ಅರೇಂಜ್ಡ್ ಮ್ಯಾರೇಜಿನಲ್ಲಿ ನನಗೆ ನಂಬಿಕೆ ಜಾಸ್ತಿ… 


Team Udayavani, Apr 17, 2018, 5:58 PM IST

Arrange.jpg

ಚೆಲುವೆ, ನಿನ್ನನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಹೇಗೆಂದರ್ಹಾಗೆ ಕರೆಯುವುದಕ್ಕೆ ನೀ ನನ್ನ ಹೆಂಡತಿಯಲ್ಲ! ಎಲ್ಲರಂತೆ ಹೆಸರಿನಿಂದಲೇ ನಿನ್ನ ಗುರುತಿಸುವುದಕ್ಕೆ ನೀನು ಕೇವಲ ಸ್ನೇಹಿತೆಯಲ್ಲ. ನೀನು ನನ್ನನ್ನು ಸ್ನೇಹಿತನೆಂದು ಭಾವಿಸಿದ್ದರೂ ನಾನು ನಿನ್ನಿಂದ ಸ್ನೇಹವನ್ನು ಮಾತ್ರವೇ ಬಯಸುತ್ತಿಲ್ಲ. ಆ ಸ್ನೇಹದ ಜೊತೆಗೆ ನಿನ್ನ ಪ್ರೀತಿಯನ್ನೂ ಬೇಡುತ್ತಿದ್ದೇನೆ. ನನಗೆ ನಿನ್ನ ಮೇಲಿರುವುದು ಸ್ವತ್ಛಂದ ಪ್ರೀತಿಯೇ ಹೊರತು ಬೇರೇನೂ ಅಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿರುವುದು ನಿನಗೆ ತಿಳಿದ ಹಳೇ ವಿಚಾರ.

ಆದರೂ ನೀನು ನನ್ನ ಪ್ರೇಮದ ಗುಲಾಬಿಯನ್ನು ಕಿರುಗಣ್ಣಲ್ಲೂ ನೋಡದೆ ಕೇವಲ ನನ್ನ ಸ್ನೇಹವನ್ನು ಮಾತ್ರ ಬಯಸುತ್ತಿದ್ದೀಯಾ! ಹಾಗಾಗಿ ನನ್ನನ್ನ, ಒಂಥರಾ ಒನ್‌ ಸೈಡ್‌ ಲವರ್‌ ಅಂತಾರಲ್ಲಾ; ಆ ಕೆಟಗರಿಗೆ ಸೇರಿಸಬಹುದು. ಈಗ್ಲೆà ಇನ್ನೂ ಒಂದ್ಮಾತು ಹೇಳಿಬಿಡ್ತೀನಿ ಕೇಳಿಸ್ಕೋ: ನಿನ್ನನ್ನು ನಾನು ಪ್ರೀತಿಸುತ್ತಿದ್ದರೂ ನಿನ್ನಿಂದ ಪ್ರೇಯಸಿಯನ್ನಷ್ಟೇ ಬಯಸುತ್ತಿಲ್ಲ, ಬದಲಾಗಿ ನನ್ನ ಜೀವನದ ಸಂಗಾತಿಯಾಗಿಯೇ ನಿನ್ನನ್ನು ನೋಡ ಬಯಸುತ್ತೇನೆ. 

ನಿಜ! ಏಕೆಂದರೆ ನನಗೆ ಬರೀ ಪ್ರೀತಿಯ ಮೇಲೆ ನಂಬಿಕೆ ಇಲ್ಲ! ಏಕೆಂದರೆ, ಪ್ರೇಮಗಳು ಮದುವೆಯವರೆಗೂ ಹೋಗುತ್ತವೋ, ಇಲ್ಲವೋ ಎಂದು ಸ್ವತಃ ಪ್ರೇಮಿಗಳಿಗೇ ಗೊತ್ತಿರುವುದಿಲ್ಲ. ಪ್ರೇಮ ವಿವಾಹಗಳಾದರೂ ಮದುವೆಯ ನಂತರ ಅವರಿಬ್ಬರ ನಡುವೆ ಪ್ರೀತಿ ಇರುತ್ತದೋ? ಇಲ್ಲವೋ? ಎಂದು ಹೇಳಲಿಕ್ಕೂ ಆಗುವುದಿಲ್ಲ. ಅರೇಂಜ್ಡ್ ಮ್ಯಾರೇಜ್‌ನಲ್ಲಿಯೇ ನನಗೆ ನಂಬಿಕೆ ಜಾಸ್ತಿ.

ಏಕೆಂದರೆ, ಮನೆಯ ಹಿರಿಯರೆಲ್ಲರೂ ಸೇರಿ ಈ ಹುಡುಗನೂ, ಆ ಹುಡುಗಿಯೂ ಒಂದಾದರೆ ಮುಂದಿನ ಜೀವನ ಹೇಗಿರುತ್ತದೆ ಎಂದು ಮೊದಲೇ ಲೆಕ್ಕಾಚಾರ ಮಾಡಿ ನಮ್ಮ ಜೋಡಿ ಸರಿಯಾದುದೆಂದು ತೀರ್ಮಾನಿಸಿದರೆ, ಇಬ್ಬರ ಮಧ್ಯೆ ಸಣ್ಣ ಪುಟ್ಟ ಸಮಸ್ಯೆಗಳು, ಪರಸ್ಪರ ಭಿನ್ನಾಭಿಪ್ರಾಯಗಳು ಬಂದರೆ ಹಿರಿಯರೇ ಮಧ್ಯಸ್ಥಿಕೆ ವಹಿಸಿ ಮತ್ತೆ ನಮ್ಮನ್ನು ಒಂದು ಮಾಡುತ್ತಾರೆ.

ಹಾಗಾಗಿಯೇ, ನಿನ್ನ ಮೇಲೆ ನನಗೆ ಆಕಾಶದಷ್ಟು ಪ್ರೀತಿಯಿದ್ದರೂ ನಿನ್ನ ಒಪ್ಪಿಗೆಯ ಜೊತೆಗೆ ನಿನ್ನ ಪೋಷಕರ ಒಪ್ಪಿಗೆಯನ್ನೂ ಪಡೆದ ಮೇಲೆಯೇ ನಿನ್ನನ್ನು ವರಿಸಬೇಕೆಂದುಕೊಂಡಿದ್ದೇನೆ. ಒಟ್ಟಾರೆ ಎಂದೆಂದಿಗೂ ನಿನ್ನೊಂದಿಗೇ ಬಾಳುವಾಸೆ ನನ್ನದು. ಅದೂ ಕೂಡ, ನೀನು ಒಪ್ಪಿಗೆ ನೀಡಿದರೇ ಮಾತ್ರ! ನೀನು ಒಪ್ಪಿಗೆ ನೀಡುತ್ತೀಯಾ, ನನ್ನ ಪ್ರೀತಿಯನ್ನು ಅಥೆìçಸಿಕೊಳ್ಳುತ್ತೀಯಾ ಎಂದು ಆಶಿಸುತ್ತಿದ್ದೇನೆ.
ಇತಿ,
ನಿನ್ನ ಒಪ್ಪಿಗೆಯ ನಿರೀಕ್ಷಕ,
ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

11

Father’s Day: ಏನೋ ಹೇಳಬೇಕಿತ್ತು… ಧೈರ್ಯಬರಲಿಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

1-aaaa

Bihar:ಗಂಗಾ ನದಿಯಲ್ಲಿ ಮುಳುಗಿದ 17 ಭಕ್ತರಿದ್ದ ದೋಣಿ,6 ಮಂದಿ ನಾಪತ್ತೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.