್ತದೆ ಎನ್ನುವ ಅಭಿಪ್ರಾಯ ಅವರದು. ಉಳಿದವರು ಯಾವುದಾದರೂ ಸಂಸ್ಥೆಯ ನೌಕರರಾಗಿ, ತಿಂಗಳಿಗೆ ನಿಶ್ಚಿತ ಸಂಬಳ ಪಡೆಯುವ ಇರಾದೆ ಹೊಂದಿದ್ದಾರೆ. ಎರಡೂ ಬಗೆಯ ಕೆಲಸಗಳಿದ್ದು ಕೈತುಂಬಾ ಹಣ ತರುವ ಉದ್ಯೋಗ ಮಾರುಕಟ್ಟೆ ಸೃಷ್ಟಿಯಾಗಿದೆ.

ಎಲ್ಲೆಲ್ಲಿ ಕೆಲಸ?
ಹವಾಮಾನ, ರಿಯಲ್‌ ಎಸ್ಟೇಟ್‌, ಸಮೀಕ್ಷೆ ಮತ್ತು ಸರ್ವೆ ನಡೆಸುವ ಸಂಸ್ಥೆಗಳು, ನಕ್ಷೆ ತಯಾರಿಕೆ, ಕಟ್ಟಡ, ಡ್ಯಾಂ, ಬ್ರಿಡ್ಜ್, ಇನುÒರೆನ್ಸ್‌, ಗೋಪುರ ನಿರ್ಮಾಣ, ಮೂಲಭೂತ ಸೌಕರ್ಯ ಮತ್ತು ಮನೋರಂಜನೆ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆ ಅನಿವಾರ್ಯವಾಗಿರುವುದರಿಂದ ಆ ಕ್ಷೇತ್ರಗಳಲ್ಲೆಲ್ಲಾ ಡ್ರೋನ್‌ ಪೈಲಟ್‌ಗಳಿಗೆ ಕೆಲಸವಿದೆ. ಕಾನೂನು ಪಾಲನೆ, ಕೃಷಿ, ವಿಶೇಷ ಉತ್ಪನ್ನ ತಯಾರಿಸುವ ಕಾರ್ಖಾನೆಗಳಿಗೂ ಡ್ರೋನ್‌ಗಳು ಬೇಕಾಗುವುದರಿಂದ ಪದವಿ ಗಳಿಸಿರುವ ವಿದ್ಯಾರ್ಥಿಗಳು ಪೂರ್ಣಾವಧಿ ಕೆಲಸಗಾರರಾಗಿ ನೌಕರಿ ಪಡೆಯಬಹುದು. ಅಮೆರಿಕಾ, ಕೆನಡಾ, ಜರ್ಮನಿ ಸರ್ಕಾರಗಳು ಡ್ರೋನ್‌ ಪೈಲಟ್‌ಗಳ ಅವಶ್ಯಕತೆ ಮತ್ತು ಹಾರುವ ಡ್ರೋನ್‌ಗಳ ಪರಿಮಿತಿ ಎರಡರ ಕುರಿತೂ ಹೆಚ್ಚಿನ ಆಸ್ಥೆ ತೋರಿಸುತ್ತಿವೆ. ಹೀಗಾಗಿ, ಐ.ಟಿ,ಬಿ.ಟಿಗರಂತೆ ಎಲ್ಲರೂ ವಿದೇಶಕ್ಕೆ ಉದ್ಯೋಗವರಿಸಿ ಹೋಗಬಹುದು.

ಯಾವ ಕೆಲಸ?ಯಾವ ಕೋರ್ಸ್‌?
ಮಾಡುವ ಕೆಲಸಗಳನ್ನಾಧಾರಿಸಿ ಡ್ರೋನ್‌ ನಿರ್ವಹಿಸುವವರಿಗಾಗಿ ಡ್ರೋನ್‌ ಸ್ಟ್ರೇ ಪೈಲಟ್‌, ಫ್ಲೆçಟ್‌ ಆಪರೇಶನ್ಸ್‌ ಮ್ಯಾನೇಜರ್‌, ಚೀಫ್ ಯಎಎಸ್‌ ಪೈಲಟ್‌, ಸೀನಿಯರ್‌ ಡ್ರೋನ್‌ ಪೈಲಟ್‌, ಫೀಲ್ಡ್‌ ಟೆಕ್ನೀಶಿಯನ್‌, ಸೇಫ್ಟಿಲೀಡ್‌, ಬ್ಲೇಡ್‌ ಮೆಂಟೇನೆನ್ಸ್‌ ಟೆಕ್ನಾಲಜಿಸ್ಟ್‌ ಹೀಗೆ ಅನೇಕ ಹುದ್ದೆಗಳು ಸೃಸ್ಟಿಯಾಗಿವೆ.

ಹತ್ತನೆಯ ತರಗತಿ ವಿದ್ಯಾಭ್ಯಾಸ ಮುಗಿಸಿ ಹದಿನೆಂಟು ತುಂಬಿರುವ ಇಂಗ್ಲೀಷ್‌ ಮತ್ತು ತಂತ್ರಜ್ಞಾನದ ಭಾಷೆ ಅರ್ಥ ಮಾಡಿಕೊಳ್ಳ ಬಲ್ಲ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಿರುವ ಯಾರೇ ಆದರೂ DGCA ಡೈರೆಕ್ಟರ್‌ ಜನರಲ್‌ ಆಫ್ ಸಿವಿಲ್‌ ಏವಿಯೇಶನ್‌ ನಿಂದ ಪ್ರಮಾಣೀಕರಿಸಲ್ಪಟ್ಟ ಐಐಈ  IID – Indian Institute of Drones ABJ Drone Academy ಗಳಲ್ಲಿ ಹಲವು ಕೋರ್ಸ್‌ಗಳನ್ನು ಕಲಿತು ಡ್ರೋನ್‌ಗೆ ಸಂಬಂಧಿಸಿದ ನೌಕರಿ ಪಡೆಯಬಹುದು. ಉತ್ತರ ಪ್ರದೇಶದ ನೋಯ್ಡಾದಲ್ಲಿ ಕೇಂದ್ರ ಕಚೇರಿ ಇದ್ದು, ಇದು ದೇಶದ ಮೆಟ್ರೋ ನಗರಗಳಲ್ಲೆಲ್ಲಾ ಶಾಖೆ ಹೊಂದಿರುವ ಐಐಡಿ ಯಲ್ಲಿ ಒಂದು ದಿನದಿಂದ ಹಿಡಿದು ಹತ್ತು ದಿನಗಳ ವರೆಗಿನ ಡ್ರೋನ್‌ ಕೋರ್ಸ್‌ಗಳು ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾದವು ಇವು:

ಮೂರು ದಿನಗಳ ಮಲ್ಟಿರೋಟರ್‌ ಡ್ರೋನ್‌ / ಯುಎವಿ ಪೈಲಟ್‌ ಕೋರ್ಸ್‌
ಏಳು ದಿನಗಳ ಡಿಪ್ಲೊಮಾ ಇನ್‌ ಮಲ್ಟಿರೋಟರ್‌ ಪೈಲಟ್‌ ಕೋರ್ಸ್‌
ಐದು ದಿನಗಳ ಫಿಕ್ಸಡ್‌ ವಿಂಗ್‌ ಯುಎವಿ ಡ್ರೋನ್‌ ಪೈಲಟ್‌ ಕೋರ್ಸ್‌
ಒಂದು ದಿನದ ಮಲ್ಟಿರೋಟರ್‌ ಡ್ರೋನ್‌ ಓರಿಯಂಟೇಶನ್‌ ತರಬೇತಿ
ಇವುಗಳನ್ನು ಕಲಿತಾದ ಮೇಲೆ ಉದ್ಯೋಗ ನಿರ್ವಹಿಸಲು ಕೌಶಲ್ಯ ಪಡೆದುಕೊಳ್ಳುವ ವಿದ್ಯಾರ್ಥಿ ಹೆಚ್ಚಿನ ವಿಶೇಷ ಕಲಿಕೆಗೆ ಎರಡರಿಂದ ಆರು ದಿನಗಳ ಕಾಲ ದೇಶದ ವಿವಿಧ ಮೆಟ್ರೋ ನಗರಗಳಲ್ಲಿ ನಡೆಯುವ ವಿವಿಧ ತರಬೇತಿ ಶಿಬಿರಗಳಲ್ಲಿ ದಾಖಲಾಗಿ ಸ್ಪೆಷಲೈಸೇಶನ್‌ ಹೊಂದಬಹುದು.

ಡ್ರೋನ್‌ ಹಾರಿಸಲು ಲೈಸೆನ್ಸ್‌ ಬೇಕು!
ಡ್ರೋನ್‌ ಹಾರಿಸುವ ತಂತ್ರಜ್ಞಾನದ ಜೊತೆಗೆ ಅದನ್ನು ನಿರ್ದಿಷ್ಟ ಸ್ಥಳಗಳಲ್ಲಿ ಹಾರಿಸಲು ಲೈಸೆನ್ಸ್‌ ಬೇಕು. ಅಮೆರಿಕದಲ್ಲಿ PART 107 ಮತ್ತು ಯುರೋಪಿನಲ್ಲಿ PFCO ಪ್ರಮಾಣ ಪತ್ರಗಳನ್ನು ಹೊಂದಿರುವವರು ಮಾತ್ರ ಡ್ರೋನ್‌ ಹಾರಾಟ ನಡೆಸಬಹುದು. ಭಾರತದಲ್ಲಿ ಡ್ರೋನ್‌ ಹಾರಿಸಲು ಡಿಜಿಸಿಎ ನಿರ್ದೇಶನದ unmanned Aircraft Operator Permit (UAOP) ಹೊಂದಿರಬೇಕು.

-ಗುರುರಾಜ್‌ ಎಸ್‌. ದಾವಣಗೆರೆ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.